Site icon Vistara News

Bhavani vs Preetham | ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ಕುಡುಕರು, 2 ಬಾಟಲ್‌ ಕುಡೀತಾರೆ: ಪ್ರೀತಂ ಗೌಡ

preetham gowda

ಹಾಸನ: ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹಾಗೂ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರೂ ಕುಡುಕರು. ಅವರು ಥರ್ಟಿ, ಸಿಕ್ಸ್ಟಿ (30, 60) ಅಲ್ಲ, ಎರಡು ಬಾಟಲಿ ಕುಡೀತಾರೆ. ತಾಯಿ, ಮಗ ಇಬ್ಬರೂ ರಾತ್ರಿ ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡೇ ಇರುತ್ತಾರೆ. ಹೀಗಾಗಿ ಬೆಳಗ್ಗೆ ಬಂದು ಏನು ಮಾತನಾಡುತ್ತೇವೆ ಎಂಬುದೇ ಅವರಿಗೆ ಗೊತ್ತಾಗುವುದಿಲ್ಲ ಎಂದು (Bhavani vs Preetham) ಶಾಸಕ ಪ್ರೀತಂ ಗೌಡ ತೀವ್ರ ವಾಗ್ದಾಳಿ ನಡೆಸಿದರು.

ಚುನಾವಣೆ ಸಮೀಪವಾಗುತ್ತಿದ್ದಂತೆ ಹಾಸನ ರಾಜಕೀಯ ಕಣ ರಂಗೇರುತ್ತಿದೆ. ಅಲ್ಲದೆ, ಪರಸ್ಪರ ವೈಯಕ್ತಿಕ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗುತ್ತಿದೆ. ಶಾಸಕ ಪ್ರೀತಂ ಗೌಡ ಎಲ್ಲವನ್ನೂ ತಾನೇ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ ಎಂಬ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಆರೋಪ ಮಾಡಿದ್ದ ಬೆನ್ನಲ್ಲೇ ಅವರ ವಿರುದ್ಧ ಪ್ರೀತಂ ಗೌಡ ಹರಿಹಾಯ್ದರು.

ಪ್ರೀತಂ ಗೌಡ ಅಪ್ಪ ಎಂಜಿನಿಯರ್‌ ಆಗಿದ್ದು, ಓದಿಸಲೂ ದುಡ್ಡಿಲ್ಲದೆ, ಹೆಂಡತಿ ಮಕ್ಕಳನ್ನು ಸಾಕಲೂ ಆಗದೆ ರೇವಣ್ಣ ಅವರ ಮುಂದೆ ಸಹಾಯಕ್ಕೆ ಕೈಕಟ್ಟಿ ನಿಂತಿದ್ದರು ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಪ್ರೀತಂ ಗೌಡ, ನಮ್ಮ ತಾಯಿ ನೂರು ಎಕರೆ ಖಾತೆದಾರರ ವಂಶದಲ್ಲಿ ಹುಟ್ಟಿದವರು, ನಮ್ಮ ತಂದೆ ವಂಶದಲ್ಲೂ ಅವರು ಹುಟ್ಟುವ ಮುಂಚೆಯೇ ಹತ್ತಾರು ಎಕರೆ ಜಮೀನು ಇತ್ತು. ನಮ್ಮ ತಾಯಿ ಬಿಎ, ನಮ್ಮ ತಂದೆ ಬಿಇ ಓದಿದ್ದಾರೆ. ಹಾಗಾಗಿ ನಮಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಆದರೆ, ಭವಾನಿ ಅವರು ಹೊಳೆನರಸೀಪುರಕ್ಕೆ ಸೊಸೆಯಾಗಿ ಬರುವ ಮುಂಚೆ ಅವರ ಮನೆಯ ಪರಿಸ್ಥಿತಿ ಏನಿತ್ತು ಎಂದು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಸಾಲಿಗ್ರಾಮಕ್ಕೆ ಹೋಗಿ ಅಕ್ಕ (ಭವಾನಿ) ಅವರ ಮನೆಯಲ್ಲಿ ಎಷ್ಟು ಗುಂಟೆ ಜಾಗ ಇತ್ತು ಎಂದು ಕೇಳಿ ಎಂದು ಕಿಡಿಕಾರಿದರು.

ರೇವಣ್ಣ ಹೀಗೆ ಮಾತನಾಡಲ್ಲ, ಯಾಕಂದ್ರೆ ಅವರು ನಶೆ ಏರಿಸಲ್ಲ
ಮೈಸೂರು ಮಹಾರಾಜರು ಏನಾದ್ರು ಸಾಲ ಕೊಟ್ಟು ಅವರನ್ನು ಆಗರ್ಭ ಶ್ರೀಮಂತರನ್ನಾಗಿಸಿದರಾ? ಭವಾನಿ ಅಕ್ಕ ಮಾತನೋಡೋ ಶೈಲಿ ನೋಡಿದ್ರೆ ಅವರು ಆಗರ್ಭ ಶ್ರೀಮಂತರು ಎಂದೆನಿಸುತ್ತದೆ. ಭವಾನಿ ಹಾಗೂ ರೇವಣ್ಣ ಅವರು ಹೋಗುವ ಪ್ರತಿ ಕಾರ್ಯಕ್ರಮಕ್ಕೂ ಜನರು ಆಲ್ಕೋ‌ಮೀಟರ್ ತೆಗೆದುಕೊಂಡು ಹೋಗಬೇಕು. ಅವರ ಮುಂದಿನ ಸುದ್ದಿಗೋಷ್ಠಿಯಲ್ಲಿ ಆಲ್ಕೋಮೀಟರ್‌ ಅನ್ನು ಹಿಡಿದರೆ ಅವರ ನಶೆ ಎಷ್ಟರಮಟ್ಟಿಗೆ ಇದೆ ಎಂಬುದು ತಿಳಿಯಲಿದೆ. ಹೀಗಾಗಿ ಅವರು ಬೆಳಗ್ಗೆ ಬಂದು ಏನು ಮಾತನಾಡುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ರೇವಣ್ಣ ಅವರು ಹಾಗಲ್ಲ, ಅವರು ನಶೆ ಏರಿಸಿಕೊಳ್ಳಲ್ಲ. ಆದರೆ, ರೇವಣ್ಣ ಅವರು ಈ ನಶೆಯರ ಮಧ್ಯೆ ಸಿಲುಕಿಕೊಂಡು ನರಳಿ ಹೋಗಿದ್ದಾರೆ.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಹಾಸನ | ಪ್ರೀತಂ ಗೌಡ ವಿರುದ್ಧ ರೇವಣ್ಣ ಯಾವ ಕಾರ್ಡ್‌ ಬಳಸುತ್ತಾರೆ ಎನ್ನುವುದೇ ಪ್ರಶ್ನೆ

Exit mobile version