Site icon Vistara News

Voter Data | ಕಾಂಗ್ರೆಸ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು; ಆದ್ರೆ ಪುರುಸೊತ್ತಿಲ್ಲ: ಅಶ್ವತ್ಥನಾರಾಯಣ

universities meetings to be live telecasted

ಬೆಂಗಳೂರು: ತಮ್ಮ ಸಂಪರ್ಕದ ಕಂಪನಿ ಮೂಲಕ ಮತದಾರರ ಗೌಪ್ಯ ಮಾಹಿತಿಗಳನ್ನು (Voter Data) ಕಲೆ ಹಾಕಲಾಗುತ್ತಿದೆ ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ ಎಂಬ ಕಾಂಗ್ರೆಸ್‌ ಆರೋಫದ ಕುರಿತು ಐಟಿಬಿಟಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಇಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು ಎನ್ನಿಸುತ್ತದೆ. ಆದರೆ ಅದಕ್ಕೆಲ್ಲ ಪುರುಸೊತ್ತಿಲ್ಲ ಎಂದಿದ್ದಾರೆ.

ಬೆಂಗಳೂರು ಟೆಕ್‌ ಸಮ್ಮಿಟ್‌ ಸ್ಥಳದಲ್ಲಿ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ಇಂತಹ ನಿರಾಧಾರ ಹೇಳಿಕೆ ಆಪಾದನೆಯನ್ನು ಖಂಡಿಸುತ್ತೇನೆ. ಚುನಾವಣೆ ಸಂಬಂಧಿ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತದೆ. ಸರ್ಕಾರಕ್ಕೆ, ಪಕ್ಷಕ್ಕೆ, ವ್ಯಕ್ತಿಗೆ ಸಂಬಂಧ ಇಲ್ಲ. ಕಾಂಗ್ರೆಸ್‌ ನಾಯಕರು ಜವಾಬ್ದಾರಿ ಇಲ್ಲದೇ ಪುರುಸೊತ್ತಾಗಿ ಇರುವುದರಿಂದ ಈ ರೀತಿ ಮಾಡಿದ್ದಾರೆ. ಯಾರೇ ತಪ್ಪು ಮಾಡಿದರೂ ತಪ್ಪೇ. ಯಾರನ್ನೂ ನೇಂಇಸುವ ಅಧಿಕಾರ ಸರ್ಕಾರಕ್ಕೆ ಹಾಗೂ ನನಗೆ ಇಲ್ಲ ಎಂದರು.

ಅವರೇ ಮಸಿ ಬಳಿದುಕೊಂಡು ಕುಳಿತಿದ್ದಾರೆ ಎಂದ ಅಶ್ವತ್ಥನಾರಾಯಣ, ಅವರು ಬದುಕಿ ಬಾಳುತ್ತಿರುವುದೇ ಹಾಗೆ. ಅವರಿಗೆ ನೈತಕತೆ ಇಲ್ಲ. ಹೊಂಬಾಳೆ ಸಂಸ್ಥೆಗೂ ಇದಕ್ಕೂ ಸಂಬಂಧ ಇಲ್ಲ. ನನ್ನ ಸೋದರನಿಗೂ ಈ ವಿಚಾರಕ್ಕೂ‌ ಸಂಬಂಧ ಇಲ್ಲ. ಸುಳ್ಳು ಆರೋಪ ಮಾಡುತ್ತಿರುವವರು ನಾಡಿಗೆ ಭಾರವಾಗಿರುವವರು. ನನ್ನ ಸೋದರ ಭಾರವಾಗಿಲ್ಲ. ಕಾಂಗ್ರೆಸ್‌ನವರಿಗಂತೂ ಮಾನ ಮಾರ್ಯಾದೆ ಇಲ್ಲ ಎಂದರು.

ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಇವರ ಅಪ್ಪಣೆ ಬೇಕಾ? ಚುನಾವಣಾ ಆಯೋಗಕ್ಕೆ ಅವರು ದೂರು ನೀಡಬೇಕು. ನನ್ನ ಮೇಲೆ ಈ ರೀತಿ ಹಲವಾರು ಬಾರಿ ಮಸಿ‌ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲ‌ ರೀತಿಯ ಕಾನೂನು ಉಲ್ಲಂಘನೆ ಮಾಡಿರುವವರು ಡಿಕೆಶಿ, ಸಿದ್ದ ರಾಮಯ್ಯ ಹಾಗೂ ಸುರ್ಜೆವಾಲ. ಇವರಿಗೆ ಏನು ಹೇಳೋಣ? ಇವರಿಗೆ ಏನಾದ್ರೂ ಇದೆಯ? ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನಗೆ ರವಿ ಎನ್ನುವವರು ಮಾತ್ರ ಗೊತ್ತು ಎಂದರು.

ಅಶ್ವತ್ಥನಾರಾಯಣ ರಾಜಕಾರಣದಲ್ಲಿ ಇರಬೇಕು ಎಂದು ಇಡೀ ರಾಜ್ಯ ಹೇಳುತ್ತಿದೆ. ಕಾಂಗ್ರೆಸ್‌ನವರಿಗೆ ಟಾರ್ಗೆಟ್ ಅಶ್ವತ್ಥನಾರಾಯಣ ಎಂದ ಸಚಿವ, ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಪಕ್ಷದವರು ಯಾರೂ ಕಾಂಗ್ರೆಸ್‌ಗೆ ಸಾಥ್ ನೀಡಿಲ್ಲ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಆಸೆ‌ ಇದೆ. ಆದರೆ ನನಗೆ ಅವರಷ್ಟು ಪುರುಸೊತ್ತಿಲ್ಲ. ಅವರು ರಾಂಗ್ ನಂಬರ್ ಹುಡುಕಿದ್ದಾರೆ. ಆ ರಾಂಗ್ ನಂಬರ್ ನಾನೇ ಎಂದು ಅಶ್ವತ್ಥನಾರಾಯಣ ಉತ್ತರಿಸಿದರು.

ಇದನ್ನೂ ಓದಿ | Congress allegation | 18,000 ನಕಲಿ ಬಿಎಲ್‌ಒಗಳ ನೇಮಕ: ಪರಿಶಿಷ್ಟ, ಮುಸ್ಲಿಂ ಮತದಾರರ ಕಿತ್ತು ಹಾಕಲು ಹುನ್ನಾರ

Exit mobile version