ಬೆಂಗಳೂರು: ಇತ್ತೀಚೆಗೆ ಟೆರೇಸ್ ಗಾರ್ಡನ್ ಹಾಗೂ ಹೋಂ ಗಾರ್ಡ್‌ನಿಂಗ್ ಮಾಡುವುದು ಮನೆಯ ಮಹಿಳೆಯರಿಗೆ ಹವ್ಯಾಸವಾಗಿದೆ. ದುಬಾರಿ ಪಾಟ್ ತಂದು ಇಷ್ಟದ ಗಿಡಗಳನ್ನು ಬೆಳೆಸುವುದು, ಮನೆಯ ಒಳಹೊರೆಗೆ ಅಲಂಕಾರ ಮಾಡುವುದು ಉಂಟು. ಇಷ್ಟಪಟ್ಟು ಮನೆಯ ಮುಂದಿಟ್ಟಿರುವ ಹೂ ಕುಂಡಗಳು ಕತ್ತಲು ಕವಿದು ಬೆಳಗಾಗುವಷ್ಟರಲ್ಲಿ ಮಾಯವಾಗುತ್ತಿರುವ ದೂರು ಬೆಂಗಳೂರಿನಲ್ಲಿ ಬೆಳಕಿಗೆ ಬರುತ್ತಿವೆ.
ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಈ ಕಳ್ಳರು ಹೂ ಕುಂಡಗಳನ್ನು ಕದಿಯುತ್ತಾರೆ. ತಾವು ಧರಿಸುವ ಟೀ ಶರ್ಟ್‌ನಲ್ಲೇ ಮುಖ ಮುಚ್ಚಕೊಂಡು ಬೈಕ್‌ನಲ್ಲಿ ಬರುವ ಈ ಕಳ್ಳರ ಕೈಚಳಲ ಈಗ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ | ಕಿಮ್ಸ್ ಮಗು ಕಳ್ಳತನ ಪ್ರಕರಣ, ತಾಯಿಯೇ ವಿಲನ್!
ಮನೆ ಮುಂದೆ ಅಥವಾ ಅಂಗಡಿಗಳ ಮುಂದೆ ಇಟ್ಟಿರುವ ಹೂ ಕುಂಡಗಳನ್ನು ಕಂಡರೆ ಸಾಕು, ನಿಶಾಚರಿಯಂತೆ ರಾತ್ರಿ ವೇಳೆ ಬರುವ ಈ ಖದೀಮರು ಹೂ ಕುಂಡ ಕದ್ದು ಹೋಗುತ್ತಿದ್ದಾರೆ. ಇಂತಹ ಅನೇಕ ಪ್ರಕರಣಗಳು ಪ್ರದೇಶದಲ್ಲಿ ನಡೆದಿದ್ದರೂ, ದೂರು ದಾಖಲಾದರೂ ಗಂಭೀರ ತನಿಖೆ ನಡೆಯುತ್ತಿಲ್ಲ ಎಂಬುದನ್ನೆ ಅವಕಾಶವಾಗಿಸಿಕೊಂಡ ಕಳ್ಳರು, ಕೃತ್ಯವನ್ನು ಮುಂದುವರಿಸಿದ್ದಾರೆ.
ಇತ್ತೀಚೆಗೆ ದಾಖಲಾದ ಸಿಸಿಟಿವಿ ದೃಶ್ಯದಲ್ಲಿ ಕೃತ್ಯ ಬಯಲಾಗಿದೆ. ಕೆ. ಆರ್. ಪುರಂ ಬಳಿ ಇರುವ ಲೋಚನಾ ಐ ಕೇರ್ ಸೆಂಟರ್ ಮುಂದೆ ಇಟ್ಟಿರುವ ಪಾಟ್‌ಗಳನ್ನು ಇವರು ಕದ್ದಿದ್ದಾರೆ. ಒಂದೇ ಬೈಕ್‌ನಲ್ಲಿ ನಾಲ್ವರು ಬಂದಿದ್ದಾರೆ. ಸಿಸಿಟಿವಿಯಲ್ಲಿ ತಮ್ಮ ಮುಖ ದಾಖಲಾಗದಂತೆ ಟೀ ಶರ್ಟ್‌ನಿಂದ ಮುಖ ಮುಚ್ಚಿಕೊಂಡು ಪಾಟ್ ಕದಿಯುವ ದೃಶ್ಯ ಸೆರೆಯಾಗಿದೆ.
ಮೂರು ಮೂಟೆ ಚಪ್ಪಲಿಗಳನ್ನು ಕದ್ದ ಕಳ್ಳರು
ಕೆ.ಆರ್.ಪುರನಲ್ಲಿ ಹೂ ಕುಂಡ ಕಳ್ಳರ ಕಾಟ ಒಂದಾದರೆ ಮತ್ತೊಂದು ಕಡೆ ಚಪ್ಪಲಿ ಕಳ್ಳರ ಹಾವಳಿಯೂ ಬೆಂಗಳೂರಿನಲ್ಲಿ ಹೆಚ್ಚಿದೆ. ಮನೆ ಮುಂದೆ ಬಿಟ್ಟ ಪಾದರಕ್ಷೆಗಳನ್ನೂ ಬಿಡದ ಖದೀಮರು, ಗೋಣಿಚೀಲದಲ್ಲಿ ಚಪ್ಪಲಿ, ಶೂಗಳನ್ನು ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ. ಜೂನ್ 30ರ ತಡರಾತ್ರಿ 3 ಗಂಟೆ ಸುಮಾರಿಗೆ 15 ಕಡೆ ಚಪ್ಪಲಿ ಕಳ್ಳತನ ನಡೆದಿದೆ. ಕೆ. ಆರ್. ಪುರಂನ ಓಂ ಶಕ್ತಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಮೂವರು ಕಿಡಿಗೇಡಿಗಳು ಮೂರು ಮೂಟೆ ಚಪ್ಪಲಿಗಳನ್ನು ಕದ್ದೊಯಿದ್ದಾರೆ. ಈ ದೃಶ್ಯಗಳೂ ಸಿಸಿಟಿವಿಯಲ್ಲಿ ದಾಖಲಾಗಿವೆ.
ಇದೀಗ ಕೆ.ಆರ್. ಪುರಂ ಪೊಲೀಸರಿಗೆ ಹೋ ಕುಂಡ ಹಾಗೂ ಚಪ್ಪಲಿ ಕಳ್ಳರನ್ನು ಹಿಡಿಯುವ ಸವಾಲು ಎದುರಾಗಿದೆ.
ಇದನ್ನೂ ಓದಿ | ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು