ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದು ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ಟಿಕೆಟ್ ತಪ್ಪಿಸಿ ಅವರ ಮಾನಸಪುತ್ರ ಮಹೇಶ್ ಟೆಂಗಿನಕಾಯಿಗೆ ಹುಬ್ಬಳ್ಳಿ ಧಾರವಾಡ ಕೇಂದ್ರ ಟಿಕೆಟ್ ಕೊಡಿಸುವಲ್ಲಿ ಬಿ.ಎಲ್. ಸಂತೋಷ್ ಪಾತ್ರವಿದೆ ಎಂದು ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದರು.
ತಮ್ಮ ನಿವಾಸ ಕಾವೇರಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಬಿ. ಎಲ್. ಸಂತೋಷ್ ಹೆಸರು ತಂದಿದ್ದು ಜಗದೀಶ್ ಶೆಟ್ಟರ್ ಗೆ ಶೋಭೆ ತರಲ್ಲ. ಬಿ. ಎಲ್. ಸಂತೋಷ್ ಅವರಿಂದ ಜಗದೀಶ್ ಶೆಟ್ಟಟ್‌ಗೆ ಟಿಕೆಟ್ ತಪ್ಪಿದ್ದು ಎಂಬ ಮಾತು ಸುಳ್ಳು. ಜಗದೀಶ್ ಶೆಟ್ಟರ್‌ಗೆ ಎಲ್ಲ ರೀತಿಯಿಂದಲೂ ಮನವೊಲಿಸುವ ಪ್ರಯತ್ನ ಆಯ್ತು.
ಆದರೆ ಅವರು ಅಂತಿಮವಾಗಿ ಪಕ್ಷ ಬಿಟ್ಟು ಹೋದ್ರು. ಅವರು ಪಕ್ಷ ಬಿಟ್ಟು ಹೋಗಿದ್ರಿಂದ ಬಿಜೆಪಿಗೆ ಏನೂ ನಷ್ಟ ಆಗಲ್ಲ. ಸುಮ್ಮನೆ ಸಂತೋಷ್ ಹೆಸರು ತಂದಿದ್ದು ಕೂಡ ಶೆಟ್ಟರ್‌ಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: BJP Karnataka: ಶೆಟ್ಟರ್, ಸವದಿ ವಾಪಸಾದರೆ ಸ್ವಾಗತ: ಈ ಹಿಂದೆ ನಾನೂ ಅಕ್ಷಮ್ಯ ಅಪರಾಧ ಮಾಡಿದ್ದೆ ಎಂದ ಬಿ.ಎಸ್. ಯಡಿಯೂರಪ್ಪ
ಜಗದೀಶ್ ಶೆಟ್ಟರ್ ನಂಬಿ ಅವರ ಜೊತೆಗೆ ಯಾವ ಕಾರ್ಯಕರ್ತರು ಹೋಗಿಲ್ಲ, ಹಾಗಾಗಿ ಪಕ್ಷಕ್ಕೆ ಹಾನಿಯಾಗೊಲ್ಲ ಎಂದ ಯಡಿಯೂರಪ್ಪ, ನಡ್ಡಾ ಸಹ ಇಂದು ಅಲ್ಲಿಗೆ ಬರ್ತಿದ್ದಾರೆ. ಅವರು ಈ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದಾಗಿತ್ತು. ಇಷ್ಟೆಲ್ಲಾ ರಿಕ್ಷೆಸ್ಟ್ ಮಾಡಿದ್ರು ಅವ್ರು ಒಪ್ಪಿಲ್ಲ.
ಇನ್ನುಮೇಲೆ ಅವ್ರ ದಾರಿ ಅವರಿಗೆ ನಮ್ಮ ದಾರಿ ನಮಗೆ. ಬಿಜೆಪಿ ಬಹುಮತದ ಸರ್ಕಾರ ರಚಿಸುತ್ತದೆ. ರಾಜ್ಯಸಭೆ ಸದಸ್ಯರನ್ನು ಮಾಡುತ್ತೇವೆ ಎಂದರೂ ಶೆಟ್ಟರ್ ಕೇಳಿಲ್ಲ ಎಂದರು.