ಬೆಂಗಳೂರು, ಗ್ರಾಮಾಂತರ: ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಮುರುಗೇಶ್ ನಿರಾಣಿ ಅವರು ಕಾಂಗ್ರೆಸ್‌ನ ಜೆ ಟಿ ಪಾಟೀಲ್ ಅವರ ವಿರುದ್ಧ ಸೋಲು ಕಂಡಿದ್ದಾರೆ. ಜೆ ಟಿ ಪಾಟೀಲ್ ಅವರು 91 ಸಾವಿರ ಅಧಿಕ ಮತಗಳನ್ನು ಪಡೆದುಕೊಂಡರೆ, ನಿರಾಣಿ ಅವರು 80 ಸಾವಿರ ಚಿಲ್ಲರೆ ಮತಗಳನ್ನು ಪಡೆದುಕೊಳ್ಳಲು ಶಕ್ಯವಾದರು.
2023ರ ಚುನಾವಣೆ ಅಭ್ಯರ್ಥಿಗಳು
ಹಾಲಿ ಶಾಸಕ ಮುರುಗೇಶ್ ನಿರಾಣಿ ಅವರು ಮತ್ತೆ ಬಿಜೆಪಿಯಿಂದ ಕಣದಲ್ಲಿದ್ದರು. ಕಾಂಗ್ರೆಸ್‌ನಿಂದ ಮತ್ತೆ ಜೆ ಟಿ ಪಾಟೀಲ್ ಸ್ಪರ್ಧಿಸಿದ್ದರು. ರುಕುಮುದ್ದೀನ್ ಸೌದಾಗರ್ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ.
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
1957ರಿಂದಲೂ ಈ ಕ್ಷೇತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಜನತಾ ದಳ ಕೂಡ ಒಂದೆರಡು ಬಾರಿ ಖಾತೆ ತೆರೆದಿದೆ. 2004ರಿಂದ ಬಿಜೆಪಿಯ ಪ್ರಭಾವ ಹೆಚ್ಚಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಮುರುಗೇಶ್ ಆರ್ ನಿರಾಣಿ ಅವರು 85135 ಮತಗಳನ್ನು ಪಡೆದುಕೊಂಡು ಗೆದ್ದಿದ್ದರು. ಕಾಂಗ್ರೆಸ್‌ನ ಜೆ ಟಿ ಪಾಟೀಲ್ ಅವರು 80324 ಮತಗಳನ್ನು ಪಡೆದು ಅಲ್ಪ ಅಂತರದಲ್ಲಿ ಸೋಲು ಕಂಡಿದ್ದರು. ಇದಕ್ಕೂ ಮೊದಲು 2004 ಮತ್ತು 2008ರಲ್ಲಿ ಮುರುಗೇಶ್ ನಿರಾಣಿ ಅವರು ಜೆ ಟಿ ಪಾಟೀಲ್ ವಿರುದ್ಧ ಗೆಲುವು ಸಾಧಿಸಿದ್ದರು.