ದೊಡ್ಡಬಳ್ಳಾಪುರ: ಇಲ್ಲಿನ ರಘುನಾಥ ಪುರದಲ್ಲಿ ನಡೆಯುತ್ತಿರುವ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ ಒಂದೇ ಕಾರಿನಲ್ಲಿ ತೆರಳಿದ್ದು ಕುತೂಹಲ ಮೂಡಿಸಿತು.
ಸಿಎಂಬ ಬೊಮ್ಮಾಯಿ ಅವರು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು, ತಮ್ಮ ಮಾರ್ಗದರ್ಶಕರೂ ಆಗಿರುವ ಯಡಿಯೂರಪ್ಪ ಅವರಿಗೆ ಎದುರಿನ ಸೀಟು ಬಿಟ್ಟುಕೊಟ್ಟಿದ್ದು ಕಂಡುಬಂತು.
ಬೆಂಗಳೂರಿನಿಂದ ಈ ಇಬ್ಬರು ನಾಯಕರು ಒಂದೇ ಕಾರಿನಲ್ಲಿ ಹೊರಟಿದ್ದರು. ದೊಡ್ಡ ಬಳ್ಳಾಪುರದಲ್ಲಿ ಅವರು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ದೀರಜ್ ಮುನಿರಾಜ್ ಮನೆಗೆ ಭೇಟಿ ನೀಡಿದ್ದರು. ಇವರಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕಂದಾಯ ಸಚಿವ ಆರ್. ಅಶೋಕ್ ಕೂಡಾ ಜತೆಗಿದ್ದರು.
ಅಲ್ಲಿಂದ ಮುಂದೆ ಸಿಎಂ ಮತ್ತು ಮಾಜಿ ಸಿಎಂ ಇಬ್ಬರೂ ಒಂದೇ ಕಾರಿನಲ್ಲಿ ಹೊರಟರು. ಬೊಮ್ಮಾಯಿ ಅವರು ಮೊದಲೇ ಬಂದು ಹಿಂದಿನ ಸೀಟಿನಲ್ಲಿ ಕುಳಿತುಕೊಂಡರು. ಅಂದರೆ ಮುಂದಿನ ಸೀಟನ್ನು ತಾವಾಗಿಯೇ ಬಿಟ್ಟುಕೊಟ್ಟರು.
ಕಾಮನ್ ಮ್ಯಾನ್ ಸಿಎಂ ಎಂಬ ಖ್ಯಾತಿಯೊಂದಿಗೆ ಸಾಮಾಜಿಕವಾಗಿ ಸರಳತೆ, ಸಜ್ಜನಿಕೆಯೊಂದಿಗೆ ನಡೆದುಕೊಳ್ಳುವ ಅವರು ತಾನು ಮುಖ್ಯಮಂತ್ರಿ ಎಂಬ ಹಮ್ಮು ತೋರದೆ, ಕಾರನ್ನು ಹಂಚಿಕೊಂಡಿದ್ದಲ್ಲದೆ ಹಿರಿತನಕ್ಕೆ ಗೌರವ ಕೊಟ್ಟು ಮುಂದಿನ ಸೀಟು ಬಿಟ್ಟುಕೊಟ್ಟಿದ್ದು ಗಮನ ಸೆಳೆಯಿತು.
ಉಪಸ್ಥಿತ ಗಣ್ಯರು
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ.ಕೆ. ಅರುಣಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಡಿ.ವಿ. ಸದಾನಂದ ಗೌಡ, ಬಸವರಾಜ್, ನಾರಾಯಣ ಸ್ವಾಮಿ, ಮುನಿಸ್ವಾಮಿ, ತೇಜಸ್ವಿ ಸೂರ್ಯ, ಲೇಹರ್ ಸಿಂಗ್, ಸಚಿವರಾದ ಆರಗ ಜ್ಞಾನೇಂದ್ರ, ಮುನಿರತ್ನ, ಎಂ.ಟಿ.ಬಿ ನಾಗರಾಜ್, ಅಂಗಾರ, ಶ್ರೀರಾಮುಲು, ಪ್ರಭು ಚೌಹಾಣ್, ಗೋಪಾಲಯ್ಯ, ಬಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ಬಿ.ಸಿ. ನಾಗೇಶ್, ಶಾಸಕರಾದ ರಾಜ್ ಕುಮಾರ್, ನಾಗೇಶ್, .ಆರ್. ವಿಶ್ವನಾಥ್, ಕೃಷ್ಣಪ್ಪ, ಸುರೇಶ್ ಕುಮಾರ್, ರವಿ ಸುಬ್ರಹ್ಮಣ್ಯ, ಎಂಎಲ್‌ಸಿಗಳಾದ ರವಿಕುಮಾರ್, ವೈ.ಎನ್. ನಾರಾಯಣಸ್ವಾಮಿ, ಚಲವಾದಿ ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ಗೋಪಿನಾಥ ರೆಡ್ಡಿ, ಹೇಮಲತಾ ನಾಯಕ್, ಕೇಶವಪ್ರಸಾದ್, ಬಿಜೆಪಿ ನಾಯಕರಾದ ನಿರ್ಮಲ್ ಕುಮಾರ್ ಸುರಾನಾ, ಬಿ.ವೈ, ವಿಜಯೇಂದ್ರ, ನವೀನ್ ಮತ್ತು ಇತರರು.
ಇದನ್ನೂ ಓದಿ | Modi In Karnataka | ಯಾಕಿಷ್ಟು ಸಣಕಲಾಗಿದ್ದೀರಾ?: ಎಂಟಿಬಿ ನಾಗರಾಜ್‌ಗೆ ಮೋದಿ ಪ್ರಶ್ನೆ!