ಬೆಂಗಳೂರು: ಸ್ಲೀಪರ್ ಬಸ್‌ನಲ್ಲಿ ಮೈಮರೆತು ನಿದ್ರೆ ಮಾಡುವ ಮುನ್ನ ಎಚ್ಚರವಾಗಿ ಇರಿ. ಯಾಕೆಂದರೆ ನಿದ್ರೆಗೆ ಜಾರಿದ್ದ ಟೆಕ್ಕಿಯೊಬ್ಬರ 70 ಸಾವಿರ ಮೌಲ್ಯದ ಲ್ಯಾಪ್ ಟಾಪ್ ಕದ್ದ ಖದೀಮನೊಬ್ಬ (Theft Case) ಕಾಲ್ಕಿತ್ತಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಬಸ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೆನೈನಿಂದ ಎಲೆಕ್ಟ್ರಾನಿಕ್ ಸಿಟಿ ಬರುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಕಳ್ಳತನ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಟೆಕ್ಕಿ ವಿಘ್ನೇಶ್ ಕುಮಾರ್ ದೂರು ನೀಡಿದ್ದಾರೆ. ಎಸ್.ಬಿ.ಎಸ್ ಟ್ರಾವೆಲ್ಸ್‌ನಲ್ಲಿ ಕಳೆದ ಆಗಸ್ಟ್ 16ರಂದು ವಿಘ್ನೇಶ್ ಚೆನೈನಿಂದ ಬೆಂಗಳೂರಿಗೆ ಬರುತ್ತಿದ್ದರು. ಸುಮಾರು ಬೆಳಗಿನ ಜಾವ ಮೂರು ಗಂಟೆಗೆ ವಿಘ್ನೇಶ್ ಗಾಢ ನಿದ್ರೆಗೆ ಜಾರಿದ್ದರು. ಇದೆಲ್ಲವನ್ನೂ ಸೂಕ್ಷವಾಗಿ ಗಮನಿಸಿದ್ದ ಅಸಾಮಿಯೊಬ್ಬ ನಿದ್ರೆಗೆ ಜಾರಿದ್ದೆ ತಡ ಲ್ಯಾಪ್ ಟಾಪ್ ಬ್ಯಾಗ್ ಎಗರಿಸಿದ್ದಾನೆ.
ಬೆಳಗ್ಗೆ ಎದ್ದು ನೋಡಿದಾಗ ಲ್ಯಾಬ್ ಟಾಪ್ ಇಟ್ಟಿದ್ದ ಬ್ಯಾಗ್ ಮಾಯವಾಗಿತ್ತು. ಬಸ್ ಸಿಬ್ಬಂದಿ ಗಮನಕ್ಕೆ ತಂದಾಗ ಸಿಸಿಟಿವಿ ಚೆಕ್ ಮಾಡಿದಾಗ ವ್ಯಕ್ತಿಯೊಬ್ಬನ ಕೈಚಳಕ ಬಯಲಾಗಿದೆ. ಲ್ಯಾಪ್ ಟಾಪ್ ಬ್ಯಾಗ್ ಕದ್ದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಘ್ನೇಶ್ ಕೂಡಲೇ ಪೊಲೀಸರಿಗೆ ಹಾಗೂ ಬಸ್ ಹೆಡ್ ಆಫೀಸ್‌ಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿದ ಒಂದು ತಿಂಗಳು ಕಳೆದರೂ ಕಳ್ಳ ಮಾತ್ರ ಸಿಕ್ಕಿಲ್ಲ. ಕಳ್ಳನ ಹುಡುಕಾಟದಲ್ಲಿ ಯಾವುದೇ ಕ್ರಮ ಆಗಿಲ್ಲ ಅಂತ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ