Site icon Vistara News

Theft Case : ಕಳ್ಳತನಕ್ಕೆ ದೇವರೇ ಪಾರ್ಟ್ನರ್;‌ ಕದ್ದ ಚಿನ್ನದಲ್ಲಿ ಮಲೆ ಮಹದೇಶ್ವರನಿಗೂ ಪಾಲು

theft case

ಬೆಂಗಳೂರು: ಅಕ್ಕ-ಪಕ್ಕದವರು, ನೆರೆ ಮನೆಯವರು ಹತ್ತಿರದ ನೆಟ್ಟರು ಎನ್ನುವ ಮಾತಿದೆ. ಆದರೆ ಅದೇ ನೆರೆಯವರು ಕಳ್ಳತನಕ್ಕೆ ಇಳಿದು ಜೈಲುಪಾಲಾಗಿದ್ದಾರೆ. ಇನ್ನೂ ಕಳ್ಳತನಕ್ಕೆ (Theft Case) ದೇವರನ್ನೇ ಪಾರ್ಟ್ನರ್ ಮಾಡಿಕೊಂಡಿದ್ದ ಈ ಖದೀಮರು, ಪೊಲೀಸರಿಗೆ ಸಿಗಬಾರದೆಂದು‌ ಕದ್ದ ಹಣ-ಚಿನ್ನಾಭರಣದಲ್ಲಿ ಮಲೆ ಮಹದೇಶ್ವರನಿಗೂ (Male Mahadeshwara Temple) ಪಾಲು ನೀಡುತ್ತಿದ್ದರು. ಕಿರಣ್, ಆನಂದ್, ನಾನಿ ಬಂಧಿತ ಆರೋಪಿಗಳು.

ನೆರೆ ಮನೆಗೆ ಬೀಗ ಹಾಕಿದ್ದು ಕಂಡರೆ ಸಾಕು, ಆ ದಿನವೇ ನಕಲಿ ಕೀಯೊಂದಿಗೆ ಹಾಜರಾಗುತ್ತಿದ್ದರು. ಹಗಲು ಹೊತ್ತು ಮನೆಯ ಸುತ್ತ-ಮುತ್ತ ಓಡಾಡಿ ಪ್ಲ್ಯಾನ್‌ ಮಾಡುತ್ತಿದ್ದ ಈ ಕಳ್ಳರು ಎಲ್ಲರೂ ನಿದ್ದೆಗೆ ಜಾರಿದಾಗ ಮಧ್ಯರಾತ್ರಿ ಕಾರ್ಯಾಚರಣೆಗೆ ಇಳಿಯುತ್ತಿದ್ದರು.

ಯಾರಿಗೂ ತಿಳಿಯದಂತೆ ನಕಲಿ ಕೀ ಬಳಸಿ ಮನೆಯೊಳಗೆ ನುಗ್ಗುತ್ತಿದ್ದ ಈ ಕಳ್ಳರು ಹಣ ಹಾಗೂ ಚಿನ್ನಾಭರಣ ಎಗರಿಸಿ ಎಸ್ಕೇಪ್‌ ಆಗುತ್ತಿದ್ದರು. ಹೀಗೆ ಕಳೆದ ಮಾರ್ಚ್ 29 ರಂದು ಮನೆ ಕಳವು ಮಾಡಿದ್ದರು. ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿರುವ ಉಮಾ ಎಂಬುವವರು ಮನೆಯಲ್ಲಿ ಕಳವು ಮಾಡಿದ್ದರು. ಉಮಾ ಮನೆಯಲ್ಲಿ ಇಲ್ಲದೆ ಇದ್ದಾಗ, ನಕಲಿ ಕೀ ಬಳಸಿ 6 ಲಕ್ಷ ನಗದು ಹಾಗೂ 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದಿದ್ದರು.

ಮಲೆ ಮಹದೇಶ್ವರನಿಗೆ ತಪ್ಪು ಕಾಣಿಕೆ

ಚಿನ್ನಾಭರಣ ಕದ್ದು ಮಲೆ ಮಹದೇಶ್ವರನಿಗೆ ತಪ್ಪು ಕಾಣಿಕೆಯನ್ನು ನೀಡುತ್ತಿದ್ದರು. ನೆರೆಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ದೋಚಿದ ಈ ಮೂವರು ಕದ್ದ ಹಣದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಹುಂಡಿಗೆ ಹಣ ಹಾಕಿದ್ದರು. ಕಳವು ಪ್ರಕರಣ ಸಂಬಂಧ ಮೂವರು ಆರೋಪಿಗಳಾದ ಕಿರಣ್, ಆನಂದ್, ನಾನಿ ಎಂಬುವವರನ್ನು ಬಂಧಿಸಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಉಮಾ ಅವರ ನೆರೆ ಮನೆಯ ನಿವಾಸಿಗಳಾಗಿದ್ದರು ಎಂದು ತಿಳಿದು ಬಂದಿದೆ. ಸದ್ಯ ಕೆ.ಜಿ.ನಗರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Drowned in water : ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಬಾಲಕ ನೀರಲ್ಲಿ ಮುಳುಗಿ ಸಾವು

ಆಂಧ್ರದಿಂದ ಬಂದು ಕರ್ನಾಟಕದಲ್ಲಿ ಮೊಬೈಲ್‌ ಕಳ್ಳತನ

ಆಂಧ್ರದಿಂದ ಬಸ್‌ ಹತ್ತಿ ಬರುವುದು, ಮೊಬೈಲ್‌ ಕಳ್ಳತನ ಮಾಡಿ ಎಸ್ಕೇಪ್‌ ಆಗುತ್ತಿದ್ದ ಕುಖ್ಯಾತ ಮೊಬೈಲ್ ಕಳ್ಳರ ಗ್ಯಾಂಗ್ ಬಂಧನವಾಗಿದೆ. ರವಿತೇಜ, ವೆಂಕಟೇಶ್, ಬಾಲರಾಜ್, ಪೆದ್ದರಾಜ್, ರಮೇಶ್ ಹಾಗೂ ಸಾಯಿಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ವೈಟ್‌ ಫೀಲ್ಡ್‌ ಪೊಲೀಸರು ಆರೋಪಿಗಳನ್ನು ಬಂಧಿಸಿ, 30 ಲಕ್ಷ ರೂ. ಮೌಲ್ಯದ 107 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಸ್ಸಿನಲ್ಲಿ ಪ್ರಯಾಣಿಸುವವರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈ ಗ್ಯಾಂಗ್‌ ಬೆಂಗಳೂರಿನಲ್ಲಿ 10 ದಿನ ಕಳ್ಳತನ ಮಾಡಿ ಆಂಧ್ರಕ್ಕೆ ಎಸ್ಕೇಪ್‌ ಆಗುತ್ತಿದ್ದರು. ಕದ್ದ ಮೊಬೈಲ್‌ಗಳನ್ನು ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದರು.

ನಿವೃತ್ತ ಎಸ್‌ಪಿ ಮನೆಯನ್ನೆ ದೋಚಿದ ಕಳ್ಳರು

ನಿವೃತ್ತ ಎಸ್‌ಪಿ ಮನೆಗೆ ಕನ್ನ ಹಾಕಿ ಚಿನ್ನಾಭರಣ, ಹಣವನ್ನು ದೋಚಿದ ಆರೋಪಿಗಳನ್ನು ರಾಜ್ ಗೋಪಾಲ್ ನಗರ ಪೊಲೀಸರು ಖೆಡ್ಡಾಕ್ಕೆ ಕೇಡವಿದ್ದಾರೆ. ಮನೆ ಕಳ್ಳತನ ಮಾಡುತ್ತಿದ್ದ ಮಣಿಕಂಠ ಅಲಿಯಾಸ್‌ ಕಳ್ಳಮಣಿ, ದೀಕ್ಷಿತ್, ಅಜಯ್, ಕೀರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 470 ಗ್ರಾಂ‌.ಚಿನ್ನಾಭರಣ, 500 ಗ್ರಾಂ ಬೆಳ್ಳಿ, 50 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version