Site icon Vistara News

BJP Karnataka: ಬ್ಯಾಟರಾಯನಪುರದಲ್ಲಿ ತಮ್ಮೇಶ್‌ ಗೌಡ ಗೆಲುವು ನನ್ನ ಮರ್ಯಾದೆ ಪ್ರಶ್ನೆ: ಬಿ.ಎಸ್‌. ಯಡಿಯೂರಪ್ಪ

bjp karnataka leader bsy calls workers to make thammesh gowda won in byatarayanapura

#image_title

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಿಂದ ತಮ್ಮೇಶ್‌ಗೌಡರನ್ನು ಗೆಲ್ಲಿಸದೇ ಇದ್ದರೆ ನನ್ನ ಮರ್ಯಾದೆ ಉಳಿಯುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬ್ಯಾಟರಾಯನಪುರದಲ್ಲಿ ಟಿಕೆಟ್‌ ಸಿಕ್ಕ ನಂತರ ಬೆಂಬಲಿಗರೊಂದಿಗೆ ಯಡಿಯೂರಪ್ಪ ಅವರನ್ನು ಭೇಟಿಯಾದ ತಮ್ಮೇಶ್‌ ಗೌಡ ಹಾಗೂ ಬೆಂಬಲಿಗರಿಗೆ ಯಡಿಯೂರಪ್ಪ ಈ ಮಾತು ಹೇಳಿದರು.

ಇವನಿಗೋಸ್ಕರ ಮೂರ್ನಾಲ್ಕು ಗಂಟೆ, ಅನೇಕ ಬಾರಿ ಪ್ರಯತ್ನ ಪಟ್ಟು ಟಿಕೆಟ್‌ ಕೊಡಿಸಲಾಗಿದೆ. ಇವನಿಗೋಸ್ಕರ ಹೋರಡಿದ್ದೇವೆ. ಇವನನ್ನು ಗೆಲ್ಲಿಸಿಕೊಂಡು ಬನ್ನಿ. ಇಲ್ಲದಿದ್ದರೆ ನಾನು ತಲೆಯೆತ್ತಿಕೊಂಡು ಓಡಾಡಲು ಆಗುವುದಿಲ್ಲ, ನನ್ನ ಮರ್ಯಾದೆ ಉಳಿಯವುದಿಲ್ಲ. ಇದರ ಮೇಲೆ ನಿಮ್ಮಿಷ್ಟ ಎಂದರು. ತಮ್ಮೇಶ್‌ ಗೌಡರನ್ನು ಗೆಲ್ಲಿಸಿಕೊಂಡುಬರುತ್ತೇವೆ ಎಂದು ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಭರವಸೆ ನೀಡಿದರು.

ನಂತರ ಬಿಜೆಪಿ ಕಚೇರಿಗೆ ಆಗಮಿಸಿದ ತಮ್ಮೇಶ್‌ ಗೌಡ, ಬಿ ಫಾರಂ ಪಡೆದರು. ಈ ಸಂದರ್ಭದಲ್ಲಿ ಮಾತನಡಿ, ರಾಜ್ಯದ ನಾಯಕರು, ರಾಷ್ಟ್ರೀಯ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ್ದಾರೆ. ಮೂರು ಬಾರಿ ಗೆಲ್ಲದ ಬ್ಯಾಟರಾಯನಪುರದಲ್ಲಿ ಬಿಜೆಪಿ ಅರಳಿಸಲು ನಿರ್ಧಾರ ಮಾಡಿದ್ದಾರೆ.

ಬ್ಯಾಟರಾಯನಪುರದ ಬಗ್ಗೆ ವಿಶ್ವಾಸ ಇಟ್ಟಿದ್ರು. ಜನರು ಕೂಡ ಹೊಸ ಮುಖ ಬಯಸಿದ್ದರು. ಯಾವ ಜನ, ಯಾವ ನಾಯಕರು ವಿಶ್ವಾಸ ಇಟ್ಟಿದ್ದಾರೆಯೋ ಅವರ ವಿಶ್ವಸ ಉಳಿಸಿಕೊಳ್ಳುತ್ತೇನೆ ಎಂದರು.

ಮತ್ತಿಬ್ಬರು ಆಕಾಂಕ್ಷಿಗಳಾದ ಎ. ರವಿ ಮತ್ತು ಮುನೀಂದ್ರ ಕುಮಾರ್ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಬ್ಬರೂ ಕೂಡ ಶಾಸಕರಾಗಲು ಅರ್ಹರೇ. ರವಿ ಅವರು ಕಳೆದ ಮೂರು ಬಾರಿ ಸ್ಪರ್ಧೆ ಮಾಡಿದ್ರು. ಮುನೀಂದ್ರ ಕುಮಾರ್ ಕೂಡ ಬಿಜೆಪಿ ಗೆಲ್ಲಿಸೋ ನಿಟ್ಟಿನಲ್ಲಿ ಕೆಲಸ ಮಾಡಿದ್ರು. ಪಕ್ಷ ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ, ಹಾಗಾಗಿ ನನಗೆ ಕೊಟ್ಟಿದ್ದಾರೆ.

ಅವರು ನನ್ನ ಜೊತೆ ಬರ್ತಾರೆ ಅಂತ ನನಗೆ ವಿಶ್ವಾಸ ಇದೆ. ಒಂದೇ ಕುಟುಂಬದವರು, ಒಗ್ಗಟ್ಟಾಗಿ ಕೆಲಸ ಮಾಡ್ತೀವಿ. ಬ್ಯಾಟರಾಯನಪುರದಲ್ಲಿ ಕಮಲ ಅರಳಿಸುತ್ತೇವೆ ಎಂದರು.

ಇದನ್ನೂ ಓದಿ: Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ

Exit mobile version