Site icon Vistara News

Bhadravati Election Results: ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಕೆ. ಸಂಗಮೇಶ್ವರ್‌ ದಿಗ್ವಿಜಯ

Bhadravati Election results winner BK Sangameshwar

ಭದ್ರಾವತಿ: ವ್ಯಕ್ತಿ ರಾಜಕಾರಣವೇ ಪ್ರಧಾನವಾಗಿ ನಡೆದುಕೊಂಡು ಬಂದಿರುವ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ (Bhadravati Election Results) ಈ ಬಾರಿಯೂ ಕಾಂಗ್ರೆಸ್‌ನ ಬಿ.ಕೆ. ಸಂಗಮೇಶ್ವರ್ ಜಯಗಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಪಕ್ಷದ ಖಾತೆಗೆ ಮತ್ತೊಂದು ಕ್ಷೇತ್ರ ಸೇರ್ಪಡೆಯಾದಂತೆ ಆಗಿದೆ.

ವ್ಯಕ್ತಿ ರಾಜಕಾರಣವೇ ಇಲ್ಲಿ ಪ್ರಮುಖ

ಭದ್ರಾವತಿ ರಾಜಕಾರಣ ಇತರೆ ವಿಧಾನಸಭಾ ಕ್ಷೇತ್ರಕ್ಕಿಂತ ತುಂಬಾ ಭಿನ್ನ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಹೆಚ್ಚು ಮಹತ್ವದ್ದಾಗಿದೆ. ಹೀಗಾಗಿ ಈ ಬಾರಿ ಮತದಾರನ ಒಲವು ಯಾವ ಕಡೆ ಎಂಬ ಕುತೂಹಲ ಮೂಡಿತ್ತು. ಕೊನೆಗೂ ಸಂಗಮೇಶ್ವರ್‌ ಪಕ್ಷದ ಅಭ್ಯರ್ಥಿ ಗೆಲ್ಲುವ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ.

ಮತ್ತೊಮ್ಮೆ ಸಂಗಮೇಶ್ವರ್‌ ಪಾರುಪಥ್ಯ

ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೇ ಈ ಬಾರಿ ಮತದಾರ ಆಶೀರ್ವಾದ ಮಾಡಿದ್ದಾನೆ. ಅಭಿವೃದ್ಧಿ ಕಾರ್ಯದ ಮೇಲೆ ಅವರು ಈ ಬಾರಿ ಮತಯಾಚನೆ ನಡೆಸಿದ್ದರು. ಜೆಡಿಎಸ್ ಜತೆ ನೇರ ಸ್ಪರ್ಧೆ ಇದ್ದರೂ ಈ ಬಾರಿ ಕಾಂಗ್ರೆಸ್‌ ಘೋಷಣೆ ಮಾಡಿರುವ ಕೆಲವು ಯೋಜನೆಗಳು ಜನರನ್ನು ಸೆಳೆಯುವಲ್ಲಿಯೂ ಮುಖ್ಯ ಪಾತ್ರವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅನುಕಂಪ ಇದ್ದರೂ ಸೋತ ಜೆಡಿಎಸ್‌

ಕಳೆದ 30 ವರ್ಷಗಳಿಂದ ಸಂಗಮೇಶ್ ಮತ್ತು ಅಪ್ಪಾಜಿ ಅವರ ನೇರ ಸ್ಪರ್ಧೆಗೆ ಯಾರಿಗೂ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ ಅಪ್ಪಾಜಿ ಗೌಡ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಶಾರದಾ ಅಪ್ಪಾಜಿ ಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಕಾರಣ ಅನುಕಂಪದ ಅಲೆಯ ಲಾಭದ ನಿರೀಕ್ಷೆ ಜೆಡಿಎಸ್‌ಗೆ ಇತ್ತು. ಆದರೆ, ಕೊನೆಗೂ ಅದು ಫಲ ಕೊಡಲಿಲ್ಲ.

ಕಳೆದ ಬಾರಿಯ ಫಲಿತಾಂಶ ಏನು?
ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್): 75,722 | ಅಪ್ಪಾಜಿ ಎಂ ಜೆ (ಜೆಡಿಎಸ್): 64,155 | ಗೆಲುವಿನ ಅಂತರ: 11,567

ಈ ಬಾರಿ ಚುನಾವಣಾ ಫಲಿತಾಂಶ ಇಂತಿದೆ
ಬಿ.ಕೆ. ಸಂಗಮೇಶ್ವರ (ಕಾಂಗ್ರೆಸ್) 65883 | ಶಾರದಾ ಅಪ್ಪಾಜಿ ಗೌಡ (ಜೆಡಿಎಸ್) 63298 | ಗೆಲುವಿನ ಅಂತರ – 2585

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಒಮ್ಮೆಯೂ ಗೆಲುವು ದಾಖಲಿಸದ ಬಿಜೆಪಿ

ಶಿವಮೊಗ್ಗ ಜಿಲ್ಲೆಯು ಬಿಜೆಪಿಯ ಶಕ್ತಿ ಕೇಂದ್ರ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಅಥವಾ ಜೆಡಿಎಸ್‌ನವರು ಶಾಸಕರಾಗುತ್ತಾ ಬಂದಿದ್ದಾರೆ. ಭದ್ರಾವತಿಯಲ್ಲಿ ಬಿಜೆಪಿ ಈವರೆಗೆ ಒಮ್ಮೆಯೂ ಗೆಲುವು ದಾಖಲಿಸಿಲ್ಲ. ಬಿಜೆಪಿಯಿಂದ ಮಂಗೋಟೆ ರುದ್ರೇಶ್ ಅವರು ಕಣಕ್ಕೆ ಇಳಿದು ಪ್ರಬಲ ಪೈಪೋಟಿ ಒಡ್ಡಿದರೂ ಇಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ.

Exit mobile version