ಬೆಂಗಳೂರು: ಬೆಂಗಳೂರು ಮತ್ತು ಧಾರವಾಡದ ನಡುವೆ ಸಂಚರಿಸುವ ವಂದೇ ಭಾರತ್ ರೈಲಿನ (Vande Bharat train) ಸಂಚಾರ ಸಮಯದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಅಕ್ಟೋಬರ್ 7ರಿಂದ (ಶನಿವಾರ) ಜಾರಿಗೆ ಬರುವಂತೆ ವಂದೇ ಮಾತರಂ ರೈಲು ಅರ್ಧ ಗಂಟೆ ವೇಗವಾಗಿ ಸಾಗಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಮೊದಲಿಗಿಂತ ಅರ್ಧ ಗಂಟೆ ವೇಗವಾಗಿ ಸಾಗಲಿದ್ದರೆ, ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಿಂದ ಹೊರಟು ಬೆಂಗಳೂರು ತಲುಪುವ ರೈಲು 15 ನಿಮಿಷ ವೇಗವಾಗಿ ತಲುಪಲಿದೆ.
ಹಾಗಿದ್ದರೆ ಬದಲಾದ ಸಮಯ ಹೇಗಿರಲಿದೆ?
ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡುತ್ತಿದ್ದ ವಂದೇ ಭಾರತ್ ರೈಲು ಇನ್ನು ಮುಂದೆಯೂ ಅದೇ ಸಮಯಕ್ಕೆ ಹೊರಡಲಿದೆ. ಧಾರವಾಡ ನಿಲ್ದಾಣವನ್ನು ಈ ಹಿಂದೆ ಅದರು 12.40ಕ್ಕೆ ತಲುಪುತ್ತಿತ್ತು. ಇನ್ನು ಮುಂದೆ ಅದು 12.10ಕ್ಕೆ ತಲುಪಲಿದೆ. ಅಂದರೆ ಅರ್ಧ ಗಂಟೆ ಮುಂಚಿತವಾಗಿ ನೀವು ಧಾರವಾಡವನ್ನು ಸೇರಿಕೊಳ್ಳಬಹುದು.
SRC 05:45 | KSR BENGALURU | 19:45 DSTN |
05:55/05:57 | YASVANTPUR JN | 18:58/19:00 |
09:15/09:17 | DAVANGERE | 15:38/15:40 |
11:00/11:05 | SSS HUBBALLI JN | 13:35/13:40 |
12:10 DSTN | DHARWAR | SRC/13:15 |
ಅಂತೆಯೇ ಈ ಹಿಂದೆ ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಡುತ್ತಿದ್ದ ರೈಲು ಈಗಲೂ ಅದೇ ಸಮಯಕ್ಕೆ ಹೊರಡುತ್ತದೆ. ಆದರೆ, ಬೆಂಗಳೂರಿಗೆ 15 ನಿಮಿಷ ಮುಂಚಿತವಾಗಿ ತಲುಪುತ್ತದೆ. ಮೊದಲು ಅದು ರಾತ್ರಿ 8 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪುತ್ತಿದ್ದರೆ ಈಗ ಅದು ಸಂಜೆ 7.45ಕ್ಕೇ ತಲುಪುತ್ತದೆ. ಅಂದರೆ ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ನಡುವಿನ ನಿಲ್ದಾಣಗಳಲ್ಲಿ ಸಮಯದ ವ್ಯತ್ಯಾಸವಾಗಲಿದೆ. ರೈಲು ಮೊದಲಿಗಿಂತ ವೇಗವಾಗಿ ಸಾಗಲಿದೆ.
ಬೆಳಗಾವಿ- ಮೈಸೂರು ರೈಲಿನ ಸಮಯ ಬದಲಾವಣೆ
ಈ ನಡುವೆ, ನೈರುತ್ಯ ರೈಲ್ವೆ ಇಲಾಖೆ ಬೆಳಗಾವಿ- ಮೈಸೂರು ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಬದಲಾವಣೆ ಮಾಡಲಾಗಿದೆ.
- ಈ ಮೊದಲು ಮೈಸೂರಿನಿಂದ ಹೊರಡುವ ರಾತ್ರಿ 10.45ಕ್ಕೆ ಹೊರಡುತ್ತಿದ್ದ ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಮರುದಿನ ಬೆಳಗ್ಗೆ 10.45ಕ್ಕೆ ಬೆಳಗಾವಿ ತಲುಪುತ್ತಿತ್ತು. ಈಗ ಈ ರೈಲನ್ನು 8.45ಕ್ಕೆ ಮರುನಿಗದಿ ಮಾಡಲಾಗಿದೆ. ಅಂದರೆ ರಾತ್ರಿ 8.45ಕ್ಕೆ ಹೊರಟು ಮರುದಿನ ಬೆಳಗ್ಗೆ 8.45ಕ್ಕೆ ಬೆಳಗಾವಿ ತಲುಪುವಂತೆ ವೇಳಾಪಟ್ಟಿ ಪರಿಷ್ಕರಣೆ ನಡೆಸಲಾಗಿದೆ.
- ಈ ಮೊದಲು ಈ ರೈಲು ಬೆಳಗ್ಗೆ 10.45ಕ್ಕೆ ಬೆಳಗಾವಿ ತಲುಪುತ್ತಿದ್ದ ಪರಿಣಾಮವಾಗಿ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಹೀಗಾಗಿ ರೈಲು ಸಂಚಾರದ ವೇಳಾಪಟ್ಟಿ ಬದಲಿಸುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಸರಕಾರದ ದಿಲ್ಲಿಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ.
- ಬೆಳಗಾವಿಯಿಂದ ಮೈಸೂರಿಗೆ ಬರುವ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಎಂದಿನಂತೆ ಪ್ರತಿದಿನ ಸಂಜೆ 6 ಗಂಟೆಗೆ ಈ ರೈಲು ಬೆಳಗಾವಿಯಿಂದ ಹೊರಟು ಮರುದಿನ ಬೆಳಗ್ಗೆ 5.55ಕ್ಕೆ ಮೈಸೂರು ತಲುಪಲಿದೆ.
ಇದನ್ನೂ ಓದಿ: Vande Bharat Train: ಬರಲಿವೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು, ಒಳಗಡೆ ಹೇಗಿದೆ ನೋಡಿ