ಬೆಂಗಳೂರು: ಆರ್ಯವರ್ಧನ್ ಗುರೂಜಿ ಹೆಚ್ಚು ಫೇಮಸ್ ಆಗಿದ್ದೇ ಅವರ ಮಾತಿನ ಶೈಲಿಯಿಂದ. ಇದೇ ಶೈಲಿಯನ್ನು ಬಳಸಿಕೊಂಡು ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ರಾಕೇಶ್ ಅಡಿಗ ಮಿಮಿಕ್ರಿ ಮಾಡಿ ಕಾಲೆಳೆದಿದ್ದಾರೆ.
ಸಹಿ-ಕಹಿ ಮಿಶ್ರಿತ ಬಿಗ್‌ಬಾಸ್ ಮನೆಯಲ್ಲಿ ಒಮ್ಮೊಮ್ಮೆ ವಾರ್ ನಡೆದರೆ ಮತ್ತೊಮ್ಮೆ ಸ್ಪರ್ಧಿಗಳು ಒಬ್ಬರನ್ನೊಬ್ಬರು ಕಾಲೆದುಕೊಂಡು ಮಸ್ ಮಜಾ ಮಾಡುತ್ತಾರೆ. ಅಂಥದ್ದೇ ಸನ್ನಿವೇಶಕ್ಕೆ ಮಂಗಳವಾರದ ಎಪಿಸೋಡ್ ಸಾಕ್ಷಿಯಾಯಿತು.
ರಾಕೇಶ್ ಅಡಿಗ ಅವರು ಆರ್ಯವರ್ಧನ್ ಗುರೂಜಿ ರೀತಿಯಲ್ಲೇ ಮಾತನಾಡಿ, ಏನ್ ನಿಮ್ಮ ಸಮಸ್ಯೆ? ಇದು ಪರಿಹಾರವಾಗಬೇಕು ಎಂದರೆ ಕಾಲುಕೆಜಿ ಪನ್ನೀರು, ಜೀರಾ ರೈಸ್ ಕಳಿಸಿಕೊಟ್ಟು ಬಿಡಿ ಎಂದು ಮಿಮಿಕ್ರಿ ಮಾಡಿದ್ದಾರೆ. ರಾಕೇಶ್‌ರ ಮಿಮಿಕ್ರಿಗೆ ಲಿವಿಂಗ್ ಏರಿಯಾದಲ್ಲಿದ್ದ ಸ್ಪರ್ಧಿಗಳೆಲ್ಲ ಚಪ್ಪಾಳೆ ತಟ್ಟುತ್ತಾ ಖುಷಿಪಟ್ಟರು.
ಇದನ್ನೂ ಓದಿ | Bigg Boss Kannada | ಟಿಕ್‌ಟಾಕ್ ಸೋನು ಶ್ರೀನಿವಾಸ ಗೌಡ ಮೊಟ್ಟೆ ಫೈಟ್; ಇದೆಷ್ಟು ಮೊಟ್ಟೆಯ ಕತೆ?
ಇದಕ್ಕೂ ಮೊದಲು ತಮ್ಮ ಮಾತನ್ನು ರಾಕೇಶ್ ಮಿಮಿಕ್ರಿ ಮಾಡುತ್ತಾರೆಂದು ಗೊತ್ತಾದಾಗ ಆರ್ಯವರ್ಧನ್ ಗುರೂಜಿ ತಮಾಷೆಯಾಗಿಯೇ ರಾಕೇಶ್ ಕುತ್ತಿಗೆಯನ್ನು ಹಿಡಿದಂತೆ ಮಾಡಿದ್ದಾರೆ. ಆಗ ರಾಕೇಶ್, “ನಿಮ್ಮ ಬಹಳಷ್ಟು ವಿಡಿಯೊಗಳನ್ನು ನಾನು ನೋಡಿದ್ದೇನೆ. ಈಗ ನನ್ನನ್ನು ತಡೆಯಬೇಡಿ, ನಿಮ್ಮಂತೆಯೇ ನಾನು ಮಾಡಿ ತೋರಿಸುತ್ತೇನೆ. ನೀವು ಮತ್ತಷ್ಟು ಫೇಮಸ್ ಆಗುತ್ತೀರಿ ಬಿಡಿ” ಎಂದು ಹೇಳಿದ್ದಾರೆ. ಆಗ ಅದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡ ಆರ್ಯವರ್ಧನ್ ಗುರೂಜಿ ಮಿಮಿಕ್ರಿ ಮಾಡಲು ಬಿಟ್ಟಿದ್ದಾರೆ. ರಾಕೇಶ್ ತಮ್ಮಂತೆಯೇ ಮಿಮಿಕ್ರಿ ಮಾಡಿದಾಗ ಗುರೂಜಿ ಸಹ ನಕ್ಕು ಖುಷಿಪಟ್ಟಿದ್ದಾರೆ.
ಇದನ್ನೂ ಓದಿ | Bigg Boss Kannada | ದೊಡ್ಮನೇಲಿ ಈಗ ಯೋಗಾಯೋಗ; ಜಸ್ವಂತ್, ನಂದಿನಿ ಫಿಟ್ನೆಸ್ ಕ್ಲಾಸ್!