ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ (Bigg Boss Kannada) ಮಂಗಳವಾರದ ಸ್ಟಾರ್ ಆಫ್ ಅಟ್ರಾಕ್ಷನ್ ಎಂದರೆ ರಾಕೇಶ್ ಅಡಿಗ. ಆ್ಯಕ್ಟಿಂಗ್ಗೂ ಸೈ, ಸಿಂಗಿಂಗ್ಗೂ ಜೈ ಎನ್ನುವ ರಾಕೇಶ್, ತಮ್ಮ ರ್ಯಾಪ್ ಸಾಂಗ್ ಮೂಲಕವೂ ಗಮನ ಸೆಳೆದರು. ಕಾಲೇಜಿನಲ್ಲಿ ಹುಡುಗಿಗೆ ಲವ್ ಲೆಟರ್ ಕೊಟ್ಟಿದ್ದರ ಬಗ್ಗೆ ರ್ಯಾಪ್ ಸಾಂಗ್ ಹಾಡುವ ಮೂಲಕ ಮೋಡಿ ಮಾಡಿದರು.
ಕಾಲೇಜಿನಲ್ಲಿದ್ದಾಗ ಹುಡುಗಿಯನ್ನು ಇಂಪ್ರೆಸ್ ಮಾಡಲು ರಾಕೇಶ್ ಅಡಿಗ ಲವ್ ಲೆಟರ್ ಬರೆದಿದ್ದರಂತೆ. ಚಾಕಲೇಟ್, ಗ್ರೀಟಿಂಗ್ ಕಾರ್ಡ್, ರೋಸ್ ಬೊಕ್ಕೆ ಕೊಟ್ಟ ರಾಕೇಶ್, ಆಕೆಯ ಫಸ್ಟ್ ಲುಕ್ಗೆ ಬೋಲ್ಡ್ ಆಗಿದ್ದರಂತೆ, ಇದನ್ನೇ ರ್ಯಾಂಪ್ ಸಾಂಗ್ ಮೂಲಕ ಪದ ಜೋಡಿಸಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.
ಲವ್ ಲೆಟರ್ ಬರೆಯುವಾಗ ಸ್ಪೆಲಿಂಗ್ ಮಿಸ್ಟೇಕ್ ಇರಲಿಲ್ಲ, ಡಿಯರೆಸ್ಟ್ ಎಂದು ಬರೆದಿದ್ದೆ ಆದರೆ ನನ್ನ ಹೆಸರು ಬರೆಯೋದನ್ನೇ ಮರೆತು ಹೋಗಿದ್ದೆ ಎಂದಾಗ ಬಿಗ್ಬಾಸ್ ಸ್ಪರ್ಧಿಗಳು ಅಯ್ಯೋ ಎಂದು ನಗುತ್ತಾ ರ್ಯಾಪ್ ಸಾಂಗ್ ಅನ್ನು ಎಂಜಾಯ್ ಮಾಡಿದರು. ಆದರೆ, ಹುಡುಗಿ ಏನಾದ್ಲು..? ಅನ್ನೋ ಬಗ್ಗೆಯೋ ರಾಕೇಶ್ ಹಾಡಿನಲ್ಲಿ ಹೇಳಿದ್ದು, ಆಕೆ ಬೇರೊಬ್ಬನನ್ನು ಪ್ರೀತಿ ಮಾಡಿದಳು ಎಂದು ಸಹ ಹಾಡಿನ ಮೂಲಕ ಹೇಳಿದ್ದಾರೆ.
ಇದನ್ನೂ ಓದಿ | Bigg Boss Kannada | ಸೋನುಗೆ ಮೇಕಪ್ ಮಾಡಿಕೊಳ್ಳುವುದಕ್ಕೂ ಬರಲ್ವಂತೆ! ಸ್ಫೂರ್ತಿ-ರಾಕೇಶ್ ಗಾಸಿಪ್