Site icon Vistara News

ವಿಧಾನಸೌಧ ರೌಂಡ್ಸ್‌: ಬಿಜೆಪಿ ಸಂಸದರೇ ರಾಜಕಾರಣ ಮಾಡಿ, ಆದರೆ ರಾಜ್ಯದ ಹಿತ ಮಾರಬೇಡಿ!

BJP MPs

| ಮಾರುತಿ ಪಾವಗಡ
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಭಾರಿ ಅನ್ಯಾಯ ಆಗಿದೆ ಅನ್ನೋ ಡಿ.ಕೆ. ಸುರೇಶ್ ಹೇಳಿಕೆ ಒಪ್ಪಬಹುದಾದರೂ, ದೇಶ ವಿಭಜನೆಯ ಮಾತನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಅನುದಾನ ಅನ್ಯಾಯದ ಬಗ್ಗೆ ರಾಜ್ಯದ ಜನಪ್ರತಿನಿಧಿಗಳು ಕೇಂದ್ರದ ಬಿಜೆಪಿ ನಾಯಕರ ಗಮನ ಸೆಳೆಯಬೇಕಿತ್ತು. ಆದರೆ ಇವರು ಡಿ.ಕೆ. ಸುರೇಶ್ ಹೇಳಿಕೆಯನ್ನಷ್ಟೇ ಹಿಡಿದುಕೊಂಡು ಜಗ್ಗಾಡಿದರು. ಇನ್ನು ಇದೇ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿವರೆಗೂ ತೆಗೆದುಕೊಂಡು ಹೋಗಿ ಧರಣಿ ಮಾಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಜತೆ ರಾಜ್ಯಗಳು ಸಂಘರ್ಷ ಮಾಡುವುದಕ್ಕಿಂತಲೂ ಸಹನೆ ಮತ್ತು ಸಮನ್ವಯತೆಯ ದಾರಿಯಲ್ಲಿ ಪರಿಹಾರ ಹುಡುಕಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವಿಧಾನಸೌಧ (Vidhana Soudha Rounds) ಪಡಸಾಲೆಯಲ್ಲಿ ಪಕ್ಷಾತೀತವಾಗಿ ಕೇಳಿ ಬಂತು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಭಾರಿ ಅನ್ಯಾಯ ಆಗಿದೆ ಅನ್ನೋ ಡಿ.ಕೆ. ಸುರೇಶ್ ಹೇಳಿಕೆ ಒಪ್ಪಬಹುದಾದರೂ, ದೇಶ ವಿಭಜನೆಯ ಮಾತನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಅನುದಾನ ಅನ್ಯಾಯದ ಬಗ್ಗೆ ರಾಜ್ಯದ ಜನಪ್ರತಿನಿಧಿಗಳು ಕೇಂದ್ರದ ಬಿಜೆಪಿ ನಾಯಕರ ಗಮನ ಸೆಳೆಯಬೇಕಿತ್ತು. ಆದರೆ ಇವರು ಡಿ.ಕೆ. ಸುರೇಶ್ ಹೇಳಿಕೆಯನ್ನಷ್ಟೇ ಹಿಡಿದುಕೊಂಡು ಜಗ್ಗಾಡಿದರು. ಇನ್ನು ಇದೇ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿವರೆಗೂ ತೆಗೆದುಕೊಂಡು ಹೋಗಿ ಧರಣಿ ಮಾಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಜತೆ ರಾಜ್ಯಗಳು ಸಂಘರ್ಷ ಮಾಡುವುದಕ್ಕಿಂತಲೂ ಸಹನೆ ಮತ್ತು ಸಮನ್ವಯತೆಯ ದಾರಿಯಲ್ಲಿ ಪರಿಹಾರ ಹುಡುಕಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವಿಧಾನಸೌಧ ಪಡಸಾಲೆಯಲ್ಲಿ ಪಕ್ಷಾತೀತವಾಗಿ ಕೇಳಿ ಬಂತು.

ಇದನ್ನೂ ಓದಿ | Nikhil Kumaraswamy : ಅಯ್ಯೋ.. ನಾನು ಮಂಡ್ಯದಿಂದ ಸ್ಪರ್ಧೆ ಮಾಡಲ್ಲ… ಮಾಡಲ್ಲ ಮಾಡಲ್ಲ.. ಎಂದ ನಿಖಿಲ್‌

ತೇಜಸ್ವಿ ಸೂರ್ಯಗೆ ಇನ್ನಷ್ಟು ರಾಜಕೀಯ ಪಕ್ವತೆ ಬೇಕಿದೆ

Sumalatha Amabarish

ರಾಜ್ಯಕ್ಕೆ ಅನ್ಯಾಯವಾದಾಗ ನಿಮ್ಮ ಸರ್ಕಾರದ ವಿರುದ್ಧ ನೇರವಾಗಿ ಧ್ವನಿ ಎತ್ತುವುದು ಕಷ್ಟಸಾಧ್ಯವಾದರೂ ಜನಪ್ರತಿನಿಧಿಯಾಗಿ ರಾಜ್ಯಕ್ಕೆ ಮೋಸ ಮಾಡಬಾರದು. ಇವರೆಲ್ಲ ಬಿಜೆಪಿ ಪರವಾಗಿ ಸಂಸತ್‌ನಲ್ಲಿ ವಾದ ಮಂಡಿಸಲು ಆಯ್ಕೆಯಾದ ಬ್ಯಾರಿಸ್ಟರ್‌ಗಳು ಅಂದುಕೊಳ್ಳಬಾರದು. ಬೆಂಗಳೂರಿಗೆ ಹೆಚ್ಚು ಪಾಲು ಸಿಗಬೇಕು ಅನ್ನೋ ಬಿಜೆಪಿಯ ಲಾಜಿಕ್‌ನಲ್ಲಿ ಯಾವುದೇ ಹುರುಳಿಲ್ಲ. 28 ಜನ‌ ಸಂಸದರು, ರಾಜ್ಯ ಸಭಾ ಸದಸ್ಯರು ಇದ್ದೀರಿ. ಸಂಸತ್‌ನಲ್ಲಿ ಮಾತನಾಡಲು ಸಾಧ್ಯವಾಗದಿದ್ರೆ ಕನಿಷ್ಠ ಅಮಿತ್ ಶಾ, ನಿರ್ಮಲಾ ಸೀತಾರಾಮನ್‌ರನ್ನು ಭೇಟಿ ಮಾಡಿಯಾದರೂ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ರಾಜ್ಯಕ್ಕೆ ತಂಡ ಕಳುಹಿಸಿ ವರದಿ ಪಡೆದು ಎರಡು ತಿಂಗಳು ಕಳೆದರೂ ಪರಿಹಾರ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ರಾಜ್ಯದ ಜನಪ್ರತಿನಿಧಿಗಳು ಧ್ವನಿ ಎತ್ತದೇ ಸಂಸತ್‌ನಲ್ಲಿ ವಕಾಲತ್ತು ಮಾಡ್ತೀವಿ ಅಂದರೆ ಬೆಂಗಳೂರು ದಕ್ಷಿಣ ಬಿಟ್ಟು ರಾಜ್ಯ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಕೀಲಿ ಕೆಲಸ ಮಾಡುವುದು ಬೆಟರ್. ರಾಜಕಾರಣ ಮಾಡಿ, ಆದ್ರೆ ರಾಜ್ಯದ ಹಿತವನ್ನು ಮಾರಬೇಡಿ.

ಮೈಸೂರಿಗೆ ಎಂಟ್ರಿ ಕೊಟ್ಟ ಶಾ; ಕಾಂಗ್ರೆಸ್‌ ಅಲರ್ಟ್

ಅಮಿತ್ ಶಾ ಗುರಿ 2024ರ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲೋದು. ಮೈತ್ರಿಯ ಪಕ್ಷಗಳ ನಡುವೆ ಕೆಲ ಅಸಮಾಧಾನ ಇರೋದು ಅವರ ಗಮನಕ್ಕೆ ಬಂದು ಅದಕ್ಕೆಲ್ಲ ಗುಡ್ ಬೈ ಹೇಳಲು ಸೂಚಿಸಿದ್ದಾರೆ. ರಾಜ್ಯ ಬಿಜೆಪಿ ಆಂತರಿಕ ಸಮಸ್ಯೆಗಳನ್ನು ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡಿ ಅಂತ ಸೂಚಿಸಿದ್ದಾರೆ. ವಿಜಯೇಂದ್ರ ಜತೆ ಒನ್ ಟು ಒನ್ ಮಾತನಾಡಿ ರಾಜ್ಯದ ನಾಡಿಮಿಡಿತ ಅರಿತಿದ್ದಾರೆ. ರಾಜ್ಯದಲ್ಲಿ ಚರ್ಚೆ ಆಗುತ್ತಿರುವ ಅನುದಾನದ ತಾರತಮ್ಯ ವಿಚಾರವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. I am with you, go ahead ಅಂತ ವಿಜಯೇಂದ್ರಗೆ ಹೇಳಿದ್ದಾರೆ.

ಸುಮಕ್ಕಳ ಆಟ ನಿಲ್ತಿಲ್ಲ; ಏರುತ್ತಿದೆ ಕುಮಾರಸ್ವಾಮಿ ಟೆನ್ಸನ್

Sumalatha Amabarish

ಬಿಜೆಪಿಯ ಭಾಗವಾಗಿರುವ ಸುಮಲತಾ ಮಂಡ್ಯ ಟಿಕೆಟ್‌ಗೆ ಪಟ್ಟು ಹಿಡಿದು ಕೂತುಬಿಟ್ಟಿದ್ದಾರೆ. ಮಂಡ್ಯದಲ್ಲಿ ಬಿಜೆಪಿಗೆ ಟಿಕೆಟ್ ಕೊಟ್ರೆ ಗೆಲುವು ನಿಶ್ಚಿತ. ಜೆಡಿಎಸ್‌ಗೆ ಕೊಟ್ರೆ ಕುಟುಂಬ ರಾಜಕಾರಣದಿಂದ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಜತೆಗೆ ಕಳೆದ ಐದು ವರ್ಷಗಳ ಹಿಂದೆ ಮಂಡ್ಯದಲ್ಲಿ ಇದ್ದ ಬಿಜೆಪಿ ಶಕ್ತಿಗೂ ಈಗ ಇರೋ ಸಂಘಟನೆಯ ಶಕ್ತಿಗೆ ಭಾರಿ ವ್ಯತ್ಯಾಸ ಇದೆ. ಹೀಗಾಗಿ ಈ ಕ್ಷೇತ್ರ ಬಿಜೆಪಿಗೆ ಇರಲಿ ಅನ್ನೋದು ಸುಮಲತಾ ವಾದ. ಇದರ ಹಿಂದೆ ಸುಮಲತಾ ಯೋಚನೆ ಭಾರಿ ದೂರ ಇದೆ. ಮಂಡ್ಯದಲ್ಲಿ ಟಿಕೆಟ್ ಸಿಗದಿದ್ದರೆ ಕೇಂದ್ರ ಬಿಜೆಪಿ ವರಿಷ್ಠರು ಕನಿಷ್ಠ ರಾಜ್ಯಸಭೆಯ ಆಫರ್ ಕೊಡಬಹುದು, ಮಂಡ್ಯದಲ್ಲಿ ಅಸ್ತಿತ್ವ ಉಳಿಸಿಕೊಂಡು ಮುಂದೆ ಅಭಿಷೇಕ ಅಂಬರೀಶ್ ರಾಜಕೀಯ ಭವಿಷ್ಯ ಕಟ್ಟಬಹುದು ಅನ್ನೋ ಲೆಕ್ಕಾಚಾರದಲ್ಲಿ ಸುಮಲತಾ ಇದ್ದಾರೆ. ಸುಮಕ್ಕ ಅವರ ಈ ಲೆಕ್ಕಾಚಾರಕ್ಕೆ ನಡ್ಡಾ, ಅಮಿತ್ ಶಾ ಏನು ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ | ವಿಧಾನಸೌಧ ರೌಂಡ್ಸ್‌: ಕಾಂಗ್ರೆಸ್‌ಗೆ ʼವಿಭಜನೆʼ ಹೇಳಿಕೆಯ ಕಳಂಕ; ಇನ್ನೂ ಪ್ರತಿಪಕ್ಷ ನಾಯಕನ ಮಟ್ಟಕ್ಕೆ ಏರದ ಅಶೋಕ!

ರಾಜ್ಯಸಭೆ ಟಿಕೆಟ್‌ ಚೇಲಾಗಳಿಗೆ ಮಾತ್ರ!

ಕಾಂಗ್ರೆಸ್ ಅವನತಿ ಶುರುವಾಗಿದ್ದು 2014ರಿಂದ. ಪ್ರತಿ ಬಾರಿ ಪೆಟ್ಟು ತಿಂದ ಮೇಲೂ ಅದು ಎಚ್ಚೆತ್ತುಕೊಳ್ಳಲೇ ಇಲ್ಲ. ಹೀಗಾಗಿ ಮೋದಿ ದಿನೇದಿನೆ ಸ್ಟ್ರಾಂಗ್ ಆಗುತ್ತ ಹೋದರು. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗುತ್ತ ಹೋಯಿತು. ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಇಂದಿಗೂ ಆಗ್ತಿಲ್ಲ. ಪಕ್ಷಕ್ಕೆ ಏನೂ ಕಾಣಿಕೆ ನೀಡದ ನಾಸೀರ್ ಹುಸೇನ್ ಅವರನ್ನು ಮತ್ತೊಮ್ಮೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಮುಂದಾಗಿರುವುದು ಸಾಮಾನ್ಯ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ. ಇನ್ನು ರಾಜೀವ್ ಗೌಡ, ಆರತಿ ಕೃಷ್ಣ ಅವರು ಸಂಘಟನೆಯಲ್ಲಿ ಏನು ಕಾಣಿಕೆ ಸಲ್ಲಿಸಿದ್ದಾರೆ ಅನ್ನೋ ಪ್ರಶ್ನೆಗಳು ಸಾಮಾನ್ಯ ಕಾರ್ಯಕರ್ತರಿಂದ ಶುರುವಾಗಿವೆ. ಒಟ್ಟಾರೆ ಬೂತ್ ಮಟ್ಟದಲ್ಲಿ ಕೆಲಸ ಮಾಡುವ, ಚುನಾವಣೆಯಲ್ಲಿ ಪಕ್ಷವೇ ಕುಟುಂಬ ಅಂತ ದುಡಿಯುವ ಕಾರ್ಯಕರ್ತರಿಗೆ ಮಣೆ ಹಾಕದೇ ಬರೀ ಚೇಲಾಗಳಿಗೆ ಮಣೆ ಹಾಕಿದ್ರೆ ಹೇಗೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

Exit mobile version