Site icon Vistara News

ಫೆ.4ರಂದು ಸಿದ್ದರಾಮಯ್ಯ ಸಿಡಿ ರಿಲೀಸ್‌: ಮಾಜಿ ಸಿಎಂ ಕುರಿತು ಅಭಿಮಾನಿಯಿಂದ ಸಿದ್ಧವಾಗಿದೆ ಹಾಡು, ಡ್ಯಾನ್ಸು ವಿಡಿಯೊ

Former CM Siddaramaiah

Former CM Siddaramaiah

https://vistaranews.com/wp-content/uploads/2023/01/Siddaramaiah-song.mp3
ಸಿದ್ದರಾಮಯ್ಯ ಕುರಿತು ಹಾಡಿನ ಆಡಿಯೊ

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕಾರಣಿಗಳ ವಿಡಿಯೊ, ಸಿಡಿ ಬಿಡುಗಡೆ ಬೆದರಿಕೆ, ಹಗರಣಗಳು ನಡೆದಿವೆ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತ ವಿಡಿಯೊವೊಂದು ಫೆಬ್ರವರಿ 4ರಂದು ಬಿಡುಗಡೆಯಾಗಲಿದೆ.

ಆದರೆ ಇದು ಯಾವುದೋ ಹಗರಣದ ವಿಡಿಯೊ ಅಲ್ಲ. ಸಿದ್ದರಾಮನ ಹುಂಡಿಯಲ್ಲಿ ಬಡತನದಲ್ಲಿ ಹುಟ್ಟಿ ಈ ಹಂತಕ್ಕೆ ಬೆಳೆದ ಸಿದ್ದರಾಮಯ್ಯ ಅವರ ಕುರಿತು ಅಭಿಮಾನಿಗಳು ನಿರ್ಮಿಸಿರುವ ವಿಡಿಯೊ ಸಾಂಗ್‌.

ಹೈದರಾಬಾದ್‌ನ ಉದ್ಯಮಿ ಹಾಗೂ ಸಿದ್ದರಾಮಯ್ಯ ಅಭಿಮಾನಿ ನಂ. 1 ಶ್ರೀಧರ್‌ ಎನ್ನುವವರು ನಿರ್ಮಾಣ ಮಾಡಿದ್ದಾರೆ. ʼಸಿದ್ದರಾಮನ ಹುಂಡಿಯಲ್ಲಿ ಸಿಕ್ಕ ವರವೂ ನೀನಯ್ಯʼ ಎನ್ನುವ ಸಾಹಿತ್ಯವನ್ನು ಹೊಂದಿದ್ದು, ಈಗಾಗಲೆ ಚಿತ್ರೀಕರಣ ಹೈದರಾಬಾದ್‌ನಲ್ಲಿ ಪೂರ್ಣವಾಗಿದೆ.

ಇದನ್ನೂ ಓದಿ : KS Eshwarappa : ಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸಲ್ಲ, ಹೆಣಾನ ನಾಯಿ ಕೂಡ ಮೂಸಲ್ಲ ಎಂದ ಈಶ್ವರಪ್ಪ

ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲೂ ಗೀತೆ ಬರಲಿದ್ದು, ಟಾಲಿವುಡ್‌ನ ಗಾಯಕರು ಹಾಡಿದ್ದಾರೆ. ಫೆ. 4ರಂದು ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಬಿಡುಗಡೆಯಾಗಲಿದೆ.

Exit mobile version