Site icon Vistara News

ಕಳವಿಗೆ ಬಂದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಳ್ಳ!

hanging

ಬೆಂಗಳೂರು: ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿ ಅದೇ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಪ್ರಕರಣ ಬೆಂಗಳೂರಿನ ಇಂದಿರಾನಗರದಿಂದ ವರದಿಯಾಗಿದೆ.

ಕಳ್ಳತನ ಮಾಡಲು ಬಂದಿದ್ದ ಈ ವ್ಯಕ್ತಿ ದೇವರ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮನೆಯವರು ಪ್ರವಾಸ ಹೋಗಿದ್ದರಿಂದ ಯಾರೂ ಇರಲಿಲ್ಲ.

ಯುರೋಪ್ ಪ್ರವಾಸಕ್ಕೆ ತೆರಳಿದ್ದ ಮನೆಯವರು ಟೂರ್ ಮುಗಿಸಿ ಆಗತಾನೆ ಮನೆಗೆ ವಾಪಸಾಗಿದ್ದರು. ಈ ವೇಳೆ ಮನೆಯ ಒಳಗೆ ವ್ಯಕ್ತಿ ಇರುವ ಬಗ್ಗೆ ಗುಮಾನಿ ಮೂಡಿದ್ದು, ದೇವರ ಮನೆ ಕಿಟಕಿ ತೆರೆದು ನೋಡಿದಾಗ ವ್ಯಕ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯವರು ಕೂಡಲೇ ಇಂದಿರಾನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿ ದಿಲೀಪ್ ಕುಮಾರ್ ಎಂಬುದು ಪತ್ತೆಯಾಗಿದೆ.

ಅಸ್ಸಾಂ ಮೂಲದ ಮೃತ ದಿಲೀಪ್ ಕುಮಾರ್ ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾಗಿದ್ದಾನೆ. ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Exit mobile version