ಬಳ್ಳಾರಿ: ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ 13ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮೊಳಕಾಲ್ಮೂರು ನಡಿಗೆ ಮುಗಿಸಿ ರಾಹುಲ್ ಗಾಂಧಿ ಅವರು ಬಳ್ಳಾರಿ ಪ್ರವೇಶಿಸಲಿದ್ದಾರೆ.
ಮೊಳಕಾಲ್ಮೂರಿನ ರಾಂಪುರದಿಂದ 6.30ಕ್ಕೆ ರಾಹುಲ್ ನಡಿಗೆ ಆರಂಭವಾಗಿದೆ. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಹೆಜ್ಜೆ ಹಾಕುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಜಜಿರಕಲ್ಲು ಟೋಲ್ ಪ್ಲಾಜಾದಲ್ಲಿ ಭೋಜನ ವಿರಾಮ ನೀಡಲಿದ್ದು, ಸಂಜೆ 4 ಗಂಟೆಗೆ ನಡಿಗೆ ಪುನಾರಂಭವಾಗಲಿದೆ. ಸಂಜೆ 6.30ಕ್ಕೆ ಓಬಾಳಪುರಂನಲ್ಲಿ ಯಾತ್ರೆ ಅಂತ್ಯವಾಗಲಿದ್ದು, ರಾತ್ರಿ ಬಳ್ಳಾರಿಯ ಹಲಕುಂದಿ ಮಠದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ.