Site icon Vistara News

BJP Karnataka: ಬಿಬಿಎಂಪಿ ಸಭೆಯಲ್ಲಿ ಸುರ್ಜೆವಾಲಗೆ ಏನು ಕೆಲಸ?: ಸಾಕ್ಷಿ ಸಮೇತ ಸರ್ಕಾರವನ್ನು ತರಾಟೆ ತೆಗೆದುಕೊಂಡ ಬಿಜೆಪಿ

Randeep singh surjewala BBMP Meeting

#image_title

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಭಾಗವಹಿಸಿದ್ದಕ್ಕೆ ರಾಜ್ಯ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದೊಂದಿಗೆ ಯಾವುದೇ ಅಧಿಕೃತ ಸಂಬಂಧ ಇರದ ಸುರ್ಜೆವಾಲ ಅವರು ಈ ಸಭೆಯಲ್ಲಿ ಹೇಗೆ ಭಾಗವಹಿಸಿದರು? ಇದು ಡೀಲ್‌ ಫಿಕ್ಸಿಂಗ್‌ ಸಭೆಯೇ ಎಂದು ಪ್ರಶನಿಸಿದೆ. ಬಿಜೆಪಿ ಹಂಚಿಕೊಂಡಿರುವ ಫೋಟೊದಲ್ಲಿ ಅಧಿಕಾರಿಗಳಾದ ರಾಕೇಶ್‌ ಸಿಂಗ್‌, ತುಷಾರ್‌ ಗಿರಿನಾಥ್‌ ಇರುವುದು ಕಾಣುತ್ತಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, “ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಎಟಿಎಂ ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು…? ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ..? ಇದು 85% ಡೀಲ್‌ ಫಿಕ್ಸಿಂಗ್ ಸಭೆಯೇ..? ಉತ್ತರಿಸಿ ಮಾನ್ಯ ಸಿದ್ದರಾಮಯ್ಯ ಅವರೇ ಹಾಗೂ ಡಿ.ಕೆ. ಶಿವಕುಮಾರ್‌ ಅವರೇ” ಎಂದು ಟ್ವೀಟ್‌ ಮಾಡಿದೆ.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹ ಈ ಕುರಿತು ಟ್ವೀಟ್‌ ಮಾಡಿದ್ದಾರೆ. “ಇದು ಯಾವ ಸಭೆ? ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಡೆಸುವ ಸಭೆಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿಗಳಿಗೆ ಏನು ಕೆಲಸ? ಬಿಬಿಎಂಪಿ ಚುನಾವಣೆಗೆ ಸಂಗ್ರಹ ಮಾಡಲು ಸೂಚಿಸಿದ್ದಾರೆಯೇ? ಬಿಬಿಎಂಪಿ ವಾರ್ಡ್ ಮರುವಿಂಗಡಣೆಯನ್ನು ಸುರ್ಜೆವಾಲರವರ ನೇತೃತ್ವದಲ್ಲಿ ಮಾಡುತ್ತಿದ್ದೀರಾ? ಇಂತಹ ಸಭೆಗಳಲ್ಲಿ ಯಾವ ಅನುಮತಿಯೊಂದಿಗೆ ಈ ಅಧಿಕಾರಿಗಳು ಪಾಲ್ಗೊಂಡಿದ್ದಾರೆಸಿದ್ದರಾಮಯ್ಯ ಅವರೇ?” ಎಂದಿದ್ದಾರೆ.

ಇದನ್ನೂ ಓದಿ: Lakshmi Hebbalkar: ಇಲಾಖೆಯಲ್ಲಿ ಚನ್ನರಾಜ್‌ ಮೂಗು ತೂರಿಸಿದರೆ ಚೆನ್ನಾಗಿರಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸುರ್ಜೆವಾಲ ವಾರ್ನಿಂಗ್‌!

Exit mobile version