Site icon Vistara News

ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ ಪ್ರಕರಣ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಹರೀಶ್ ಪೂಂಜಾಗೆ

ಮಂಗಳೂರು: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ ಪ್ರಕರಣದಲ್ಲಿ ನಗರದ ಫಳ್ನೀರ್ ನಿವಾಸಿ ರಿಯಾಜ್(38)ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಆತನ ಬಳಿ ಯಾವುದೇ ಮಾರಕಾಸ್ತ್ರ ಪತ್ತೆಯಾಗಿಲ್ಲ. ಕಾರು ಓವರ್ ಟೇಕ್ ವಿಚಾರದಲ್ಲಿ ಶಾಸಕರಿದ್ದ ಕಾರು ತಡೆದು ಅವಾಚ್ಯ ನಿಂದನೆ ಮಾಡಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಎಸ್‌ಪಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Drunk and Drive | ಫೈನ್ ಹಾಕಿದ್ದಕ್ಕೆ ತಿಂಗಳ ಬಳಿಕ ಕೋರ್ಟ್‌ಗೆ ನುಗ್ಗಿ ಜಡ್ಜ್‌ಗೆ ಚಪ್ಪಲಿ ತೂರಿದ ಭೂಪ

ದಕ್ಷಿಣ ಕನ್ನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗೀಪೇಟೆ ಬಳಿ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ತೆರಳುತ್ತಿದ್ದ ಕಾರನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದರು. ಸಂಜೆ 6.20ಕ್ಕೆ ವಿಮಾನದಲಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜಾ‌, ಅಲ್ಲಿಂದ ಸರ್ಕ್ಯೂಟ್‌ ಹೌಸ್‌ಗೆ ಆಗಮಿಸಿ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು. ಬಳಿಕ ಬಳಿಕ ರಾತ್ರಿ 10.45ರ ಹೊತ್ತಿಗೆ ಸಂಬಂಧಿಕರಾದ ಕುಶಿತ್ ಮತ್ತು ಪ್ರಶಾಂತ್ ಜತೆ ಬೇರೆ ಕಾರಿನಲ್ಲಿ ಬೆಳ್ತಂಗಡಿಗೆ ಹೊರಟಿದ್ದರು. ಆ ಕಾರಿನ ಹಿಂದೆ ಶಾಸಕರ ಅಧಿಕೃತ ಕಾರಿನಲ್ಲಿ ಚಾಲಕ ನವೀನ್ ಹಿಂಬಾಲಿಸುತ್ತಿದ್ದ.

ಈ ವೇಳೆ ಪಡೀಲ್ ರೈಲ್ವೆ ಬ್ರಿಡ್ಜ್ ಕೆಳಗಿನಿಂದ ಸ್ಕಾರ್ಪಿಯೋ ಕಾರು ಹಿಂಬಾಲಿಸಿಕೊಂಡು ಬಂದಿತ್ತು. ಈ ಬಗ್ಗೆ ಫೋನ್ ಮೂಲಕ ಶಾಸಕ ಪೂಂಜಾಗೆ ಮಾಹಿತಿ ಚಾಲಕ ನವೀನ್ ಮಾಹಿತಿ ನೀಡಿದ್ದ. ಈ ವೇಳೆ ಎದುರಿಗಿದ್ದ ಶಾಸಕರ ಸಂಬಂಧಿಯ ಕಾರು ಅಡ್ಡಗಟ್ಡಿದ ಸ್ಕಾರ್ಪಿಯೋ ಕಾರಿನಲ್ಲಿದ್ದ ದುಷ್ಕರ್ಮಿಗಳು, ಪರಂಗೀಪೇಟೆ ಶಾಸಕರ ಕಾರನ್ನು ಅಡ್ಡಗಟ್ಟಿ ತಲ್ವಾರ್‌ ತೋರಿಸಿ ಅವಾಚ್ಯ ಶಬ್ದಗಳಿಂದ ಬೈದು ಪರಾರಿಯಾಗಿದ್ದರು.

ಈ ಬಗ್ಗೆ ಶಾಸಕ ಪೂಂಜಾ ಕಾರು ಚಾಲಕ ನವೀನ್ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ಆರೋಪಿಗಳ ಪೈಕಿ ರಿಯಾಜ್‌ನ ಗುರುತು ಗುರುತು ಪತ್ತೆ ಮಾಡಿದ್ದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾಗೆ ಕೊಲೆ ಬೆದರಿಕೆ: ದೂರು ದಾಖಲು

Exit mobile version