Site icon Vistara News

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕ್ರೆಡಿಟ್‌ ವಾರ್;‌ ಬಿಜೆಪಿ, ಕಾಂಗ್ರೆಸ್‌ ಆಯ್ತು ಈಗ ಜೆಡಿಎಸ್‌ ಸರದಿ: ಯೋಜನೆಗಾಗಿ ನಾನೂ ಹೋರಾಡಿದ್ದೆ ಅಂದ್ರು ಸಿ.ಎಸ್.‌ ಪುಟ್ಟರಾಜು

bjp congress and jds credit war on bangalore mysore highway mla cs puttaraju i also worked said mla cs puttaraju

ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ (Bangalore Mysore Highway) ಕ್ರೆಡಿಟ್‌ ವಾರ್‌ ಪ್ರಾರಂಭವಾಗಿದೆ. ಈಗಾಗಲೇ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಬಿಜೆಪಿಯವರು ಇದನ್ನು ತಾವೇ ಮಾಡಿಸಿದ್ದು ಎಂದು ಹೇಳಿಕೊಂಡಿದ್ದರೆ, ಕಾಂಗ್ರೆಸ್‌ ಸಹ ಇದು ತಮ್ಮ ಅವಧಿಯಲ್ಲೇ ಪ್ರಾರಂಭವಾಗಿದ್ದು ಎಂದು ಹೇಳಿಕೊಂಡು ಕಾಮಗಾರಿ ವೀಕ್ಷಣೆಗೂ ಮುಂದಾಗಿತ್ತು. ಈಗ ಜೆಡಿಎಸ್‌ ಶಾಸಕ ಸಿ.ಎಸ್.‌ ಪುಟ್ಟರಾಜು ಈ ಬಗ್ಗೆ ಗುಡುಗಿದ್ದು, ತಾವು ಸಂಸದರಾಗಿದ್ದಾಗ ಇದರ ಬಗ್ಗೆ ಬಹಳವೇ ಹೋರಾಟ ಮಾಡಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ, ಸಂಸದ ಪ್ರತಾಪ್‌ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರವು ದಶಪಥ ಹೆದ್ದಾರಿ ಯೋಜನೆಯನ್ನೇನಾದರೂ ಪ್ರತಾಪ್‌ ಸಿಂಹಗೆ ಗುತ್ತಿಗೆ ಕೊಟ್ಟಿದೆಯೇ? ಇಡೀ ಯೋಜನೆಯನ್ನು ನಾನೊಬ್ಬನೇ ಮಾಡಿಸಿದ್ದೇನೆ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದಾರೆ. ನಾನು ಸಹ ಸಂಸದನಾಗಿದ್ದವನು. ದೆಹಲಿಯಲ್ಲಿ ಏನೆಲ್ಲ ಹೋರಾಟ ಮಾಡಿದ್ದೇನೆ ಎಂದು ಆಗಿನ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರ ಇದ್ದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯೋಜನೆಯ ರೂಪುರೇಷೆ ಸಿದ್ಧಪಡಿಸಿ, ಅನುಮೋದನೆ ನೀಡದಿದ್ದರೆ ಹೆದ್ದಾರಿ ಹೇಗೆ ಆಗುತ್ತಿತ್ತು? ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದಿದ್ದರೂ ಈ ಯೋಜನೆಗೆ ಸಹಕಾರ ಕೊಡಲೇಬೇಕಿತ್ತು ಎಂದು ಪುಟ್ಟರಾಜು ಕಿಡಿಕಾರಿದರು.

ಈಗ ಹೆದ್ದಾರಿ ಬಂದಿರುವುದರಿಂದ ಚನ್ನಪಟ್ಟಣ, ರಾಮನಗರ, ಮಂಡ್ಯ, ಶ್ರೀರಂಗಪಟ್ಟಣದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ. ಪ್ರತಾಪ್ ಸಿಂಹ ಹೆಜ್ಜೆ ಹೆಜ್ಜೆಗೂ ಮುಖ್ಯ ಎಂಜಿನಿಯರ್ ಥರ ಆಡುತ್ತಿದ್ದಾರೆ ಎಂದು ಸಿ.ಎಸ್. ಪುಟ್ಟರಾಜು ವ್ಯಂಗ್ಯವಾಡಿದರು.

ಇದನ್ನೂ ಓದಿ: 2nd PU Exam 2023: ಫೀಸ್‌ ಕಟ್ಟದಿದ್ದರೆ ಹಾಲ್‌ ಟಿಕೆಟ್‌ ಇಲ್ಲ: ಪರೀಕ್ಷೆ ಬರೆಯಲು ಬಿಡದ ಕೋಲಾರದ ಕಾಲೇಜು

ಮಂಡ್ಯ ಸಂಸದೆ ಸುಮಲತಾ ‌ಅಂಬರೀಷ್ ಬಿಜೆಪಿ ಸೇರ್ತಾರೆ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಸೇರುತ್ತಾರೆ. ದಶಪಥ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಸೇರ್ಪಡೆ ಆಗುವ ಪ್ಲ್ಯಾನ್‌ ಮಾಡಿದ್ದರು‌. ಆದರೆ, ಸರ್ಕಾರಿ ಕಾರ್ಯಕ್ರಮ ಎಂದು ಅವಕಾಶ ಕೊಡಲಿಲ್ಲ ಎಂದು ಶಾಸಕ ಸಿ.ಎಸ್. ಪುಟ್ಟರಾಜು ಹೇಳಿಕೆ ನೀಡಿದರು.

Exit mobile version