ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ (Bigg Boss Kannada) ಮೂರನೇ ದಿನ ಯೋಗದ ಯೋಗ ಪ್ರಾಪ್ತಿಯಾಗಿದೆ. ರಾಕೇಶ್ ಅಡಿಗ ಯೋಗ ಟೀಚರ್ ಆಗಿ ಕೆಲವರಿಗೆ ಯೋಗ ಟಿಪ್ಸ್ ಕೊಟ್ಟರೆ, ಜಸ್ವಂತ್ ಭೋಪಣ್ಣ ಮತ್ತು ನಂದಿನಿ ಫಿಟ್ನೆಸ್ ಯೋಗವನ್ನು ಪಡೆದುಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ೩ನೇ ದಿನ ಯೋಗ ಕ್ಲಾಸ್‌ನೊಂದಿಗೆ ಆರಂಭವಾಗಿದೆ. ಸೋಮವಾರದ ಗೇಮ್ ಫೈಟಿಂಗ್ ಬಳಿಕ ಮನೆ ಸದಸ್ಯರ ಶಾಂತಿ, ನೆಮ್ಮದಿಗೆ ರಾಕೇಶ್ ಅಡಿಗ ಮಂಗಳವಾರ ಯೋಗ ಟೀಚರ್ ಆಗಿದ್ದರು.
ಯೋಗ ಟೀಚರ್ ಆಗಿದ್ದ ರಾಕೇಶ್, ಮನೆಯ ಹೊರಗಿನ ಹುಲ್ಲುಹಾಸಿನಲ್ಲಿ ಲೋಕೇಶ್ ಕುಮಾರ್, ಸೋಮಣ್ಣ ಮಾಚಿಮಾಡ ಮತ್ತು ಕಿರಣ್ ಯೋಗೇಶ್ವರ್ ಅವರಿಗೆ ಯೋಗ ಮತ್ತು ಉಸಿರಾಟದ ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ.
ಫಿಟ್ನೆಸ್ ಮಾಡೆಲ್ ಹಾಗೂ ಸಾಮಾಜಿಕ ಜಾಲತಾಣದ ತಾರೆ ಜಸ್ವಂತ್ ಬೋಪಣ್ಣ, ನಂದಿನಿ ಒಟ್ಟಾಗಿ ಫಿಟ್ನೆಸ್ ಜಪಮಂತ್ರ ಪಠಿಸಿದರು. ಬ್ಲಾಕ್ಟ್ ಜಿಮ್ ಸೂಟ್‌ನಲ್ಲಿ ಜಸ್ವಂತ್, ಮೆರೂನ್ ಸೂಟ್‌ನಲ್ಲಿ ನಂದಿನಿ ಅಲಿಯಾಸ್ ನಂದು ವ್ಯಾಯಾಮ ಮಾಡಿದರು.