Prakash Raj: ಯುಟ್ಯೂಬ್‌ ವಾಹಿನಿ ಮೇಲೆ ನಟ ಪ್ರಕಾಶ್‌ ರಾಜ್‌ ಜೀವ ಬೆದರಿಕೆ ದೂರು Vistara News
Connect with us

ಕ್ರೈಂ

Prakash Raj: ಯುಟ್ಯೂಬ್‌ ವಾಹಿನಿ ಮೇಲೆ ನಟ ಪ್ರಕಾಶ್‌ ರಾಜ್‌ ಜೀವ ಬೆದರಿಕೆ ದೂರು

ಯೂಟ್ಯೂಬ್‌ನಲ್ಲಿ ಈ ವಾಹಿನಿಯು ಅಪ್‌ಲೋಡ್ ಮಾಡಿರೋ ಎರಡು ವಿಡಿಯೋಗಳಲ್ಲೂ ಸಹ ಜೀವ ಬೆದರಿಕೆ ಹಾಕುವ ಅಂಶ ಇದೆ ಎಂದು ಪ್ರಕಾಶ್‌ ರಾಜ್‌ (Prakash Raj) ಆರೋಪಿಸಿದ್ದಾರೆ.

VISTARANEWS.COM


on

prakash raj
Koo

ಬೆಂಗಳೂರು: ಖಾಸಗಿ ಯೂಟ್ಯೂಬ್ ವಾಹಿನಿಯೊಂದರ (Youtube channel) ವಿರುದ್ಧ ಖ್ಯಾತ ನಟ ಪ್ರಕಾಶ್ ರಾಜ್ (Actor Prakash Raj) ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜೀವಕ್ಕೆ ಅಪಾಯ ಒಡ್ಡುವ ಬೆದರಿಕೆ (threat to life) ಹಾಕಿರುವ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 14ರಂದು ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆರೋಪ.

ಯೂಟ್ಯೂಬ್‌ನಲ್ಲಿ ಈ ವಾಹಿನಿಯು ಅಪ್‌ಲೋಡ್ ಮಾಡಿರೋ ಎರಡು ವಿಡಿಯೋಗಳಲ್ಲೂ ಸಹ ಜೀವ ಬೆದರಿಕೆ ಹಾಕುವ ಅಂಶ ಇದೆ ಎಂದು ಆರೋಪಿಸಲಾಗಿದೆ. ಪ್ರಕಾಶ್ ರಾಜ್ ಮತ್ತು ಕುಟುಂಬದವರಿಗೂ ಜೀವ ಬೆದರಿಕೆ ಹಾಕಲಾಗಿದೆ. ಯೂಟ್ಯೂಬ್ ವಾಹಿ‌ನಿ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೂರು ಕೊಡಲಾಗಿದೆ. ಪ್ರಕಾಶ್ ರಾಜ್ ದೂರು ಹಿನ್ನೆಲೆಯಲ್ಲಿ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚೆಗೆ ಪ್ರಕಾಶ್‌ ರಾಜ್‌ ತಮ್ಮ ವಿವಾದಾತ್ಮಕ ಟ್ವೀಟ್‌ಗಳ ಮೂಲಕ ಸುದ್ದಿಯಲ್ಲಿದ್ದಾರೆ. ಹಿಂದೆ ಚಂದ್ರಯಾನ-3ರ ಸಂದರ್ಭದಲ್ಲಿ ಪ್ರಕಾಶ್‌ ರೈ ತಮ್ಮ ಎಕ್ಸ್‌ (ಟ್ವೀಟ್)‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಒಂದು ವ್ಯಂಗ್ಯಚಿತ್ರ ಬಿಜೆಪಿಗರಿಂದ ಕಟು ಟೀಕೆಗೆ ಗುರಿಯಾಗಿತ್ತು. ನಂತರ ಉದಯನಿಧಿ ಸ್ಟಾಲಿನ್‌ ಅವರು ನೀಡಿದ ʼಸನಾತನ ಧರ್ಮʼದ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡು ಪ್ರಕಾಶ್‌ ರಾಜ್‌ ಸುದ್ದಿಯಾಗಿದ್ದರು.

ಇದನ್ನೂ ಓದಿ: Prakash Raj: ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ; ಮತ್ತೊಮ್ಮೆ ಸಮರ್ಥಿಸಿಕೊಂಡ ಪ್ರಕಾಶ್‌ ರಾಜ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Vijayanagara News: ಗೋಡೆ ಕಲ್ಲು ಬಿದ್ದು ಮಗು ಸಾವು; ಎಮ್ಮೆ ಗುದ್ದಿದ್ದರಿಂದ ನಡೆಯಿತು ಅನಾಹುತ!

Vijayanagara News: ಎಮ್ಮೆಯೊಂದು ಬೆದರಿ ಗುದ್ದಿದ ಹಿನ್ನೆಲೆಯಲ್ಲಿ ಗೋಡೆ ಕಲ್ಲು ಮುರಿದು ಮಗುವಿನ ಮೇಲೆ ಬಿದ್ದು ದುರಂತ ನಡೆದಿದೆ.

VISTARANEWS.COM


on

Edited by

Koo

ವಿಜಯನಗರ: ಮನೆಯ ಗೋಡೆ ಕಲ್ಲು ಬಿದ್ದು ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ (Vijayanagara News) ಕೂಡ್ಲಿಗಿ ತಾಲೂಕಿನ ರಾಯಪುರದಲ್ಲಿ ನಡೆದಿದೆ. ಎಮ್ಮೆಯೊಂದು ಬೆದರಿ ಗುದ್ದಿದ್ದರಿಂದ ಗೋಡೆ ಕಲ್ಲು ಮುರಿದು ಬಿದ್ದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಮಲಗಿದ್ದ ಮಗು ಮೃತಪಟ್ಟಿದೆ.

ಶಾಂತಕುಮಾರ್, ಮಲ್ಲೇಶ್ವರಿ ದಂಪತಿಯ ಪುತ್ರ ತೇಜಸ್ (4) ಎಂಬಾತ ಮೃತ ಬಾಲಕ. ಮನೆ ಪಕ್ಕದಲ್ಲಿ ತೆಂಗಿನ ಮರಕ್ಕೆ ಎಮ್ಮೆಯನ್ನು ಕಟ್ಟಿ ಹಾಕಲಾಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಎಮ್ಮೆ ಬೆದರಿ ಚಪ್ಪಡಿ ಕಲ್ಲಿನ ಮನೆಗೆ ಡಿಕ್ಕಿ ಹೊಡೆದಿದೆ. ಕಡಪ ಕಲ್ಲಾಗಿದ್ದರಿಂದ ಗೋಡೆ ಕಲ್ಲು ಮುರಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾನೆ.

ಸಚಿವ ಜಮೀರ್ ಅಹ್ಮದ್ ಸಾಂತ್ವನ

ಘಟನಾ ಸ್ಥಳಕ್ಕೆ ಸಚಿವ ಜಮೀರ್ ಅಹ್ಮದ್, ಕೂಡ್ಲಿಗಿ ಶಾಸಕ ಶ್ರೀನಿವಾಸ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಸಚಿವ ಜಮೀರ್ ಅಹ್ಮದ್ ಅವರು 2 ಲಕ್ಷ ರೂ. ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ. ಜತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ನೆರವು ಕೊಡಿಸುವುದಾಗಿ ತಿಳಿಸಿದ ಸಚಿವರು, ರಾಜೀವ್ ಗಾಂಧಿ ವಸತಿ ನಿಗಮದಿಂದ ಅಂಬೇಡ್ಕರ್ ಆವಾಸ್ ಯೋಜನೆಯಡಿ ಬಾಲಕನ ಕುಟುಂಬಸ್ಥರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದರು.

ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!

ರಾಯಪುರ ಗಣಿ ಬಾಧಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಗ್ರಾಮದಲ್ಲಿ ಸುಸಜ್ಜಿತ ಮನೆಯಿಲ್ಲದರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಸಚಿವರು ಭರವಸೆ ನೀಡಿದರು.

ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು

ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).

ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

ಕರ್ನಾಟಕ

Bangalore Bandh : ಶುಕ್ರವಾರ ಇಡೀ ಕರ್ನಾಟಕ ಬಂದ್‌; ಸೆಕ್ಷನ್‌ 144 ಹಾಕಿದ್ರೆ ಹುಷಾರ್‌ ಎಂದು ಗುಡುಗಿದ ವಾಟಾಳ್‌

Bangalore News : ಸೆ. 29ರಂದು ನಡೆಯಲಿರುವ ಕರ್ನಾಟಕ ಬಂದ್‌ ವೇಳೆ ನಿಷೇಧಾಜ್ಞೆ ಹಾಕುವಂತಿಲ್ಲ ಎಂದು ವಾಟಾಳ್‌ ನಾಗರಾಜ್‌ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

VISTARANEWS.COM


on

Edited by

Vataka Nagaraj Karnataka Bandh
Koo

ಬೆಂಗಳೂರು: ಮಂಗಳವಾರ ನಡೆದ ಬೆಂಗಳೂರು ಬಂದ್‌ನ್ನು (Bangalore Bandh) ಸರ್ಕಾರ ಪೊಲೀಸ್‌ ಬಲ ಪ್ರಯೋಗದ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಆದರೆ ಸೆಪ್ಟೆಂಬರ್‌ 29ರಂದು ನಡೆಯಲಿರುವ ಕನ್ನಡದ ಒಕ್ಕೂಟ ಕರೆ ನೀಡಿರುವ ಅಖಿಲ ಕರ್ನಾಟಕ ಬಂದ್‌ನ್ನು (Karnataka Bandh) ತಡೆಯಲು ಯತ್ನಿಸಿದರೆ ಹುಷಾರ್‌ ಎಂದು ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ (Vatal Nagaraj) ಸರ್ಕಾರವನ್ನು ಎಚ್ಚರಿಸಿದ್ದಾರೆ.

ಅವರು ಮಂಗಳವಾರ ನಡೆದ ಬೆಂಗಳೂರು ಬಂದ್‌ ನಡುವೆಯೇ ತಮ್ಮ ತಂಡವನ್ನು ಕೂಡಿಕೊಂಡು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಇದೂ ಸೇರಿದಂತೆ ಹೋರಾಟಗಾರರ ಹಕ್ಕನ್ನು ಕಸಿಯಲಾಗಿದೆ ಎಂದು ಅವರು ಸಂಜೆ ಆಪಾದಿಸಿದರು.

ರಾಜ್ಯ ಸರ್ಕಾರ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ವಿಧಿಸಿ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಮಾರ್ಗ ಕಂಡುಕೊಂಡಿದೆ. ಆದರೆ, ಶುಕ್ರವಾರ ಈ ತಂತ್ರವನ್ನು ಪ್ರಯೋಗಿಸಿದರೆ ಎಚ್ಚರಿಕೆ ಎಂದು ಹೇಳಿದರು ವಾಟಾಳ್‌ ನಾಗರಾಜ್‌

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿರುದ್ಧ ಸೆ. 27ರ ಬುಧವಾರ ಕನ್ನಡ ಪರ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಪ್ರತಿಭಟನೆ ನಡೆಸಲಿವೆ. ಶುಕ್ರವಾರ ಸಂಪೂರ್ಣ ಕರ್ನಾಟಕ ಬಂದ್‌ ಆಗಲಿದೆ ಎಂದು ಅವರು ಹೇಳಿದರು. ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರರ ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್ ಸೇರಿದಂತೆ 50ಕ್ಕೂ ಅಧಿಕ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದೆ.

ಇದನ್ನೂ ಓದಿ: Bangalore Bandh : ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ

ಶುಕ್ರವಾರ ಏನಿರುತ್ತೆ ಏನಿರಲ್ಲ: ವಾಟಾಳ್‌ ಕೊಟ್ಟ ಲಿಸ್ಟ್‌

-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್, ಓಲಾ, ಉಬರ್, ಟ್ಯಾಕ್ಸಿ, ಆಟೋ ಗೂಡ್ಸ್ ವಾಹನ ಸೇವೆ ಇರುವುದಿಲ್ಲ
-ಶುಕ್ರವಾರ ಮಾಲ್, ಹೋಟೆಲ್, ರೆಸ್ಟೊರೆಂಟ್, ಮಾಲ್, ಮಲ್ಟಿಪ್ಲೆಕ್ಸ್
-ಯಶವಂತಪುರ, ದಾಸನಪುರ ಎಪಿಎಂಸಿ ಮಾರುಕಟ್ಟೆ, ಕೆ.ಆರ್‌ ಮಾರ್ಕೆಟ್‌ ಬಂದ್‌
– ಅಂಗಡಿ ಮಳಿಗೆಗಳು, ಕೈಗಾರಿಕೆಗಳು ಬಂದ್.

ವಾಟಾಳ್‌ ನಾಗರಾಜ್‌ ನೇತೃತ್ವದ ಬಂದ್‌ಗೆ ಮಂಗಳವಾರದ ಬಂದ್‌ಗೆ ಕರೆ ಕೊಟ್ಟ ಸಂಘಟನೆಗಳಲ್ಲದೆ ಹೋಟೆಲ್‌ ಅಸೋಸಿಯೇಷನ್‌, ಓಲಾ ಊಬರ್‌ ಚಾಲಕರ ಸಂಘಟನೆ, ಆದರ್ಶ ಆಟೋ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ ಬಂದ್ ಇನ್ನಷ್ಟು ಪ್ರಖವಾಗುವ ನಿರೀಕ್ಷೆ ಇದೆ. ಆದರೆ, ರಾಜ್ಯದ ಎಲ್ಲ ಭಾಗಗಳಲ್ಲಿ ಯಶಸ್ವಿಯಾಗುವುದು ಡೌಟ್‌. ಕರಾವಳಿ, ಉತ್ತರ ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಾವು ಅಷ್ಟಾಗಿ ತಟ್ಟುವುದಿಲ್ಲ. ಆದರೆ, ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಭಾಗದಲ್ಲಿ ಹೆಚ್ಚು ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹ

ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯದ ಸಂಸದರು ಸಂಪೂರ್ಣ ನಾಯಪತ್ತೆಯಾಗಿದ್ದಾರೆ. ಅವರಿಗೆ ಕಾವೇರಿ ನೀರು ಬೇಡ್ವಾ ಎಂದು ಕೇಳಿದರು. ಶುಕ್ರವಾರ ಸಂಪೂರ್ಣ ಬಂದ್‌ಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

Continue Reading

ಕರ್ನಾಟಕ

Bangalore Bandh : ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ

Bangalore bandh : ಬೆಂಗಳೂರು ಬಂದ್‌ ಯಶಸ್ವಿಯಾಗಿ ಮುಕ್ತಾಯವಾಗಿದೆ. ಎಲ್ಲ ವ್ಯವಸ್ಥೆಗಳು ಇದ್ದರೂ ಜನರೇ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಿದ್ದು ಕಂಡುಬಂತು.

VISTARANEWS.COM


on

Edited by

Bangalore Bandh KG Road
ಯಾವಾಗಲೂ ಗಿಜಿಗುಡುವ ಕೆ.ಜಿ ರಸ್ತೆ ಹೇಗಿತ್ತು ನೋಡಿ
Koo

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆ (Cauvery Water Dispute) ಮಾಡಲೇಬೇಕು ಎಂದು ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management authority) ಮತ್ತು ಅದು ಹೇಳಿದಂತೆ ನೀರು ಬಿಡುಗಡ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಕರೆ ನೀಡಿದ್ದ ಮಂಗಳವಾರದ (ಸೆ. 26) ಬೆಂಗಳೂರು ಬಂದ್‌ (Bangalore bandh) ಯಶಸ್ವಿಯಾಗಿದೆ. ಯಾವುದೇ ಗೊಂದಲ, ಗಲಾಟೆ, ಹಿಂಸಾತ್ಮಕ ಘಟನೆಗಳಿಲ್ಲದೆ ಅದು ಸಫಲತೆಯನ್ನು ಕಂಡಿದೆ. ಆದರೆ, ಇದು ಸರ್ಕಾರದ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆಯೇ ಕಾದು ನೋಡಬೇಕು.

ಈ ಬಂದ್‌ ನೂರಾರು ಸಾಮಾಜಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವ್ಯಾಪಾರಿಗಳು, ವಾಹನ ಮಾಲೀಕರೇ ಆದರೂ ಅಂತಿಮವಾಗಿ ಇದನ್ನು ಯಶಸ್ವಿಗೊಳಿಸಿದ್ದು ಜನ ಬೆಂಬಲ. ಯಾಕೆಂದರೆ, ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ ಇರುವುದರಿಂದ ಬೆಂಬಲ ನೀಡುವ ಸಂಘಟನೆಗಳಲ್ಲಿ ವಿಭಜನೆಯಾಗಿತ್ತು. ಕೆಲವರು ತಾವು ಈ ಬಂದ್‌ಗೆ ಬೆಂಬಲ ಕೊಡುವುದಿಲ್ಲ, ಸೆ. 29ರ ಬಂದ್‌ಗೆ ಬೆಂಬ ಕೊಡುವುದಾಗಿ ಪ್ರಕಟಿಸಿದ್ದರು. ಆದರೂ ಒಟ್ಟಾರೆ ಪರಿಣಾಮದಲ್ಲಿ ವ್ಯತ್ಯಾಸವಾಗಲಿಲ್ಲ. ಯಾಕೆಂದರೆ ಸಂಘಟನೆಗಳ ಹಂಗನ್ನು ಮೀರಿ ಜನರು ಈ ಬಂದ್‌ಗೆ ಮೌನ ಬೆಂಬಲವನ್ನು ಸೂಚಿಸಿದ್ದರು.

Bangalore Bandh protest
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಮುಂಜಾನೆಯಿಂದಲೇ ರಾಜಧಾನಿಯಲ್ಲಿ ಬಂದ್‌ನ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲಲ್ಲಿ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗೆ ಕರೆ ನೀಡಿದ ಸಂಘಟನೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕುರುಬೂರು ಶಾಂತ ಕುಮಾರ್‌ ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಅಲ್ಲಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಮಂಡಿಸಲಾಯಿತು. ಸರ್ಕಾರದ ಪರವಾಗಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮನವಿ ಸ್ವೀಕರಿಸಿದರು. ಈ ಭರವಸೆಗಳ ಈಡೇರಿಕೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿದೆ.

Metro station empty
ಮೆಟ್ರೋ ರೈಲಿಗೆ ಜನರೇ ಇಲ್ಲ

ಎಲ್ಲ ವ್ಯವಸ್ಥೆಗಳಿದ್ದರೂ ಜನರೇ ರಸ್ತೆಗೆ ಬಂದಿಲ್ಲ

ನಿಜವೆಂದರೆ, ರಾಜಧಾನಿಯಲ್ಲಿ ಬಂದ್‌ ಘೋಷಣೆಯಾಗಿದ್ದರೂ ಬಸ್‌, ಮೆಟ್ರೋ ರೈಲು, ಆಟೊಗಳು, ಓಲಾ, ಊಬರ್‌ ಟ್ಯಾಕ್ಸಿಗಳು, ಹೋಟೆಲ್‌ಗಳು ತೆರೆದಿದ್ದವು. ಆದರೆ, ಅದನ್ನು ಬಳಸುವ ಜನರೇ ಇರಲಿಲ್ಲ.

ಬಿಎಂಟಿಸಿ ಬಸ್‌ಗಳು ಓಡಾಡಿದರೂ ಖಾಲಿಯಾಗಿದ್ದವು. ಮೆಟ್ರೋ ರೈಲು ಬಹುಭಾಗ ಖಾಲಿಯಾಗಿಯೇ ಓಡಾಡಿತು. ಆಟೊಗಳಲ್ಲಿ ಹೋಗುವವರು ಕಡಿಮೆ ಇದ್ದರು. ರೆಸ್ಟೋರೆಂಟ್‌ಗಳಲ್ಲಿ ಜನ ಸಂದಣಿ ಇರಲಿಲ್ಲ. ಅಂದರೆ ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಜನರೇ ಮಂಗಳವಾರ ಕಾವೇರಿಗಾಗಿ ಒಂದು ದಿನ ಬಂದ್‌ ಎಂಬ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳಲ್ಲಿ ಜನ ಇರಲಿಲ್ಲ.

ಇದನ್ನೂ ಓದಿ: Bangalore Bandh : 13 ವಿಮಾನ ಸಂಚಾರ ಕ್ಯಾನ್ಸಲ್‌, ಮೆಟ್ರೋ ಫುಲ್‌ ಖಾಲಿ, ಬಿಎಂಟಿಸಿ ಬಸ್‌ಗಳಿವೆ, ಜನರೇ ಇಲ್ಲ

ವಿಶೇಷವೆಂದರೆ ಬೆಂಗಳೂರಿನಲ್ಲಿ ಮಂಗಳವಾರ ಬಂದ್‌ ನಡೆದೇ ನಡೆಯುತ್ತದೆ. ಅಲ್ಲಿ ಹೋಗಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂದು ವಿಮಾನ ಪ್ರಯಾಣಿಕರು ನಿರ್ಧಾರ ಮಾಡಿದ ಪರಿಣಾಮವಾಗಿ ಬೆಂಗಳೂರಿಗೆ ಮಂಗಳವಾರ ಬರಬೇಕಾಗಿದ್ದ 13 ವಿಮಾನಗಳ ಸಂಚಾರವೇ ರದ್ದಾಗಿತ್ತು.

Bangalore Bandh

ಶಾಲೆ, ಕಾಲೇಜು ಬಂದ್‌; ಮಾಲ್‌, ಥಿಯೇಟರ್‌ಗಳ ಬೆಂಬಲ

ಈ ನಡುವೆ, ಬಂದ್‌ ನಿಮಿತ್ತ ಬೆಂಗಳೂರಿನ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ಮಕ್ಕಳು ಮತ್ತು ಮನೆಯವರು ನಿರಾಳರಾಗಿದ್ದರು. ಇತ್ತ ದೊಡ್ಡ ದೊಡ್ಡ ಮಾಲ್‌ಗಳು ಬಂದ್‌ಗೆ ಬೆಂಬಲ ನೀಡಿದ್ದರು. ಚಿತ್ರೋದ್ಯಮದ ಬೆಂಬಲ ಇದ್ದಿದ್ದರಿಂದ ಸಿನಿಮಾ ಥಿಯೇಟರ್‌ಗಳು ಸಂಜೆವರೆಗೆ ಓಪನ್‌ ಆಗಲಿಲ್ಲ.

ಪೊಲೀಸ್‌ ಬಲ ಪ್ರಯೋಗದ ಆರೋಪ

ಇದರ ನಡುವೆ ಬಂದ್‌ನ್ನು ವಿಫಲಗೊಳಿಸಲು ಪೊಲೀಸ್‌ ಬಲ ಪ್ರಯೋಗ ಮಾಡಿದ ಆರೋಪ ಎದುರಾಗಿದೆ. ಬಲವಂತದ ಬಂದ್‌ಗೆ ಅವಕಾಶವಿಲ್ಲ, ಮೆರವಣಿಗೆ ನಡೆಸುವಂತಿಲ್ಲ, ಬಹಿರಂಗ ಪ್ರತಿಭಟನೆಗೆ ಅವಕಾಶವಿಲ್ಲ ಎಂಬ ನಿರ್ಬಂಧಗಳನ್ನು ಹಾಕಿದ ಪೊಲೀಸರು ಬಂದ್‌ನ ಮುನ್ನಾ ದಿನವೇ 1000ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು. ಇಷ್ಟೆಲ್ಲ ಮಾಡಿದರೂ ಬಂದ್‌ ಸಫಲವಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ಗಳು ಸಂಘಟನೆಗಳನ್ನು ಅಭಿನಂದಿಸಿವೆ.

Bangalore bandh protesters arrested

ಇನ್ನು ಸೆ. 29ರ ಬಂದ್‌. ಈಗ ಈ ಬಂದ್‌ ಮುಕ್ತಾಯವಾಗಿರುವಂತೆಯೇ ಸೆಪ್ಟೆಂಬರ್‌ 29ರ ಕರ್ನಾಟಕ ಬಂದ್‌ಗೆ ವೇದಿಕೆ ಸಿದ್ಧವಾಗಿದೆ. ಅಂದು ಪೂರ್ಣವಾಗಿ ಕರ್ನಾಟಕ ಬಂದ್‌ ಆಗಲಿದೆ ಎಂದಿದ್ದಾರೆ ವಾಟಾಳ್‌ ನಾಗರಾಜ್‌.

ಇದನ್ನೂ ಓದಿ: Bangalore Bandh: ಬೆಂಗಳೂರು ಬಂದ್‌ ಹತ್ತಿಕ್ಕಲು ಪೊಲೀಸ್‌ ಬಲ ಪ್ರಯೋಗ ನಡೆಯಿತೇ? ಕಮಿಷನರ್‌ ಹೇಳಿದ್ದೇನು?

Continue Reading

ಕರ್ನಾಟಕ

Belagavi News: ಹಣಕಾಸು ವಿಚಾರಕ್ಕೆ ಯೋಧನಿಂದಲೇ ಯೋಧನ ಮೇಲೆ ಗುಂಡಿನ ದಾಳಿ

Belagavi News: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಯೋಧ, ಮತ್ತೊಬ್ಬ ಯೋಧನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

VISTARANEWS.COM


on

Edited by

Soldier
Koo

ಬೆಳಗಾವಿ: ಹಣಕಾಸಿನ ವಿಚಾರಕ್ಕೆ ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಯೋಧನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ನಂಜುಂಡಿ

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಬಸಪ್ಪ ಮೈಲಪ್ಪ ಬಂಬರಗಾ (32) ಗಾಯಾಳು ಯೋಧ. ನಂಜುಂಡಿ ಲಕ್ಷ್ಮಣ ಬೂದಿಹಾಳ (32) ಗುಂಡಿನ ದಾಳಿಗೈದ ಆರೋಪಿ. ಇಬ್ಬರೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಣಕಾಸಿನ ವಿಚಾರಕ್ಕೆ ನಡುವೆ ಗಲಾಟೆಯಾಗಿದೆ. ಈ ವೇಳೆ ಬಸಪ್ಪ ಮೈಲಪ್ಪ ಬಂಬರಗಾ ಮೇಲೆ ನಂಜುಂಡಿ ಲಕ್ಷ್ಮಣ ಬೂದಿಹಾಳ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು!

ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು

ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).

ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!

ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಯುವಕರಿಂದ ಥಳಿತ

Assault Case

ಯಾದಗಿರಿ: ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಕಬಡ್ಡಿ ಪಂದ್ಯದ ವೇಳೆ ದೈಹಿಕ ಶಿಕ್ಷಕ ಔಟ್ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ, ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ. ಹೀಗಾಗಿ ಆತನ ಮೇಲೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಗಲಾಟೆ ಬಿಡಿಸಲು ಅಧಿಕಾರಿಗಳು, ಸಿಬ್ಬಂದಿ ಹರಸಾಹಸಪಟ್ಟರು.

Continue Reading
Advertisement
MLA BY Vijayendra
ಕರ್ನಾಟಕ3 hours ago

Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ

jai shankar
ದೇಶ4 hours ago

UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!

Raja Three yakshagana
ಕಲೆ/ಸಾಹಿತ್ಯ4 hours ago

Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ

What did they wrong, Why they are murdered asked Parents Of Manipur Teens
ದೇಶ4 hours ago

Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ

Vaidyanath Co-operative sugar factory
ದೇಶ5 hours ago

GST Evasion: ಜಿಎಸ್‌ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!

Dale stain
ಕ್ರಿಕೆಟ್5 hours ago

Rohit Sharma : ರೋಹಿತ್ ಶರ್ಮಾ ಪಾಲಿನ ಭಯಾನಕ ಬೌಲರ್ ಯಾರು ಗೊತ್ತೇ? ಅವರೇ ಹೇಳಿದ್ದಾರೆ ಕೇಳಿ

MLA Dr N T Srinivas drives the foot and mouth disease vaccination campaign at Kudligi
ವಿಜಯನಗರ6 hours ago

Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ

Death News Prajna Basavanyappa passed away
ಶಿವಮೊಗ್ಗ6 hours ago

Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ

ಕ್ರೈಂ6 hours ago

Vijayanagara News: ಗೋಡೆ ಕಲ್ಲು ಬಿದ್ದು ಮಗು ಸಾವು; ಎಮ್ಮೆ ಗುದ್ದಿದ್ದರಿಂದ ನಡೆಯಿತು ಅನಾಹುತ!

Top 10 news kannada
ಕ್ರೀಡೆ6 hours ago

VISTARA TOP 10 NEWS : ಕಾವೇರಿ ಹೋರಾಟಕ್ಕೆ ಸ್ವಯಂಪ್ರೇರಿತ ಬೆಂಬಲ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ ಮತ್ತಿತರ ದಿನದ ಪ್ರಮುಖ ಸುದ್ದಿಗಳು

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ23 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ1 day ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌