Site icon Vistara News

Bigg Boss Kannada | ಟಿಕ್‌ಟಾಕ್‌ ಸೋನು ಶ್ರೀನಿವಾಸ ಗೌಡ ಮೊಟ್ಟೆ ಫೈಟ್‌; ಇದೆಷ್ಟು ಮೊಟ್ಟೆಯ ಕತೆ?

bigboss sonugowda

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಮೊಟ್ಟೆಯ ಕಥೆಯೊಂದು ನಡೆದಿದೆ. ಆದರೆ, ಇದು ಒಂದು ಮೊಟ್ಟೆಯ ಕಥೆಯಲ್ಲ. ಹಲವು ಮೊಟ್ಟೆಯ ಕಥೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಬಿಗ್‌ಬಾಸ್‌ (Bigg Boss Kannada) ರಿಯಾಲಿಟಿ ಶೋನ ಪ್ರತಿ ಸೀಸನ್‌ನಲ್ಲೂ ವಾರಗಳ ಬಳಿಕ ಊಟ-ತಿಂಡಿ ವಿಷಯಕ್ಕೆ ನಡೆಯುತ್ತಿದ್ದ ಫೈಟಿಂಗ್‌, ಈಗ ಮೂರನೇ ದಿನಕ್ಕೆ ಶುರುವಾಗಿದೆ.

ಆಹಾರದ ವಿಷಯಕ್ಕೆ ಸ್ಪರ್ಧಿಗಳ ಮಧ್ಯೆ ಅಸಮಾಧಾನ ಶುರುವಾಗಿದ್ದು, ಒಂದರ್ಥದಲ್ಲಿ ಭುಗಿಲೆದ್ದಿದೆ. ಶೋ ಆರಂಭಿಕ ದಿನದಿಂದಲೂ ಟಿಕ್‌ಟಾಕ್‌ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಈಗ ಮೊಟ್ಟೆ ವಿಷಯಕ್ಕೆ ಸ್ಪರ್ಧಿಗಳ ಜತೆಗೆ ಫೈಟಿಂಗ್‌ ಮಾಡಿದ್ದಾರೆ.

ಅಡುಗೆ ಮನೆಯ ಪ್ರದೇಶದಲ್ಲಿದ್ದ ಸಹಸ್ಪರ್ಧಿ ಚೈತ್ರಾ ಹಳ್ಳಿಕೇರಿ ಜತೆಗೆ ಕಷ್ಟ ತೋಡಿಕೊಂಡ ಸೋನು, “ಶೋ ಬಂದ ದಿನದಿಂದ ಪ್ರತಿಯೊಂದರಲ್ಲೂ ಪಕ್ಷಪಾತ ಆಗುತ್ತಲಿದೆ. ನಿಮಗೆ ಅರ್ಥ ಆಗದೇ ಇದ್ದರೂ, ಇದು ಬಿಗ್‌ಬಾಸ್‌ಗೆ ಅರ್ಥ ಆಗಿರುತ್ತದೆ” ಎಂದು ಕಷ್ಟ ತೋಡಿಕೊಂಡಿದ್ದಾರೆ.   

ಇದನ್ನೂ ಓದಿ | Bigg Boss Kannada | ಈ ಬಾರಿ ಬಿಗ್ ಬಾಸ್ ಒಟಿಟಿ ಮಸ್ತಿ ಇಲ್ಲ; ನೋಡಲು ಟೈಮ್ ಇಲ್ಲ ಎಂದ ನೆಟ್ಟಿಗರು!

ನಾನು ಹೇಳಿದಕ್ಕೆಲ್ಲ ತಲೆ ಕುಣಿಸಬೇಕು; ಸೋನು ಮಾತಿಗೆ ಗುರೂಜಿ ಗಪ್‌ಚುಪ್‌

ಮೊಟ್ಟೆ ವಿಷಯಕ್ಕೆ ಆರ್ಯವರ್ಧನ್‌ ಗುರೂಜಿ ಮಧ್ಯಪ್ರವೇಶಿಸಲು ಬಂದಾಗ ಗರಂ ಆದ ಸೋನುಗೌಡ, “ನನ್ನ ಎಲ್ಲ ಮಾತಿಗೂ ನೀವು ತಲೆ ಕುಣಿಸಬೇಕು” ಎಂದಿದ್ದಾರೆ. “ನನ್ನ ಜತೆಗೆ ಚೆನ್ನಾಗಿ ಇದ್ದು, ಸೋಮವಾರ ರಾತ್ರಿ ಬೇರೆಯವರ ಮಾತಿಗೆ ಹೇಗೆ ತಲೆ ಕುಣಿಸಿದ್ದೀರಾ? ಈಗ ನಾನು ಹೇಳಿದಾಗಲೂ ತಲೆ ಕುಣಿಸಬೇಕು” ಎಂದಿದ್ದಾರೆ.

ಕಿಚನ್‌ ಏರಿಯಾದಲ್ಲಿ ಮೊಟ್ಟೆ ಫೈಟ್‌

ಸೋನುವಿನ ಗರಂ ಮಾತಿಗೆ ಗಪ್‌ಚುಪ್‌ ಆದ ಗುರೂಜಿ, “ಆಯ್ತು ಆಯ್ತು ಅವ್ವ” ಎಂದು ಸಮಾಧಾನ ಪಡಿಸಲು ಮುಂದಾದರು. ಇದ್ಯಾವುದಕ್ಕೂ ಕರಗದ ಸೋನು, “ಏನೋ ಹೆಣ್ಣು ಮಗಳು ಮೊಟ್ಟೆ ಮಾಡಿಕೊಂಡು ತಿನ್ನುವುದರಲ್ಲಿ ಏನಿದೆ? ಎಂದು ಅವರೆಲ್ಲರಿಗೂ ಗುರೂಜಿ ಹೇಳಬಹುದಿತ್ತು. ಆದರೆ ಅವರು ಆ ಕೆಲಸ ಮಾಡಲಿಲ್ಲ ಚೈತ್ರಕ್ಕಾ” ಎಂದು ತಮ್ಮ ಅಸಮಾಧಾನವನ್ನು ತೋಡಿಕೋಂಡರು. ಆಗ ಪಕ್ಕದಲ್ಲೇ ಇದ್ದ ಜಯಶ್ರೀ ಆರಾಧ್ಯ ಜತೆಯಾದರು.

“ಮೊದಲ ದಿನ 30ಕ್ಕಿಂತ ಹೆಚ್ಚು ಮೊಟ್ಟೆ ಬೇಯಿಸಿ ತಿನ್ನಲಾಯಿತು. ಆಗ ಯಾರೂ ಏನೂ ಹೇಳಲಿಲ್ಲ. ಆದರೆ, ನಾನೊಂದು ಮೊಟ್ಟೆ ತಿಂದಿದಕ್ಕೆ ರಾದ್ಧಾಂತವನ್ನೇ ಮಾಡಿದ್ದಾರೆ” ಎಂದು ಸೋನು ಹೇಳಿದಾಗ, ಮಧ್ಯಪ್ರವೇಶ ಮಾಡಿದ ಚೈತ್ಯ, “ಅಂದು ಕೂಡ ಒಂದು ಟ್ರೇಗಿಂತ ಕಡಿಮೆಯೇ ಮೊಟ್ಟೆ ಬೇಯಿಸಿದ್ದು” ಎಂದು ಹೇಳಿದರು. ಯಾರು ಕೂಡ ಎರಡಕ್ಕಿಂತ ಜಾಸ್ತಿ ಮೊಟ್ಟೆ ತಿಂದಿಲ್ಲ ಎಂದು ನಗುತ್ತಲೇ ಮೊಟ್ಟೆ ಕಥೆ ಮುಗಿಸಲು ಯತ್ನಿಸಿದರು.

ಇದನ್ನೂ ಓದಿ | Bigg Boss Kannada | ಬಿಗ್‌ ಹೌಸ್‌ನಲ್ಲಿ ರೂಪೇಶ್‌ ಶೆಟ್ಟಿ, ಜಯಶ್ರೀ ಆರಾಧ್ಯ ನಡುವೆ ಕಿರಿಕ್‌!

Exit mobile version