Site icon Vistara News

Text Book: ಗುಂಡು, ತುಂಡು, ಸಿಗರೇಟು ಕೈಯಲ್ಲಿದ್ದರೆ ಮಾತ್ರ ಇವರ ಬುದ್ಧಿ ಓಡೋದು: ಬುದ್ಧಿಜೀವಿಗಳ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

CT RAVI

ಬೆಂಗಳೂರು: ಗುಂಡು, ತುಂಡು ಹಾಗೂ ಸಿಗರೇಟು ಕೈಯಲ್ಲಿದ್ದಾರೆ ಮಾತ್ರ ಬುದ್ಧಿ ಓಡುವುದು ಎಂದು ವಾಮಪಂಥೀಯ ಬುದ್ಧಿಜೀವಿಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದು, ಅವರನ್ನು ಏಕೆ ಬುದ್ಧಿಜೀವಿ ಎಂದು ಕರೆಯಬೇಕು ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಜಚೇರಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಸಂಸತ್ ಉದ್ಘಾಟನೆಗೆ ಕಾಂಗ್ರೆಸ್ ವಿರೋಧ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಭಾರತದ ಪ್ರಜಾಪ್ರಭುತ್ವದ ದೇಗುಲ. ದೇವೆಗೌಡರು ಚೆನ್ನಾಗಿ ಹೇಳಿದ್ದಾರೆ. ಈಗ ಸಂಸತ್ ಕಟ್ಟಿದ್ದು ಬ್ರಿಟಿಷರು ಎನ್ನುವ ಹಾಗಿಲ್ಲ. ನಮ್ಮವರೇ ಕಟ್ಟಿದ್ರು ಎಂದು ಹೇಳಬೇಕು.

ಆದರೆ ಕಾಂಗ್ರೆಸ್‌ಗೆ ಇದನ್ನು ಸಹಿಸೋಕೆ ಆಗ್ತಾ ಇಲ್ಲ. ಬಿಜೆಪಿಗರು ಕಟ್ಟಿದರು, ಮೋದಿ ಕಟ್ಟಿದ್ರು ಎಂಬ ನೋವು ಕಾಂಗ್ರೆಸ್‌ಗೆ. ಪಾಂಡವರ ಇಂದ್ರಪ್ರಸ್ತಕ್ಕೆ ಹೋಗಿದ್ದ ದುರ್ಯೋಧನಾದಿ ಕೌರವರವರು ಅದನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ರು. ಈಗ ಅದೇ ರೀತಿ ಹೊಸ ಸಂಸತ್‌ನ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದುಕೊಳ್ಳುತ್ತಿದೆ‌ ಎಂದು ಕಾಂಗ್ರೆಸಿಗರನ್ನು ಪರೋಕ್ಷವಾಗಿ ಕೌರವರಿಗೆ ಹೋಲಿಸಿದರು.

ಬಿಜೆಪಿ ಸಮಯದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಿ ಎಂದು ಕೆಲ ಸಾಹಿತಿಗಳು ಸರ್ಕಾರವನ್ನು ಒತ್ತಾಯಿಸಿರುವುದರ ಕುರಿತು ಮಾತನಾಡಿದ ಸಿ.ಟಿ. ರವಿ, ಗುಂಡು, ತುಂಡು, ಸಿಗರೆಟ್ ಕೈಯಲ್ಲಿ ಇದ್ದರೆ ಮಾತ್ರ ಬುದ್ದಿ ಓಡುವ ಜನ ಇವರು. ಅವರು ಮಾತ್ರ ಬುದ್ದಿಜೀವಿಗಳಾ? ಬುದ್ದಿಜೀವಿಗಳು ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತವನ್ನು ದಾಸ್ಯದ ಚಿಂತನೆಯಲ್ಲೇ ಇಟ್ಟಿದ್ದ. ದಾಸ್ಯದಲ್ಲೆ ಇರಬೇಕು ಎನ್ನುವ ಯೋಚನೆಯಲ್ಲಿ ಜನರನ್ನು ತಯಾರು ಮಾಡುವ ಯೋಚನೆ ಅವನದ್ದಾಗಿತ್ತು. ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು ಅವರು.ಕುಟುಂಬ ಒಂದು ಸಂಸ್ಥೆ ಎಂತಿದ್ದ ಮಾರ್ಕ್ಸ್.

ರಾಜ್ಯ ಇರಬಾರದು ಎನ್ನುವ ಚಿಂತನೆ ಮಾರ್ಕ್ಸ್‌ನದಾಗಿತ್ತು. ಅವರ ಚಿಂತನೆಯಲ್ಲಿರುವ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಸತ್ಯ ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರಿ ದಿ ಗ್ರೇಟ್ ಎನ್ನೋ ಜನ. ಇವರು ಯಾರು?. ದೇಶ ಲೂಟಿ ಮಾಡಿದವರು, ದಾಳಿಕೋರರು. ನಮ್ಮ ಸಂಸ್ಕೃತಿ ನಾಶ ಮಾಡಿದವರು‌. ನಮ್ಮ ತಾಯಂದಿರ ಶೀಲವನ್ನು ಕೆಡಿಸೋದಕ್ಕೆ ಕೈ ಹಾಕಿದವರು. ಅಂತವವನ್ನು ದಿ ಗ್ರೇಟ್ ಎಂದು ನಮ್ಮ ದೇಶದಲ್ಲಿ ಹೇಳಿಕೊಳ್ತೇವೆ ಎನ್ನೋದೆ ದೇಶಕ್ಕೆ ಅಪಮಾನ.

ದೇಶದಲ್ಲಿ ಸಾಧನೆ ಮಾಡಿದವರು ಇರಲಿಲ್ಲವಾ.? ಆರ್ಯಭಟ, ಚಾಣಕ್ಯ , ಅಶೋಕ ಚಕ್ರವರ್ತಿ, ರಾಜರಾಜ ಚೋಳ ಎಲ್ಲಿಯವರು? ಅವರ ಇತಿಹಾಸದ ಬಗ್ಗೆ ಎಲ್ಲಾದರೂ ಹೇಳಿದ್ರಾ? ರಾಜ ರಾಜ ಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳ, ಇವರೆಲ್ಲಾ ಇಂಡೊನೇಷ್ಯ ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಣೆ ಮಾಡಿದ್ರು ಎನ್ನೋದು ಇತಿಹಾಸದಲ್ಲಿ ಓದಿದ್ದೇವಾ.?

ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಶಿಯಾವನ್ನು ದಾಟಿ ಹೋಗಿತ್ತು. ಅದನ್ನು ಓದೀದ್ದೇವಾ? ಮಕ್ಕಳಿಗೆ ಇದನ್ನು ಕಲಿಸಿದ್ದೇವಾ? ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್. ಈ ಬುದ್ದಿ ಜೀವಿಗಳು ಮೆಕಾಲೆ ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು. ಆ ಜನರಿಗೆ ಭಾರತೀಯತೆ ಹೇಳುವ,‌ಭಾರತದ ಹಿರಿಮೆ ಗರಿಮೆಗಳ ಹೇಳುವಂತಹ ಸಂಗತಿ ಅಪಥ್ಯ ಆಗಿ ಕಂಡಿದೆ. ಆ ಜನ ಇವತ್ತು ಸಿದ್ದರಾಮಯ್ಯ ಕಿವಿಗೆ ಪದೇ ಪದೇ ಊದುತ್ತಾ ಇದ್ದಾರೆ. ಭಾರತದ ಶ್ರೇಷ್ಠತೆಯನ್ನು ಹೇಳುವ ಕೆಲಸ ಆಗಬೇಕು. ಆಗ ಭಾರತ ಎದ್ದು ನಿಲ್ಲುತ್ತದೆ.

ಸಾಮಾನ್ಯ ಜನ ದೇಶಕ್ಕೆ ಸಮರ್ಪಣೆ ಮಾಡಿದ್ದನ್ನು ಹೇಳಬೇಕು. ವಿಜ್ಞಾನ ತಂತ್ರಜ್ಞಾನ ಹೇಳಿದರೆ ಭಾರತ ಎದ್ದು ನಿಲ್ಲುತ್ತದೆ. ಈ ಜನರಿಗೆ ಭಾರತ ಎದ್ದು ನಿಲ್ಲಬಾರದು. ಹೀಗಾಗಿ ಈ ಜನ ಪಠ್ಯ ಪುಸ್ತಕ ನೆಪಮಾಡಿಕೊಂಡಿದ್ದಾರೆ.
ಇವರು ಮಾತ್ರ ತಜ್ಞರಾ? ಗುಂಡು ತುಂಡುಗಳ ಜೊತೆ ಇದ್ದವರು. ಅದು ಕೈಯಲ್ಲಿ ಇದ್ರೆ ತಲೆ ಓಡೋದು, ಸಿಗರೇಟ್ ಕೈಯಲ್ಲಿ ಇದ್ರೆ ಬುದ್ದಿ ಜೀವಗಳು ಎನ್ನುವ ಜನ. ಅವರು ಮಾತ್ರ ವಿರೋಧ ಮಾಡ್ತಾ ಇದ್ದಾರೆ ಎಂದರು.

Exit mobile version