Site icon Vistara News

Bharat Jodo | ಇದು ಪಿಕ್‌ನಿಕ್‌ ಅಲ್ಲ, ದಿನಕ್ಕೆ 20 ಕಿ.ಮೀ. ನಡೀಬೇಕು: ಬಿಜೆಪಿ, JDS ಮುಖಂಡರನ್ನೂ ಆಹ್ವಾನಿಸಿದ ಡಿ.ಕೆ. ಶಿವಕುಮಾರ್‌

Bharat jodo dk shivakumar

ಬೆಂಗಳೂರು: ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ಭಾರತ್‌ ಜೋಡೊ (Bharat Jodo) ಯಾತ್ರೆ, ಭಾರತ ಐಕ್ಯತಾ ಯಾತ್ರೆ ಹೆಸರಿನಲ್ಲಿ ಕರ್ನಾಟಕದಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬಹಿರಂಗ ಪತ್ರ ಬರೆದಿದ್ದಾರೆ.

ಸೆಪ್ಟೆಂಬರ್‌ 30ರಿಂದ ಚಾಮರಾಜನಗರದ ಗುಂಡ್ಲುಪೇಟೆಯಿಂದ ಆರಂಭವಾಗುವ ಯಾತ್ರೆ 21ದಿನ ಕರ್ನಾಟಕದಲ್ಲಿ ಸಾಗಲಿದೆ. “ನನ್ನ ಪ್ರೀತಿಯ ಕರ್ನಾಟಕದ ಜನತೆಗೆ ನಮಸ್ಕಾರ!” ಎಂದು ಪತ್ರವನ್ನು ಆರಂಭಿಸಿರುವ ಡಿ.ಕೆ. ಶಿವಕುಮಾರ್‌, “ಸೆಪ್ಟೆಂಬರ್‌ 30ರಂದು ಐತಿಹಾಸಿಕ ಭಾರತ ಐಕ್ಯತಾ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಲಿದೆ. ಕರ್ನಾಟಕದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ.

“ಜನ-ಮನ ಒಂದಾಗದೆ ಜಗತ್ತಿನಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಕೇವಲ 5 ವರ್ಷಕ್ಕೊಮ್ಮೆ ಮತ ಹಾಕಿದರೆ ಸಾಲದು. ನಾವು ರಾಜಕಾರಣಿಗಳಾಗಲಿ ಅಥವಾ ಮತದಾರರಾಗಲಿ, ನಮ್ಮ ಕಾಲದ ಸಮಸ್ಯೆಗಳಿಗೆ ಪ್ರತಿದಿನ ಸ್ಪಂದಿಸುವ ಜವಾಬ್ದಾರಿ ನಮ್ಮ ಮೇಲಿದೆ. ನೀವು. ಬದಲಾವಣೆಯನ್ನು ಕಾಣಬೇಕಾದರೆ, ನೀವು ಬದಲಾವಣೆಗೆ ಮುಂದಾಗಬೇಕು, ಬದಲಾವಣೆಗಾಗಿ ಈ ಚಳುವಳಿಯಲ್ಲಿ ಹೆಜ್ಜೆ ಹಾಕಿ” ಎಂದು ಮನವಿ ಮಾಡಿದ್ದಾರೆ.

“1947ರಲ್ಲಿ ಸ್ಥಾತಂತ್ಯಕ್ಕಾಗಿ ಕಾಂಗ್ರೆಸ್‌ ಭಾರತವನ್ನು ಒಗ್ಗೂಡಿಸಿತು. ಇಂದು, 75 ವರ್ಷಗಳ ನ೦ತರ, ನಾವು ಬದಲಾವಣೆಗಾಗಿ ಏಕತೆಯ ಪ್ರತಿಜ್ಞೆಯನ್ನು ಮಾಡಿದ್ದೇವೆ. ಬಾರತ ಐಕ್ಕತಾ ಯಾತ್ರೆಯು ಬದಲಾವಣೆಯ ಮೊದಲ ಹೆಜ್ಜೆಯಾಗಿದೆ. ಶ್ರೀ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ನಿರಂಕುಶ ಅಧಿಕಾರದ ವಿರುದ್ಧ, ದ್ವೇಷ ರಾಜಕಾರಣದ ವಿರುದ್ಧ ನಾವು ಧ್ವನಿ ಎತ್ತುತ್ತಿದ್ದೇವೆ. ಬಿಜೆಪಿಯ ರಾಜಕೀಯ ನಡೆಯಲ್ಲಿ ಜನರ ಬಗ್ಗೆಯಾಗಲಿ, ಅವರ ಸಮಸ್ಯೆಗಳ ಬಗ್ಗೆಯಾಗಲಿ ಮಾತೇ ಇಲ್ಲವಾಗಿದೆ. ಬೆಲೆ ಏರಿಕೆ, ನಿರುದ್ಯೋಗ,
ಕೋಮು ಸೌಹಾರ್ದತೆ, ಮಹಿಳಾ ಸುರಕ್ಷತೆ ಅಥವಾ ಆರ್ಥಿಕ ಅಭಿವೃದ್ಧಿಯಂತಹ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರವು ಮಾತೇ ಆಡುತ್ತಿಲ್ಲ” ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ನೀವು ಯಾತ್ರೆಯಲ್ಲಿ ಪಾಲ್ಗೊಂಡು ನಮ್ಮೊಂದಿಗೆ ನಡೆದಾಗ ಬದಲಾವಣೆಯ ಶಕ್ತಿಯೇನು ಎಂಬುದು ಅರಿವಾಗಲಿದೆ ಎಂದು ಆಶ್ವಾಸನೆ ನೀಡಿರುವ ಡಿ.ಕೆ. ಶಿವಕುಮಾರ್‌, ಉತ್ತಮ ಭವಿಷ್ಯ ಸಾಧ್ಯ ಎಂಬ ನಂಬಿಕೆ ನಿಮ್ಮದಾಗುತ್ತದೆ. ನಾವು 40% ಭ್ರಷ್ಟಾಚಾರದೊಂದಿಗೆ ಬದುಕಬೇಕಾಗಿಲ್ಲ ಎಂದು ನೀವು ನಂಬಲು ಪ್ರಾರಂಭಿಸುತ್ತೀರಿ. ನಾವು ಸಾರ್ವಕಾಲಿಕ ಐತಿಹಾಸಿಕ ನಿರುದ್ಯೋಗದಿಂದ ಕೊರಗಬೇಕಿಲ್ಲ. ನಮ್ಮ ಪ್ರೀತಿಯ ನಾಡು ಎಲ್ಲರಿಗೂ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನೀವು ನಂಬಲು ಪ್ರಾರಂಭಿಸುತ್ತೀರಿ” ಎಂದಿದ್ದಾರೆ.

ಇದು ಕಾಂಗ್ರೆಸ್‌ ಪಕ್ಷದಿಂದ ನಡೆಸುತ್ತಿರುವ ಯಾತ್ರೆಯಾದರೂ ಬಿಜೆಪಿ, ಜೆಡಿಎಸ್‌ ಸೇರಿ ಎಲ್ಲ ಪಕ್ಷದವರಿಗೂ ಶಿವಕುಮಾರ್‌ ಆಹ್ವಾನ ನೀಡಿದ್ದಾರೆ. “ಇತರ ಪಕ್ಷಗಳಲ್ಲಿರುವ ನನ್ನ ಸ್ನೇಹಿತರನ್ನು ಒಳಗೊಂಡಂತೆ ಎಲ್ಲರನ್ನೂ ಸಹ ಈ ಯಾತ್ರೆಯಲ್ಲಿ ಹೆಚ್ಚಿಹಾಕಲು ನಾನು ಆಹ್ಲಾನಿಸುತ್ತಿದ್ದೇನೆ. ಇದರಿಂದಾಗಿ ‘ಅಧಿಕಾರವೆಂದರೆ ಆಳುವುದಲ್ಲ, ಜನರ ಸೇವೆ ಮಾಡುವುದು’ ಎಂದು ಅರಿತುಕೊಳ್ಳಲು ಸಾಧ್ಯವಾಗಲಿದೆ” ಎಂದು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.

Bharat Jodo ಪಿಕ್ಸಿಕ್‌ ಅಲ್ಲ ಎಂಬ ಅರಿವಿರಲಿ. ಹವಾಮಾನ ಹೇಗಿದ್ದರೂ ಸಹ ದಿನಕ್ಕೆ 20 ಕಿಲೋಮೀಟರ್‌ ನಡೆಯಲಿದ್ದೇವೆ. ನಮ್ಮನ್ನು ಪ್ರೀತಿಸುವ ಎಲ್ಲಾ ವರ್ಗದ ಜನರನ್ನು ನಾವು ಭೇಟಿ ಮಾಡಲಿದ್ದೇವೆ, ಅವರ ದುಃಖವನ್ನು ಆಲಿಸಲಿದ್ದೇವೆ. ಉಚಿತ ಸಿಲಿಂಡರ್‌ ಕೊಟ್ಟು ರೀಫಿಲ್‌ಗಾಗಿ ದುಬಾರಿ ಹಣ ತೆರಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯರನ್ನು ನಾವು ಭೇಟಿಯಾಗಲಿದ್ದೇವೆ. ಇದರ ನಡುವೆ ನಿಮಗೆ ಭರವಸೆಯ ಬೆಳಕೂ ಕಾಣಲಿದೆ. ಜನರನ್ನು ಭೇಟಿ ಮಾಡಿದಾಗ ಅವರು ತೋರುವ ಪ್ರೀತಿ, ನೀಡುವ ಆಹಾರದಲ್ಲಿ ನಿಮಗೆ ಭರವಸೆ ಕಾಣಲಿದೆ. ಜಗತ್ತನ್ನು ಎಲ್ಲರಿಗಾಗಿ ಉತ್ತಮವಾಗಿಸಲು ಬದಲಾವಣೆಗಾಗಿ ನಿಮ್ಮೊಡನೆ ಹೆಜ್ಜೆ ಹಾಕುವ ಸಹ ಪಾದಯಾತ್ರಿಗಳನ್ನು
ಭೇಟಿಯಾದಾಗ ನಿಮಗೆ ಭರವಸೆ ಮೂಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Bharat Jodo | ರಾಹುಲ್‌ ಗಾಂಧಿಗೆ ಭಾರತ್‌ ಜೋಡೊದಲ್ಲಿ ಹೆಜ್ಜೆ ಹಾಕಿದ ದಣಿವಿಗಿಂತ ಪಕ್ಷ ಬಿಕ್ಕಟ್ಟಿನ ದಣಿವೇ ಹೆಚ್ಚು!

Exit mobile version