BJP announces first list for karnataka election 2023Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ Vistara News

ಕರ್ನಾಟಕ

Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ

ಈಗಾಗಲೆ ಎರಡು ಹಂತದಲ್ಲಿ ಕಾಂಗ್ರೆಸ್‌ 166 ಹಾಗೂ ಜೆಡಿಎಸ್‌ 93 ಹೆಸರುಗಳನ್ನು ಘೋಷಣೆ ಮಾಡಿದೆ.

VISTARANEWS.COM


on

BJP announces first list for karnataka election 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗಿಂತ ತಡವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಬಿಜೆಪಿ ಕೊನೆಗೂ ಮಾಡಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಭಾರಿ ಅರುಣ್‌ ಸಿಂಗ್‌ 189 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅರುಣ್‌ ಸಿಂಗ್‌, ಇಡೀ ದೇಶ ಬಿಜೆಪಿ ಹಾಗೂ ಮೋದಿಯವರ ನೇತೃತ್ವಕ್ಕೆ ಬೆಂಬಲ ನೀಡಿದೆ. ಕರ್ನಾಟಕದಲ್ಲಿ ಕರ್ನಾಟಕ ಪಕ್ಷದಲ್ಲಿ ಭಿನ್ನಮತವಿದೆ, ಜೆಡಿಎಸ್‌ ಮುಳುಗುತ್ತಿದೆ. ಬಿಜೆಪಿ ಸದೃಢ ಸಂಘಟನೆ ಹೊಂದಿದೆ ಹೊಂದಿದೆ. ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ಭುತ ಪ್ರಸಿದ್ಧಿಯಿದೆ.

ಕರ್ನಾಟಕವು ಅನೇಕ ವಿಚಾರಗಳಲ್ಲಿ ಮುಂದಿದೆ. ಅನೇಕ ಕಾರಣಗಳಿಗಾಗಿ ಮೋದಿಯವರನ್ನು ಕರ್ನಾಟಕದ ಜನತೆ ಅಭಿನಂದಿಸುತ್ತಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಆಗುತ್ತಿದ್ದ ಅನೇಕ ಸೋರಿಕೆಗಳು ಕರ್ನಾಟಕದಲ್ಲಿ ಪರಿಹಾರವಾಗಿವೆ. ಅನೇಕ ಯಾತ್ರೆಗಳಿಗೆ ಕರ್ನಾಟಕದಲ್ಲಿ ಸಫಲತೆ ಸಿಕ್ಕಿದೆ.

ಈ ಪಟ್ಟಿಯಲ್ಲಿ ಎಲ್ಲಕ್ಕಿಂತ ಮುಖ್ಯ ಅಂಶವೆಂದರೆ ಹೊಸ ಅಭ್ಯರ್ಥಿಗಳಿಗೆ ಅವಕಾಶ. 52 ಹೊಸ ಹೊಸ ವ್ಯಕ್ತಿಗಳಿಗೆ ಟಿಕೆಟ್‌ ನೀಡುತ್ತಿದೆ. ಎಲ್ಲಕ್ಕಿಂತ ಹೆಚ್ಚು 32 ಒಬಿಸಿ ಸಮುದಾಯಕ್ಕೆ, ಎಸ್‌ಸಿ 30, ಎಸ್‌ಟಿ 16 ಅಭ್ಯರ್ಥಿಗಳಿದ್ದಾರೆ. ಇದರಲ್ಲಿ 9 ವೈದ್ಯರು, ನಿವೃತ್ತ ಐಎಎಸ್‌‌, ಐಪಿಎಸ್‌ ಅಧಿಕಾರಿಗಳಿದ್ದಾರೆ. 31 ಸ್ನಾತಕೋತ್ತರ ಪದವೀಧರರು, 8 ಮಹಿಳೆಯರಿದ್ದಾರೆ ಎಂದರು.

 1. ಶಿಗ್ಗಾಂವ್‌- ಬಸವರಾಜ ಬೊಮ್ಮಾಯಿ
 2. ನಿಪ್ಪಾಣಿ- ಶಶಿಕಲಾ ಜೊಲ್ಲೆ
 3. ಚಿಕ್ಕೋಡಿ-ರಮೇಶ್‌ ಕತ್ತಿ
 4. ಅಥಣಿ- ಮಹೇಶ್‌ ಕುಮಠಳ್ಳಿ
 5. ಕಾಗವಾಡ-ಶ್ರೀಮಂತ್‌ ಪಾಟೀಲ್‌
 6. ಕುಡಚಿ- ಪಿ.ರಾಜೀವ್‌
 7. ರಾಯಭಾಗ-ದುರ್ಯೋಧನ ಐಹೊಳೆ
 8. ಹುಕ್ಕೇರಿ-ನಿಖಿಲ್‌ ಕತ್ತಿ
 9. ಅರಭಾವಿ-ಬಾಲಚಂದ್ರ ಜಾರಕಿಹೊಳಿ
 10. ಗೋಕಾಕ್‌-ರಮೇಶ್‌ ಜಾರಕಿಹೊಳಿ
 11. ಯಮಕನಮರಡಿ- ಬಸವರಾಜ್‌ ಹುಂದ್ರಿ
 12. ಬೆಳಗಾವಿ ಉತ್ತರ- ರವಿ ಪಾಟೀಲ್‌
 13. ಬೆಳಗಾವಿ ದಕ್ಷಿಣ- ಅಭಯ್‌ ಪಾಟೀಲ್‌
 14. ಬೆಳಗಾವಿ ಗ್ರಾಮಾಂತರ- ನಾಗೇಶ್‌ ಮರೂಣ್‌ಕರ್‌
 15. ಖಾನಾಪರ್‌- ವಿಠ್ಠಲ್‌ ಹಲಗೇಕರ್‌
 16. ಕಿತ್ತೂರು-ಮಹಂತೇಶ್‌ ದೊಡ್ಡನಗೌಡರ್‌
 17. ಬೈಲಹೊಂಗಲ್‌- ಜಗದೀಶ್‌ ಚೆನ್ನಪ್ಪ
 18. ಸವದತ್ತಿ ಯಲ್ಲಮ್ಮ- ರತ್ನಾ ವಿಶ್ವನಾಥ್‌ ಮಾಮನಿ
 19. ರಾಮದುರ್ಗ-ಚಿಕ್ಕರೇವಣ್ಣ
 20. ಮುಧೋಳ್‌- ಗೋವಿಂದ ಕಾರಜೋಳ
 21. ತೇರದಾಳ್‌- ಸಿದ್ದು ಸವದಿ
 22. ಜಮಖಂಡಿ- ಜಗದೀಶ್‌ ಗುರಗುಂಟಿ
 23. ಬೀಳ್ಗಿ- ಮುರುಗೇಶ್‌ ನಿರಾಣಿ
 24. ಬಾದಾಮಿ- ಶಾಂತಗೌಡ ಪಾಟೀಲ್‌
 25. ಬಾಗಲಕೋಟೆ- ವೀರಣ್ಣ ಚರಂತಿಮಠ್‌
 26. ಹುನಗುಂದ- ದೊಡ್ಡನಗೌಡ ಪಾಟೀಲ್
 27. ಮುದ್ದೆಬಿಹಾಳ್‌-ಎ.ಎಸ್‌. ಪಾಟೀಲ್‌
 28. ಬಬಲೇಶ್ವರ- ಬಿಜುಗೌಡ ಪಾಟೀಲ್‌
 29. ವಿಜಯಪುರ- ಬಸನಗೌಡ ಪಾಟೀಲ್‌ ಯತ್ನಾಳ್
 30. ಸಿಂಧಗಿ- ರಮೇಶ್‌ ಭೂಸನೂರು
 31. ಅಫಜಲಪುರ- ಮಾಲೀಕಯ್ಯ ಗುತ್ತೇದಾರ್‌
 32. ಜೇವರ್ಗ- ಶಿವಾನಂದಗೌಡ ಪಾಟೀಲ್‌
 33. ಸುರಪುರ- ನರಸಿಂಹ ನಾಯಕ್‌
 34. ಶಹಾಪುರ- ಅಮೀನ್‌ ರೆಡ್ಡಿ ಯಲಗಿ
 35. ಯಾದಗಿರಿ- ವೆಂಕಟರೆಡ್ಡಿ ಮುದ್ನಾಳ್‌
 36. ಚಿತ್ತಾಪುರ- ಮಣಿಕಾಂತ ರಾಠೋಡ್‌
 37. ಚಿಂಚೋಳಿ- ಡಾ. ಅವಿನಾಶ್‌ ಜಾಧವ್‌
 38. ಗುಲ್ಬರ್ಗ ಗ್ರಾ- ಬಸವರಾಜ ಮತ್ತಿಮೂಢ
 39. ಗುಲ್ಬರ್ಗ ದಕ್ಷಿಣ- ದತ್ತಾತ್ರೇಯ ಪಾಟೀಲ ರೇವೂರ
 40. ಗುಲ್ಬರ್ಗ ಉತ್ತರ- ಚಂದ್ರಕಾಂತ ಪಾಟೀಲ್
 41. ಆಳಂದ-‌ ಸುಭಾಷ್‌ ಗುತ್ತೇದಾರ್‌
 42. ಬಸವಕಲ್ಯಾಣ- ಶರಣು ಸಲಗಾರ್
 43. ಹುಮನಾಬಾದ್‌-ಸಿದ್ದು ಪಾಟೀಲ್‌
 44. ಬೀದರ್‌ ದಕ್ಷಿಣ- ಶೈಲೇಂದ್ರ ಬೆಳದಾಳೆ
 45. ಔರಾದ್-‌ ಪ್ರಭು ಚವ್ಹಾಣ್
 46. ರಾಯಚೂರು ಗ್ರಾ- ತಿಪ್ಪರಾಜು ಹವಾಲ್ದಾರ್‌
 47. ರಾಯಚೂರು- ಡಾ. ಶಿವರಾಜ ಪಾಟೀಲ್‌
 48. ದೇವದುರ್ಗ- ಶಿವನಗೌಡ ನಾಯಕ್
 49. ಲಿಂಗಸೂರು- ಮಾನಪ್ಪ ವಜ್ಜಲ್‌
 50. ಸಿಂಧನೂರು- ಕೆ.ಕರಿಯಪ್ಪ
 51. ಮಸ್ಕಿ- ಪ್ರತಾಪ್‌ಗೌಡ ಪಾಟೀಲ್‌ʼ
 52. ಕುಷ್ಠಗಿ- ದೊಡ್ಡನಗೌಡ ಪಾಟೀಲ್‌
 53. ಕನಕಗಿರಿ- ಬಸವರಾಜ ದಡೇಸೂಗೂರು
 54. ಯಲಬುರ್ಗ- ಹಾಲಪ್ಪ ಆಚಾರ್‌
 55. ಶಿರಹಟ್ಟಿ- ಡಾ. ಚಂದ್ರು ಲಮಾಣಿ
 56. ಗದಗ್‌- ಅನಿಲ್‌ ಮೆಣಸಿನಕಾಯಿ
 57. ನರಗುಂದ- ಸಿ.ಸಿ. ಪಾಟೀಲ್
 58. ನವಲಗುಂದ- ಶಂಕರ್‌ ಪಾಟೀಲ್‌
 59. ಕುಂದಗೋಳ-‌ ಎಂ.ಆರ್‌. ಪಾಟೀಲ್
 60. ಧಾರವಾಡ- ಅಮೃತ್‌ ದೇಸಾಯಿ
 61. ಹುಬ್ಬಳ್ಳಿ-ಧಾರವಾಡ ಪೂರ್ವ-ಕ್ರಾಂತಿ ಕಿರಣ್‌
 62. ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್
 63. ಹಳಿಯಾಳ್- ಸುನೀಲ್‌ ಹೆಗಡೆ
 64. ಕಾರವಾರ್-‌ ರೂಪಾಲಿ ಸಂತೋಷ್‌ ನಾಯಕ್‌
 65. ಕುಮಟಾ-ದಿನಕರ ಶೆಟ್ಟಿ
 66. ಭಟ್ಕಳ- ಸುನೀಲ್‌ ಬಿಳಿಯಾ ನಾಯ್ಕ
 67. ಶಿರಸಿ- ವಿಶ್ವೇಶ್ವರ್‌ ಹೆಗಡೆ ಕಾಗೇರಿ
 68. ಯಲ್ಲಾಪುರ- ಶಿವರಾಮ್‌ ಹೆಬ್ಬಾರ್‌
 69. ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ
 70. ಹಿರೇಕೆರೂರು- ಬಿ.ಸಿ. ಪಾಟೀಲ್
 71. ರಾಣೆಬೆನ್ನೂರ್‌- ಅರುಣ್‌ ಪೂಜಾರ್‌
 72. ಹಡಗಲಿ- ಕೃಷ್ಣ ನಾಯಕ್‌
 73. ವಿಜಯನಗರ್‌- ಸಿದ್ಧಾರ್ಥ್‌ ಸಿಂಗ್‌
 74. ಕಂಪ್ಲಿ- ಸುರೇಶ್‌ ಬಾಬು
 75. ಶಿರಗುಪ್ಪ- ಸೋಮಲಿಂಗಪ್ಪ
 76. ಬಳ್ಳಾರಿ ಗ್ರಾಮೀಣ- ಬಿ. ಶ್ರೀರಾಮುಲು
 77. ಬಳ್ಳಾರಿ ನಗರ -ಗಾಲಿ ಸೋಮಶೇಖರ ರೆಡ್ಡಿ
 78. ಸಂಡೂರು- ಶಿಲ್ಪಾ ರಾಘವೇಂದ್ರ
 79. ಕೂಡ್ಲಿಗಿ- ಲೋಕೇಶ್‌ ನಾಯಕ್‌
 80. ಮೊಳಕಾಲ್ಮೂರು- ಎಸ್‌. ತಿಪ್ಪೇಸ್ವಾಮಿ
 81. ಚಳ್ಳಕೆರೆ- ಅನಿಲ್‌ ಕುಮಾರ್‌
 82. ಚಿತ್ರದುರ್ಗ- ಜಿ.ಎಚ್‌. ತಿಪ್ಪಾರೆಡ್ಡಿ
 83. ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್‌
 84. ಹೊಸದುರ್ಗ-ಎಸ್‌. ಲಿಂಗಮೂರ್ತಿ
 85. ಹೊಳಲ್ಕೆರೆ- ಎಂ. ಚಂದ್ರಪ್ಪ
 86. ಜಗಳೂರು- ರಾಮಚಂದ್ರ
 87. ಹರಿಹರ-ಬಿ.ಪಿ. ಹರೀಶ್‌
 88. ಹೊನ್ನಾಳಿ-ಎಂ.ಪಿ. ರೇಣುಕಾಚಾರ್ಯ
 89. ಶಿವಮೊಗ್ಗ ಗ್ರಾ- ಅಶೋಕ್‌ ನಾಯಕ್
 90. ಭದ್ರಾವತಿ-‌ ಮಂಗೋಟಿ ರುದ್ರೇಶ್
 91. ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
 92. ಶಿಕಾರಿಪುರ- ಬಿ.ವೈ. ವಿಜಯೇಂದ್ರ
 93. ಸೊರಬ- ಕುಮಾರ್ ಬಂಗಾರಪ್ಪ
 94. ಸಾಗರ- ಹರತಾಳು ಹಾಲಪ್ಪ
 95. ಕುಂದಾಪುರ- ಕಿರಣ್‌ ಕುಮಾರ್‌ ಕೊಡ್ಗಿ
 96. ಉಡುಪಿ- ಯಶ್ಪಾಲ್‌ ಸುವರ್ಣ
 97. ಕಾಪು-ಗುರ್ಮೆ ಸುರೇಶ್‌ ಶೆಟ್ಟಿ
 98. ಕಾರ್ಕಳ- ವಿ. ಸುನಿಲ್‌ ಕುಮಾರ್‌
 99. ಶೃಂಗೇರಿ- ಡಿ.ಎನ್‌. ಜೀವರಾಜ್‌
 100. ಚಿಕ್ಕಮಗಳೂರು- ಸಿ.ಟಿ. ರವಿ
 101. ತರೀಕೆರೆ- ಡಿ.ಎಸ್‌. ಸುರೇಶ್‌
 102. ಕಡೂರು- ಬೆಳ್ಳಿ ಪ್ರಕಾಶ್‌
 103. ಚಿಕ್ಕನಾಯಕಹಳ್ಳಿ- ಮಾಧುಸ್ವಾಮಿ
 104. ತಿಪಟೂರು- ಬಿ.ಸಿ. ನಾಗೇಶ್‌
 105. ತುರುವೇಕೆರೆ- ಮಸಾಲ ಜಯರಾಂ
 106. ಕುಣಿಗಲ್‌- ಕೃಷ್ಣಕುಮಾರ್
 107. ತುಮಕೂರು ನಗರ- ಜ್ಯೋತಿ ಗಣೇಶ್‌
 108. ತುಮಕೂರು ಗ್ರಾ- ಸುರೇಶ್‌ ಗೌಡ
 109. ಕೊರಟಗೆರೆ- ಬಿ.ಎಚ್.‌ ಅನಿಲ್‌ ಕುಮಾರ್‌
 110. ಶಿರಾ- ರಾಜೇಶ್‌ ಗೌಡ
 111. ಪಾವಗಡ- ಕೃಷ್ಣ ನಾಯಕ್‌
 112. ಮಧುಗಿರಿ- ಎಲ್‌.ಸಿ. ನಾಗರಾಜ್‌
 113. ಗೌರಿಬಿದನೂರು- ಡಾ. ಶಶಿಧರ್
 114. ಬಾಗೇಪಲ್ಲಿ- ಎಸ್‌. ಮುನಿರಾಜ್‌
 115. ಚಿಕ್ಕಬಳ್ಳಾಪುರ್- ಡಾ. ಕೆ. ಸುಧಾಕರ್‌
 116. ಚಿಂತಾಂಮ- ವೇಣುಗೋಪಾಲ್‌
 117. ಶ್ರೀನಿವಾಸಪುರ- ಗುಂಜೂರು ಶ್ರೀನಿವಾಸ ರೆಡ್ಡಿ
 118. ಮುಳಬಾಗಿಲು- ಶೀಗೇಹಳ್ಳಿ ಸುಂದರ್‌
 119. ಬಂಗಾರಪೇಟೆ- ಎಂ. ನಾರಾಯಣಸ್ವಾಮಿ
 120. ಕೋಲಾರ- ವರ್ತೂರು ಪ್ರಕಾಶ್‌
 121. ಮಾಲೂರು- ಕೆ.ಎಸ್‌. ಮಂಜುನಾಥ ಗೌಡ
 122. ಯಲಹಂಕ-ಎಸ್.ಆರ್‌. ವಿಶ್ವನಾಥ್‌
 123. ಕೆ.ಆರ್‌. ಪುರ- ಬಿ.ಎ. ಬಸವರಾಜ್
 124. ಬ್ಯಾಟರಾಯನಪುರ- ತಮ್ಮೇಶ್‌ ಗೌಡ
 125. ಯಶವಂತಪುರ- ಎಸ್‌.ಟಿ. ಸೋಮಶೇಖರ್‌
 126. ರಾಜರಾಜೇಶ್ವರಿ ನಗರ- ಮುನಿರತ್ನ
 127. ದಾಸರಹಳ್ಳಿ- ಮುನಿರಾಜು
 128. ಮಹಾಲಕ್ಷ್ಮಿ- ಕೆ. ಗೋಪಾಲಯ್ಯ
 129. ಮಲ್ಲೇಶ್ವರ- ಡಾ. ಸಿ.ಎನ್‌. ಅಶ್ವತ್ಥನಾರಾಯಣ
 130. ಪುಲಿಕೇಶಿ ನಗರ- ಮುರಳಿ
 131. ಸರ್ವಜ್ಞ ನಗರ- ಪದ್ಮನಾಭರೆಡ್ಡಿ
 132. ಸಿ.ವಿ. ರಾಮನ್‌ ನಗರ- ಎಸ್. ರಘು
 133. ಶಿವಾಜಿ ನಗರ-‌ ಎನ್‌.ಚಂದ್ರ
 134. ಶಾಂತಿನಗರ- ಶಿವಕುಮಾರ್
 135. ಗಾಂಧಿನಗರ- ಎ.ಆರ್.‌ ಸಪ್ತಗಿರಿಗೌಡ
 136. ರಾಜಾಜಿನಗರ-ಎಸ್.‌ ಸುರೇಶ್‌ ಕುಮಾರ್
 137. ವಿಜಯನಗರ-‌ ಎಚ್‌.ರವೀಂದ್ರ
 138. ಚಾಮರಾಜಪೇಟೆ- ಭಾಸ್ಕರ ರಾವ್‌
 139. ಚಿಕ್ಕಪೇಟೆ- ಉದಯ್‌ ಗರುಡಾಚಾರ್‌
 140. ಬಸವನಗುಡಿ- ರವಿ ಸುಬ್ರಹ್ಮಣ್ಯ
 141. ಪದ್ಮನಾಭನಗರ- ಆರ್‌. ಅಶೋಕ್
 142. ಬಿಟಿಎಂ‌ ಲೇಔಟ್-ಶ್ರೀಧರ ರೆಡ್ಡಿ
 143. ಜಯನಗರ-‌ ಸಿ.ಕೆ. ರಾಮಮೂರ್ತಿ
 144. ಬೊಮ್ಮನಹಳ್ಳಿ- ಸತೀಶ್‌ ರೆಡ್ಡಿ
 145. ಬೆಂಗಳೂರು ದಕ್ಷಿಣ-ಎಂ ಕೃಷ್ಣಪ್ಪ
 146. ಆನೇಕಲ್‌- ಹುಲ್ಲಹಳ್ಳಿ ಶ್ರೀನಿವಾಸ್‌
 147. ಹೊಸಕೋಟೆ- ಎಂ.ಟಿ. ಬಿ. ನಾಗರಾಜು
 148. ದೇವನಹಳ್ಳಿ- ಪಿಳ್ಳಮುನಿಶಾಮಪ್ಪ
 149. ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು
 150. ನೆಲಮಂಗಲ- ಸಪ್ತಗಿರಿ ನಾಯಕ್‌
 151. ಮಾಗಡಿ- ಪ್ರಸಾದ್‌ ಗೌಡ
 152. ರಾಮನಗರ- ಗೌತಮ್‌ ಗೌಡ
 153. ಕನಕಪುರ- ಆರ್‌. ಅಶೋಕ್‌
 154. ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್‌
 155. ಮಳವಳ್ಳಿ- ಮುನಿರಾಜು
 156. ಮದ್ದೂರ್‌- ಎಸ್‌.ಪಿ. ಸ್ವಾಮಿ
 157. ಮೇಲುಕೋಟೆ- ಡಾ. ಇಂದ್ರೇಶ್‌ ಕುಮಾರ್
 158. ಮಂಡ್ಯ- ಅಶೋಕ್‌‌ ಜಯರಾಂ
 159. ಶ್ರೀರಂಗಪಟ್ಟಣ- ಇಂಡುವಾಳು ಸಚ್ಚಿದಾನಂದ
 160. ನಾಗಮಂಗಲ- ಸುಧಾ ಶಿವರಾಮ್‌
 161. ಕೆ.ಆರ್. ಪೇಟೆ- ನಾರಾಯಣಗೌಡ
 162. ಬೇಲೂರು- ಎಚ್‌.ಕೆ. ಸುರೇಶ್‌
 163. ಹಾಸನ- ಪ್ರೀತಮ್‌ ಗೌಡ
 164. ಹೊಳೆನರಸೀಪುರ- ದೇವರಾಜ ಗೌಡ
 165. ಅರಕಲಗೂಡು- ಯೋಗಾ ರಮೇಶ್‌
 166. ಸಕಲೇಶಪುರ- ಸಿಮೆಂಟ್‌ ಮಂಜು
 167. ಬೆಳ್ತಂಗಡಿ- ಹರೀಶ್‌ ಪೂಂಜಾ
 168. ಮೂಡಬಿದ್ರೆ- ಉಮಾಕಾಂತ್‌ ಕೋಟ್ಯಾನ್‌
 169. ಮಂಗಳೂರು ನಗರ ಉತ್ತರ- ವೈ. ಭರತ್‌ ಶೆಟ್ಟಿ
 170. ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್‌
 171. ಮಂಗಳೂರು – ಸತೀಶ್‌ ಕುಂಪಾಲ
 172. ಬಂಟ್ವಾಳ- ರಾಜೇಶ್‌ ನಾಯ್ಕ್‌
 173. ಪುತ್ತೂರು- ಆಶಾ ತಿಮ್ಮಪ್ಪ
 174. ಸುಳ್ಯ- ಭಾಗೀರಥಿ ಮುರುಳ್ಯ
 175. ಮಡಿಕೇರಿ- ಅಪ್ಪಚ್ಚು ರಂಜನ್‌
 176. ವಿರಾಜಪೇಟೆ- ಕೆ.ಜೆ. ಭೋಪಯ್ಯ
 177. ಪಿರಿಯಾಪಟ್ಟಣ- ವಿಜಯ ಶಂಕರ್‌
 178. ಕೃಷ್ಣರಾಜನಗರ- ವೆಂಕಟೇಶ್‌ ಹೊಸಹಳ್ಳಿ
 179. ಹುಣಸೂರು- ದೇವರಹಳ್ಳಿ ಸೋಮಶೇಖರ್‌
 180. ನಂಜನಗೂಡು- ಬಿ. ಹರ್ಷವರ್ಧನ್‌
 181. ಚಾಮುಂಡೇಶ್ವರಿ-ಕವೀಶ್‌ ಗೌಡ
 182. ಚಾಮರಾಜ- ಎಲ್‌. ನಾಗೇಂದ್ರ
 183. ನರಸಿಂಹ ರಾಜ- ಸಂದೇಶ್‌ ಸ್ವಾಮಿ
 184. ವರುಣ- ವಿ. ಸೋಮಣ್ಣ
 185. ಟಿ. ನರಸೀಪುರ- ಡಾ. ರೇವಣ್ಣ
 186. ಹನೂರು- ಪ್ರೀತಮ್‌ ನಾಗಪ್ಪ
 187. ಕೊಳ್ಳೆಗಾಲ- ಎನ್‌. ಮಹೇಶ್‌
 188. ಚಾಮರಾಜನಗರ- ವಿ. ಸೋಮಣ್ಣ
 189. ಗುಂಡ್ಲುಪೇಟೆ- ನಿರಂಜನಕುಮಾರ್

ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್‌, ಪಟ್ಟಿ ಬಿಡುಗಡೆಗೂ ಮುನ್ನ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. 25 ಸಾವಿರಕ್ಕಿಂತ ಹೆಚ್ಚಿನ ಸಂಘಟನೆಯ ಕಾರ್ಯಕರ್ತರು ಈ ಅಭಿಪ್ರಾಯ ಸಂಗ್ರಹದಲ್ಲಿ ಭಾಗವಹಿಸಿದರು. ನಂತರ ಜಿಲ್ಲಾ ಮಟ್ಟದ ನಾಯಕರಿಂದ ರಾಜ್ಯ ಮಟ್ಟದವರೆಗೆ ಎಲ್ಲ ನಾಯಕರೂ ಚರ್ಚೆ ಮಾಡಿದರು.

ಏಪ್ರಿಲ್‌ 4-5 ರಂದು ರಾಜ್ಯ ಚುನಾವಣಾ ಸಮಿತಿ ಬೆಂಗಳೂರಿನಲ್ಲಿ ಚರ್ಚಿಸಿತು. ಪ್ರತಿ ಕ್ಷೇತ್ರಕ್ಕೂ ಈ ಸಮಿತಿ ಶಿಫಾರಸು ಮಾಡಿತು. ವಿಸ್ತೃತ ರಾಜಕೀಯ ಅನಾಲಿಸಿಸ್‌ ಮಾಡಿತು. ನಂತರ ರಾಷ್ಟ್ರ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಯಿತು. 21ನೇ ಶತಮಾನದಲ್ಲಿ ಈ ದೇಶದ ಜನರು ಬಿಜೆಪಿ ಹಾಗೂ ನರೇಂದ್ರ ಮೋದಿಯವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹೊಸ ಶತಮಾನದಲ್ಲಿ ಹೊಸ ಆಲೋಚನೆಯ ನಾಯಕರು ಹೊರಹೊಮ್ಮಬೇಕು ಎಂಬ ಆಶಯವನ್ನು ಈ ಪಟ್ಟಿ ಹೊಂದಿದೆ.

ಇದನ್ನೂ ಓದಿ: Karnataka Elections : ಈಶ್ವರಪ್ಪ, ಶೆಟ್ಟರ್‌ ಫುಲ್‌ ಟೀಮ್‌ ತೆಗೀತೇವೆ; 20 ತಿಂಗಳ ಹಿಂದಿನ ನಳಿನ್‌ ಮಾತು ನಿಜವಾಯ್ತು! ಆಡಿಯೊ ಮತ್ತೆ ವೈರಲ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

VISTARANEWS.COM


on

Vistara News impact, Governmet to scrap 7 d rule of SCSP and TSP act
Koo

ಬೆಳಗಾವಿ: ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಹಾಗೂ ಅವರು ಮಂತ್ರಿ ಮಂಡಲ ಸದಸ್ಯರು ಗುರುವಾರ ಸಚಿವ ಸಂಪುಟ ನಡೆಸಿ(Cabinet Meeting), ಪ್ರಮುಖ ನಿರ್ಧಾರಗಳನ್ನು ಕೈಗೊಂಡರು. ಈ ಪೈಕಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮಕ್ಕೆ ತಿದ್ದುಪಡಿ (SCSP and TSP act) ತರಲು ರಾಜ್ಯ ಸಚಿವ ಸಂಪುಟವು ತನ್ನ ಒಪ್ಪಿಗೆಯನ್ನು ನೀಡಿದೆ. ಈ ಸಮುದಾಯಗಳಿಗೆ ಮೀಸಲಾದ ಹಣವನ್ನು ಸರ್ಕಾರವು ಅನ್ಯ ಕಾರ್ಯಗಳಿಗೆ ಬಳಸುತ್ತಿದೆ ಎಂದು ವಿಸ್ತಾರ ನ್ಯೂಸ್ (Vistara News) ವರದಿ ಮಾಡಿತ್ತು. ಅದರ ಬೆನ್ನಲ್ಲೇ, ಸಂಪುಟ ಸಭೆಯಲ್ಲಿ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು, ನಿಯಮ 7-ಡಿ ರದ್ದು ಮಾಡಲು ಒ್ಪಪಿಗೆ ನೀಡಿದೆ. ಈ ಸಮುದಾಯಗಳಿಗೆ ಮೀಸಲಿದ್ದ ಹಣವನ್ನು ರಾಜ್ಯ ಸರ್ಕಾರವು ರಸ್ತೆ, ಚರಂಡಿ, ಫ್ಲೈಓವರ್, ನೀರಾವರಿ ಯೋಜನೆಗಳಿಗೆ ಸರ್ಕಾರ ಬಳಿಕೊಳ್ಳುತ್ತಿತ್ತು. ಇದಕ್ಕೆ ನಿಯಮ 7-ಡಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈಗ ಅದೇ ನಿಯಮನ್ನು ತಿದ್ದುಪಡಿ ಮಾಡಲಾಗುತ್ತಿದ್ದು, ಮೀಸಲಾದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಎಸ್‌ಸಿ ಮತ್ತು ಎಸ್‌ಟಿ ಮೀಸಲಿಗೆ ಇದ್ದ ಸುಮಾರು 10 ಸಾವಿರ ಕೋಟಿ ರೂ. ಬಳಸಿತ್ತು. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ ಮತ್ತು ಎಸ್‌ಟಿ ಮೀಸಲು ಹಣ ಬಳಕೆ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಸಾರ ಮಾಡಿತ್ತು.

ಎಸ್‌ಸಿಎಸ್‌ಪಿಟಿ ಟಿಎಸ್‌ಪಿ ಎಂದರೆ ಏನು?

ಷೆಡ್ಯೂಲ್‌ ಕ್ಯಾಸ್ಟ್‌ ಸಬ್‌‌ ಪ್ಲಾನ್‌‌ (ಎಸ್‌‌ಸಿಎಸ್‌ಪಿ). ಟ್ರೈಬಲ್‌ ಸಬ್‌ ಪ್ಲಾನ್‌‌( ಟಿಎಸ್‌‌‌ಪಿ). ಎಸ್‌‌ಸಿಎಸ್‌‌ಟಿ ಸಮುದಾಯಕ್ಕೆ ನೇರವಾಗಿ ತಲುಪುವ ಯೋಜನೆ ರೂಪಿಸಬೇಕು. ಉದಾಹರಣೆಗೆ ಎಸ್‌‌ಸಿಎಸ್‌ಟಿ ಮಕ್ಕಳಿಗೆ ವಿದ್ಯಾರ್ಥಿವೇತನ, ಎಸ್‌ಸಿಎಸ್‌ಟಿಗಳಿಗೆ ಮನೆ ನಿರ್ಮಾಣ, ಬೋರ್‌ವೆಲ್‌‌, ಕಾಲನಿಗಳಲ್ಲಿ ಮೂಲಸೌಕರ್ಯ, ಇತ್ಯಾದಿ… ಎಲ್ಲ ಸಾರ್ವಜನಿಕರಿಗೂ ಉಪಯೋಗವಾಗುವ ಸಾರ್ವತ್ರಿಕ ಯೋಜನೆಗಳಿಗೆ ಈ ಹಣವನ್ನು ಬಳಸುವಂತಿಲ್ಲ. ಉದಾಹರಣೆಗೆ, ಊರಿನ ರಸ್ತೆ ನಿರ್ಮಿಸಿ ಇದರಲ್ಲಿ ಇಎಸ್‌ಸಿಎಸ್‌ಟಿಗಳೂ ಓಡಾಡುತ್ತಾರೆ ಎನ್ನುವುದು, ಉಚಿತ ಬಸ್‌‌ನಲ್ಲಿ ಎಸ್‌ಸಿಎಸ್‌‌ಟಿ ಮಹಿಳೆಯರೂ ಓಡಾಡುತ್ತಾರೆ ಎನ್ನುವುದು, ಇತ್ಯಾದಿ. ಕಾಯ್ದೆಯಲ್ಲಿ 7(ಡಿ) ಎಂಬ ಕಲಂ ಅನ್ವಯ, ಸಾರ್ವತ್ರಿಕ ಯೋಜನೆಗಳನ್ನೂ ಎಸ್‌ಸಿಎಸ್‌ಟಿಗಳು ಬಳಸುತ್ತಾರೆ ಎಂದು ಭಾವಿಸಿ (ಡೀಮ್ಡ್‌) ಒಂದಷ್ಟು ಎಸ್‌ಸಿಎಸ್‌ಟಿ ಮೀಸಲು ನಿಧಿಯಿಂದ ಪಡೆಯಲು ಅವಕಾಶವಿದೆ.

-ಕರ್ನಾಟಕದಲ್ಲಿ ಎಸ್‌‌ಸಿಎಸ್‌‌ಪಿ ಟಿಎಸ್‌‌ಪಿ ಅನುದಾನ ಒಟ್ಟು ಬಜೆಟ್‌‌‌ನ ಶೇ.24 ಇರುತ್ತದೆ. ಈ ವರ್ಷ ಬಜೆಟ್‌‌ನಲ್ಲಿ 31 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಎಸ್‌ಸಿಎಸ್‌ಟಿ ಹಣವನ್ನು ಗ್ಯಾರಂಟಿಗೆ ಬಳಸಬಾರದು ಎಂದು ಬಿಜೆಪಿ ಈ ಹಿಂದೆ ಆಕ್ಷೇಪಿಸಿತ್ತು.

2013ರ ಕಾಂಗ್ರೆಸ್ ಸರ್ಕಾರದಿಂದ ಜಾರಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಅಧಿನಿಯಮ ಜಾರಿ ಮಾಡಿತ್ತು. ಇದರ ಅನುಸಾರ ಜನಸಂಖ್ಯೆಗೆ ತಕ್ಕಂತೆ ಆ ಸಮುದಾಯಗಳಿಗೆ ಬಜೆಟ್‌ನಲ್ಲಿ ಹಣ ಮೀಸಲು ಮಾಡಲಾಯಿತು. ಅದು ಸುಮಾರು ಬಜೆಟ್‍‌ನ ಶೇಕಡಾ 23 ರಷ್ಟು ಆಗುತ್ತಿತ್ತು. ಮೀಸಲಾರಿಸಿದ ಹಣ ಆ ವರ್ಷದಲ್ಲಿ ಖರ್ಚು ಆಗದಿದ್ರೆ ಅದು ಮುಂದಿನ ವರ್ಷಕ್ಕೆ ಕ್ಯಾರಿ ಓವರ್ ಆಗುತ್ತಿತ್ತು. ಇದರಿಂದ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯ ನಾಲ್ಕು ವರ್ಷಗಳ ಕಾಲ ಹಣ ಖರ್ಚು ಆಗದೇ ಉಳಿಯಿತು. ಹೀಗಾಗಿ ಇದನ್ನ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ತೀರ್ಮಾನ ಮಾಡಿದ ಅಂದಿನ ಕ್ಯಾಬಿನೆಟ್ 7 ನಿಯಮಕ್ಕೆ ತಿದ್ದುಪಡಿ ತಂದು 7-ಡಿ ಸೇರಿಸಲಾಯಿತು. ಆ ಮೂಲಕ ವೆಚ್ಚವಾಗದೇ ಉಳಿದ ಹಣವನ್ನು ಸಾರ್ವಜನಿಕ ಹಿತಾಸಕ್ತಿ ಯೋಜನೆಗಳಿಗೆ ಈ ಹಣ ಬಳಸಬಹುದು ಅನ್ನೋ ತಿದ್ದುಪಡಿ ತರಲಾಯಿತು

ಬಳಿಕ ಬಂದ ಸಮ್ಮಿಶ್ರ ಸರ್ಕಾರ, ಯಡಿಯೂರಪ್ಪ, ಬೊಮ್ಮಯಿ ಸರ್ಕಾರದಲ್ಲಿ ಈ ಹಣವನ್ನ ನೀರಾವರಿ ಸೇರಿದಂತೆ ಫ್ಲವರ್ ಹಾಗೂ ಇಂದಿನ ಸರ್ಕಾರ ಗ್ಯಾರೆಂಟಿಗಳಿಗೆ ಬಳಸಲಾಯಿತು. ಹೀಗಾಗಿ ಇದು ದೊಡ್ಡ ಸುದ್ದಿಯಾದ ಬೆನ್ನಲ್ಲೇ ತಿದ್ದುಪಡಿ ತರಲು ಮುಂದಾಗಿದೆ. ಸರ್ಕಾರ ಇದು ಸಮುದಾಯಕ್ಕೆ ರೀಚ್ ಆಗಿ ಎಚ್ಚೇತ್ತುಕೊಂಡ್ರೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ನಿಲ್ಲಬಹುದು ಅನ್ನೋ ಲೆಕ್ಕಾಚಾರ ಹಾಕಿ ಈಗ ತಿದ್ದುಪಡಿ ಮಾಡುತ್ತಿದೆ.

ಡಿಕೆಶಿ ಮೇಲಿನ ಸಿಬಿಐ ಕೇಸ್ ವಾಪಸ್ ತೆಗೆದುಕೊಳ್ಳುವ ವಿಚಾರ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೇಲಿನ ಸಿಬಿಐ ಕೇಸ್ ವಾಪಸ್ ತೆಗೆದುಕೊಳ್ಳುವ ನಿರ್ಧಾರವನ್ನು ಇಂದಿನ ಸಚಿವ ಸಂಪುಟದ ಸಭೆಯಲ್ಲಿ ಕ್ರಮ ಬದ್ಧ ಮಾಡಲು ಒಪ್ಪಿಗೆ ನೀಡಲಾಯಿತು. ಕಳೆದ ಬಾರಿ ಸಂಪುಟ ಸಭೆಯಲ್ಲಿ ಸಿಬಿಐಗೆ ವಹಿಸಿದ್ದ ಕೇಸ್ ವಾಪಸ್ ಪಡೆಯಲು ನಿರ್ಧರಿಸಲಾಗಿತ್ತು.

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್

ರೈತರು ನೀರಾವರಿ ಪಂಪ್ ಸೆಟ್‌ಗಳಿಗೆ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಬೇಕು ಎಂಬ ಆದೇಶ ವಿಚಾರ ಮುಂದಿನ ಸಂಪುಟ ಸಭೆಯಲ್ಲಿ ತಗೆದುಕೊಳ್ಳಲು ನಿರ್ಧಾರ ಮಾಡಲಾಯಿತು.ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕದ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ನಿರ್ಣಯಕ್ಕೆ ಸ್ಚಪಕ್ಷ ಸೇರಿದಂತೆ ವಿಪಕ್ಷಗಳು ಮತ್ತು ರೈತ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. ಸದ್ಯಕ್ಕೆ ಈ ನಿರ್ಣಯವನ್ನ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಓದಿ: Karnataka Drought: ಬರ ಪರಿಹಾರ ಭಿಕ್ಷೆಯಲ್ಲ, ಅದು ರಾಜ್ಯದ ತೆರಿಗೆ ಹಣ ಎಂದ ಸಿದ್ದರಾಮಯ್ಯ

Continue Reading

Fact Check

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Fact Check: ಸ್ಟಾರ್ ಗುರುತಿರುವ 500 ರೂ. ನೋಟು ನಕಲಿ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಆರ್‌ಬಿಐ ಏನು ಹೇಳಿದೆ?

VISTARANEWS.COM


on

Is 500 note with star symbol is fake, What Fact Check says?
Koo

ಬೆಂಗಳೂರು: ಚುಕ್ಕೆ(ಸ್ಟಾರ್) ಗುರುತು ಇರುವ (Star Symbol) 500 ರೂ. ನೋಟುಗಳು ನಕಲಿ (Fake Rs 500 notes), ಆ ನೋಟುಗಳನ್ನು ಬ್ಯಾಂಕ್‌ಗೆ ವಾಪಸ್ ಮಾಡಿ (Return to Bank) ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ಜೋರಾಗಿದೆ. ಹಲವರು ಈ ಸುದ್ದಿಯನ್ನು ನಂಬಿ ನೋಟುಗಳನ್ನು ವಾಪಸ್ ಮಾಡಲು ಮುಂದಾದ ಉದಾಹರಣೆಗಳಿವೆ. ಈ ಸುದ್ದಿ ಕಳೆದ ಐದಾರು ತಿಂಗಳಿಂದ ಚಾಲ್ತಿಯಲ್ಲಿದ್ದು, ಈ ಕುರಿತು ಆಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಣೆ ನೀಡಿದೆ(Reserve bank of India). ಆದರೂ ಈ ವದಂತಿ ನಿಲ್ಲುತ್ತಿಲ್ಲ. ಪಿಐಬಿ ಫ್ಯಾಕ್ಟ್ ಚೆಕ್(PIB Fact Check), ಸ್ಟಾರ್‌ ಗುರುತಿರುವ ನೋಟುಗಳು ನಕಲಿ ಅಲ್ಲ; ಅಸಲಿ ಎಂದು ಈಗ ಮತ್ತೆ ಟ್ವೀಟ್ ಮಾಡಿದೆ.

500 ರೂ. ನೋಟು ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಕುರಿತು ಆರ್‌ಬಿಐ ಈ ಹಿಂದೆಯೇ ಮಾಹಿತಿ ನೀಡಿದೆ. ಸ್ಟಾರ್ ಗುರುತು ಈ ನೋಟುಗಳು ಚಲಾವಣೆಯ ಒಂದು ಭಾಗವಾಗಿದೆ. ನಕ್ಷತ್ರ ಚಿಹ್ನೆಯು ಸರಳವಾಗಿ ಗುರುತಿಸುವಿಕೆಯ ಭಾಗವಾಗಿದೆ. ಅಂದರೆ, ಈ ನೋಟು ಮರುಮುದ್ರಣಗೊಂಡ ಅಥವಾ ಬದಲಿಸಲಾದ ನೋಟಿಗೆ ಬದಲಿಯಾಗಿ ಚಲಾವಣೆಯಾಗುತ್ತಿರುವ ನೋಟು ಎಂದು ಆರ್‌ಬಿಐ ಹೇಳಿದೆ.

ಇದರರ್ಥ ನೋಟು ಮೂಲತಃ ದೋಷದಿಂದ ಮುದ್ರಿಸಲ್ಪಟ್ಟಿರುತ್ತದೆ. ಆ ನೋಟನ್ನು ಸ್ಟಾರ್ ಗುರುತಿನ ಚಿಹ್ನೆ ಹೊಸ ನೋಟಿನೊಂದಿಗೆ ಬದಲಾಯಿಸಲಾಗಿರುತ್ತದೆ. ಈ ನೋಟುಗಳು ಮೌಲ್ಯವು ಕಾನೂನುಬದ್ಧವಾಗಿರುತ್ತದೆ. ನಕ್ಷತ್ರ ಚಿಹ್ನೆಯೊಂದಿಗೆ ನೋಟುಗಳ ಮೊದಲ ಸರಣಿಯು 2006 ರಲ್ಲಿ ಚಲಾವಣೆ ಆಗಲಾರಂಭಿಸಿದವು ಎಂದು ಆರ್‌ಬಿಐ ಹೇಳಿದೆ.

ಸ್ಟಾರ್ ಗುರುತಿರುವ ಈ ನೋಟುಗಳು ನಕಲಿ ಎಂಬ ಕುರಿತು ಸಾಕಷ್ಟು ಪೋಸ್ಟ್‌ಗಳು ಐದಾರು ತಿಂಗಳ ಹಿಂದೆ ಟ್ವಿಟರ್ ಮತ್ತು ಫೇಸ್‍‌ಬುಕ್‌ನಲ್ಲಿ ಹರಿದಾಡಿದ್ದವು. ಜನರು ಈ ಕೂಡ ನಕಲಿ ಸುದ್ದಿಯನ್ನು ನಿಜವೆಂದೇ ನಂಬಿದ್ದರು. ಈಗ ಮತ್ತೆ ಅಂಥದ್ದೇ ಪುಕಾರುಗಳು ಎದ್ದಿವೆ. ಆದರೆ, ಸ್ಟಾರ್ ಗುರುತಿರುವ ನೋಟುಗಳು ಖಂಡಿತವಾಗಿಯೂ ನಕಲಿಯಲ್ಲ, ಅಸಲಿಯಾಗಿದ್ದು, ಕಾನೂನು ಬದ್ಧ ಮಾನ್ಯತೆ ಇದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: Fact Check Cell : ಸರ್ಕಾರದ ಫ್ಯಾಕ್ಟ್‌ ಚೆಕ್‌ ಪ್ರಯತ್ನಕ್ಕೆ ಹಿನ್ನಡೆ; ಮಾನ್ಯತೆ ಪಡೆದ ಚೆಕರ್ಸ್‌ ನಿರಾಸಕ್ತಿ, ಯಾಕೆ?

Continue Reading

ಶಿವಮೊಗ್ಗ

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

Shivamogga News: ಸೊರಬ ತಾಲೂಕಿನ ಮಾವಲಿ ವಲಯದ ಯಕ್ಷಿ ಗ್ರಾಮದಲ್ಲಿ ನೂತನವಾಗಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

VISTARANEWS.COM


on

Inauguration of Hulleshwar Jnana vikas Center at Yakshi Village
ಸೊರಬ ತಾಲೂಕಿನ ಮಾವಲಿ ವಲಯದ ಯಕ್ಷಿ ಗ್ರಾಮದಲ್ಲಿ ನೂತನವಾಗಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಜರುಗಿತು.
Koo

ಸೊರಬ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈವರೆಗಿನ ಸಾಧನೆ, ಮಹಿಳಾ ಸಬಲೀಕರಣಕ್ಕಾಗಿ (Women Empowerment) ಮಾತೃಶ್ರೀ ಹೇಮಾವತಿ ಅಮ್ಮನವರು ನೀಡಿರುವ ವಿಶೇಷ ಯೋಜನೆಗಳಗಿದ್ದು ಅವುಗಳಲ್ಲಿ ಜ್ಞಾನ ವಿಕಾಸ ಯೋಜನೆ ಅತ್ಯಂತ ಮುಖ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ತಿಳಿಸಿದರು.

ತಾಲೂಕಿನ ಮಾವಲಿ ವಲಯದ ಯಕ್ಷಿ ಗ್ರಾಮದಲ್ಲಿ ಹೊಸದಾಗಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರವನ್ನು ಅವರು ಉದ್ಘಾಟಿಸಿ, ಕೇಂದ್ರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕಾದರೆ ಕೇಂದ್ರದಲ್ಲಿನ ಪ್ರತಿಯೊಂದು ಸದಸ್ಯರ ಹೊಂದಾಣಿಕೆ ಅತೀ ಮುಖ್ಯವಾಗಿರುತ್ತದೆ ಎಂದರು.

ಕೇಂದ್ರದಲ್ಲಿ ಪ್ರತಿ ತಿಂಗಳು ವಿವಿಧ ರೀತಿಯ ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಗಳನ್ನು ನೀಡುವಂತಹ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಇದರ ಸದುಪಯೋಗವನ್ನು ತಾವೆಲ್ಲರೂ ಪಡೆಯಬೇಕು.

ಇದನ್ನೂ ಓದಿ: Karnataka Drought: ಮುಂದಿನ ವಾರ ಡಿಬಿಟಿ ಮೂಲಕ ರೈತರಿಗೆ ಬರ ಪರಿಹಾರ; 2 ಸಾವಿರ ರೂ.ವರೆಗೆ ಜಮೆ

ಜ್ಞಾನ ವಿಕಾಸ ಕಾರ್ಯಕ್ರಮ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆಯಾಗಿದೆ. ಪ್ರತಿಯೊಬ್ಬರೂ ಯಾವುದೇ ಸಂಕೋಚವಿಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಒಂದು ಉತ್ತಮ ಮಾದರಿ ಕೇಂದ್ರವಾಗಿ ಗುರುತಿಸುವಂತಾಗಬೇಕು ಎಂದರು.

ಗ್ರಾಮದ ಮುಖಂಡ ಮಂಜಪ್ಪ ಮಾತನಾಡಿದರು.

ಇದನ್ನೂ ಓದಿ: Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾಕಿ ರಾಧಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ, ಸೇವಾ ಪ್ರತಿನಿಧಿ ಮಲ್ಲಮ್ಮ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

Belagavi Winter Session : ಕೃಷ್ಣ ಭಾಗ್ಯ ಜಲ ನಿಗಮದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ 6 ನೀರಾವರಿ ಯೋಜನೆಗಳಲ್ಲಿ 3, ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ 11 ಯೋಜನೆಗಳು ಪೂರ್ಣಗೊಂಡಿವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

VISTARANEWS.COM


on

14 Medium and Large Irrigation Projects Completed in Kalyana Karnataka says Minister Ramalinga reddy
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ.
Koo

ಬೆಳಗಾವಿ: ಕೃಷ್ಣ ಭಾಗ್ಯ ಜಲ ನಿಗಮದ ಅಡಿಯಲ್ಲಿ ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ 6 ನೀರಾವರಿ ಯೋಜನೆಗಳಲ್ಲಿ (Irrigation Projects) ಮೂರು, ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ 11 ಯೋಜನೆಗಳು ಪೂರ್ಣಗೊಂಡಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್‌ನಲ್ಲಿ ಗುರುವಾರ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ವಿಧಾನ ಪರಿಷತ್‌ ಸದಸ್ಯ ತಳವಾರ ಸಾಬಣ್ಣ ಅವರು, ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ವ್ಯಾಪ್ತಿಯಲ್ಲಿರುವ ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳು ಮತ್ತು ಈ ಯೋಜನೆಗಳಿಗೆ ಕಳೆದ 5 ವರ್ಷಗಳಲ್ಲಿ ಮಾಡಿದ ವೆಚ್ಚ, ಕಾಲುವೆಗಳ ದುಸ್ಥಿತಿ ಸೇರಿದಂತೆ ಅಧಿಕಾರಿಗಳ, ಗುತ್ತಿಗೆದಾರರ ವಂಚನೆ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಇದನ್ನೂ ಓದಿ: Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

ಎರಡು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಗೆಜೆಟ್ ತಯಾರಾಗಬೇಕು. ಈ ವೇಳೆ ಆಂಧ್ರ ಮತ್ತು ತೆಲಂಗಾಣ ರಾಜ್ಯದವರು ಗೆಜೆಟ್ ತಯಾರಿಸದಂತೆ ನ್ಯಾಯಲಯದ ಮೊರೆ ಹೋದ ಕಾರಣ ಕೆಲಸ ಮುಂದುವರೆದಿಲ್ಲ. ಬೂದಿಹಾಳ- ವೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ವ್ಯಾಪ್ತಿಯ ಕೃಷ್ಣ ಜಲಭಾಗ್ಯ ನಿಗಮದ ಯೋಜನೆಗಳಿಗೆ 1,306 ಕೋಟಿ ಹಣವನ್ನು ಕಳೆದ 5 ವರ್ಷದಲ್ಲಿ ವೆಚ್ಚ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗಮದ 11 ಯೋಜನೆಗಳಿಗೆ ಕಳೆದ 5 ವರ್ಷದಲ್ಲಿ 489 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

ಹೂಳು, ಅವಶ್ಯಕ ದುರಸ್ತಿ ಸೇರಿದಂತೆ ನೀರು ಹರಿಸಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ಟೆಂಡರ್‌ಗಳನ್ನು ಇ- ಪ್ರಕ್ಯೂರ್ಮೆಂಟ್ ಮೂಲಕವೇ ಪಾರದರ್ಶಕವಾಗಿ ಮಾಡಲಾಗಿದೆ. ಗುಣಮಟ್ಟ ಖಾತರಿಗೂ ಆದ್ಯತೆ ನೀಡಲಾಗಿದ್ದು, ಯಾವುದೇ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳನ್ನು ನೀಡುತ್ತಿಲ್ಲ ಎಂದು ಹೇಳಿದರು.

Continue Reading
Advertisement
Vistara News impact, Governmet to scrap 7 d rule of SCSP and TSP act
ಕರ್ನಾಟಕ5 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್6 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್6 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ6 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check7 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20237 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Inauguration of Hulleshwar Jnana vikas Center at Yakshi Village
ಶಿವಮೊಗ್ಗ8 hours ago

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

14 Medium and Large Irrigation Projects Completed in Kalyana Karnataka says Minister Ramalinga reddy
ಕರ್ನಾಟಕ8 hours ago

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

More than a hundred people from Kiravatti have joined the Congress party
ಉತ್ತರ ಕನ್ನಡ8 hours ago

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

Vistara Top 10 News 7-12
ಕರ್ನಾಟಕ8 hours ago

VISTARA TOP 10 NEWS : ಮೌಲ್ವಿ ಐಸಿಸ್‌ ಸಂಪರ್ಕ ನಿಜವೇ? ಹಳೆಪಿಂಚಣಿ ಮರುಜಾರಿ ಖಚಿತವೇ? ಇತರ ಪ್ರಮುಖ ಸುದ್ದಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ10 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ11 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ17 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 days ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌