ಮೈಸೂರು: ಕಬಿನಿ ಹಿನ್ನೀರು ಅರಣ್ಯ ಸಫಾರಿಗೆ ನೀವೇನಾದ್ರೂ ಹೋಗಿದ್ದರೆ ಈ ಹಿರಿಯಜ್ಜನ ನೋಡಿಯೇ ಇರುತ್ತಿರಿ. ಕಬಿನಿ ಕಾಡಿನ ಕಾಡಾನೆ ಭೋಗೇಶ್ವರ ಇನ್ನು ನೆನಪು ಮಾತ್ರ. ವಯೋಸಹಜ ಕಾಯಿಲೆಯಿಂದ ಮೃತಪಟ್ಟ ದಂತ ಕಾಂತಿಯ ಕಾಡಾನೆ ಕಳೆದುಕೊಂಡ ದು:ಖದಲ್ಲಿ ಪ್ರವಾಸಿಗರು ಇದ್ದಾರೆ.
ಇದನ್ನೂ ಓದಿ | ಮಹಿಳೆಯನ್ನು ಕೊಂದು, ಸಂಜೆ ಆಕೆಯ ಶವ ಸಂಸ್ಕಾರಕ್ಕೂ ಬಂದ ಆನೆ; ಮೃತ ದೇಹವನ್ನೂ ತುಳಿದು ಹೋಯ್ತು !
ಎಚ್.ಡಿ.ಕೋಟೆ ಕಬಿನಿ ಹಿನ್ನೀರಿನಲ್ಲಿ ಕಳೇಬರ ಪತ್ತೆಯಾಗಿದ್ದು, ಪ್ರವಾಸಿಗರ ಅತ್ಯಾಕರ್ಷಣೆಯ ಆನೆ ಕೊನೆಯುಸಿರೆಳೆದಿದೆ. ಅಂದಹಾಗೇ ಈ ಕಾಡಾನೆಗೆ ಅರಣ್ಯ ಇಲಾಖೆಯು ಪ್ರೀತಿಯಿಂದ ಭೋಗೇಶ್ವರ ಅಂತ ಹೆಸರಿಟ್ಟಿದ್ದರು. ಬರೋಬರಿ ನಾಲ್ಕು ಅಡಿ ದಂತ ಹೊಂದಿದ್ದ ಭೋಗೇಶ್ವರ, ನೆಲಕ್ಕೆ ತಾಗುತ್ತಿದ್ದ ದಂತ ಹೊತ್ತು ವಿಶಿಷ್ಟ ಹಾವಭಾವದಿಂದ ಓಡಾಡುತ್ತಿತ್ತು. ಈ ದೃಶ್ಯ ನೋಡಲೆಂದೇ ಪ್ರವಾಸಿಗರು ಕಬಿನಿಗೆ ದೌಡಯಿಸುತ್ತಿದ್ದರು.
ಸಾಮಾನ್ಯವಾಗಿ ಕಾಡಾನೆಗಳ ಗರಿಷ್ಠ ಆಯಸ್ಸು 65 ವರ್ಷ ಆದರೆ ಭೋಗೇಶ್ವರ 70 ವರ್ಷ ಬದುಕಿದ್ದ, ಹೀಗಾಗಿ ಅರಣ್ಯ ಇಲಾಖೆಯೂ ಈ ಆನೆಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಿತ್ತು. ಇನ್ನೂ ಎರಡೂ ದಂತಗಳು ಕೂಡಿಕೊಂಡಿರುವ ಪರಿಣಾಮ ದಂತ ಕತ್ತರಿಸುವ ಪ್ರಸ್ತಾಪವನ್ನೂ ಅರಣ್ಯ ಇಲಾಖೆ ಮಾಡಿತ್ತು. ಆದರೆ ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಇದನ್ನೂ ಓದಿ | ಬೆಂಗಳೂರು- ಮೈಸೂರು ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ ?: ಸಿದ್ದು ಪ್ರಶ್ನೆ