Site icon Vistara News

Prakash Raj: ಯುಟ್ಯೂಬ್‌ ವಾಹಿನಿ ಮೇಲೆ ನಟ ಪ್ರಕಾಶ್‌ ರಾಜ್‌ ಜೀವ ಬೆದರಿಕೆ ದೂರು

prakash raj

ಬೆಂಗಳೂರು: ಖಾಸಗಿ ಯೂಟ್ಯೂಬ್ ವಾಹಿನಿಯೊಂದರ (Youtube channel) ವಿರುದ್ಧ ಖ್ಯಾತ ನಟ ಪ್ರಕಾಶ್ ರಾಜ್ (Actor Prakash Raj) ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜೀವಕ್ಕೆ ಅಪಾಯ ಒಡ್ಡುವ ಬೆದರಿಕೆ (threat to life) ಹಾಕಿರುವ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 14ರಂದು ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆರೋಪ.

ಯೂಟ್ಯೂಬ್‌ನಲ್ಲಿ ಈ ವಾಹಿನಿಯು ಅಪ್‌ಲೋಡ್ ಮಾಡಿರೋ ಎರಡು ವಿಡಿಯೋಗಳಲ್ಲೂ ಸಹ ಜೀವ ಬೆದರಿಕೆ ಹಾಕುವ ಅಂಶ ಇದೆ ಎಂದು ಆರೋಪಿಸಲಾಗಿದೆ. ಪ್ರಕಾಶ್ ರಾಜ್ ಮತ್ತು ಕುಟುಂಬದವರಿಗೂ ಜೀವ ಬೆದರಿಕೆ ಹಾಕಲಾಗಿದೆ. ಯೂಟ್ಯೂಬ್ ವಾಹಿ‌ನಿ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೂರು ಕೊಡಲಾಗಿದೆ. ಪ್ರಕಾಶ್ ರಾಜ್ ದೂರು ಹಿನ್ನೆಲೆಯಲ್ಲಿ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚೆಗೆ ಪ್ರಕಾಶ್‌ ರಾಜ್‌ ತಮ್ಮ ವಿವಾದಾತ್ಮಕ ಟ್ವೀಟ್‌ಗಳ ಮೂಲಕ ಸುದ್ದಿಯಲ್ಲಿದ್ದಾರೆ. ಹಿಂದೆ ಚಂದ್ರಯಾನ-3ರ ಸಂದರ್ಭದಲ್ಲಿ ಪ್ರಕಾಶ್‌ ರೈ ತಮ್ಮ ಎಕ್ಸ್‌ (ಟ್ವೀಟ್)‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಒಂದು ವ್ಯಂಗ್ಯಚಿತ್ರ ಬಿಜೆಪಿಗರಿಂದ ಕಟು ಟೀಕೆಗೆ ಗುರಿಯಾಗಿತ್ತು. ನಂತರ ಉದಯನಿಧಿ ಸ್ಟಾಲಿನ್‌ ಅವರು ನೀಡಿದ ʼಸನಾತನ ಧರ್ಮʼದ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡು ಪ್ರಕಾಶ್‌ ರಾಜ್‌ ಸುದ್ದಿಯಾಗಿದ್ದರು.

ಇದನ್ನೂ ಓದಿ: Prakash Raj: ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ; ಮತ್ತೊಮ್ಮೆ ಸಮರ್ಥಿಸಿಕೊಂಡ ಪ್ರಕಾಶ್‌ ರಾಜ್‌!

Exit mobile version