ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಬದಲಾವಣೆಗಳನ್ನು (BJP Ticket surprize) ಮಾಡಲಾಗಿದೆ. ಮೀನುಗಾರಿಕಾ ಸಚಿವರಾಗಿರುವ ಎಸ್. ಅಂಗಾರ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿಲ್ಲ. ಜತೆಗೆ ಇತ್ತೀಚೆಗೆ ಯುವತಿಯೊಬ್ಬರ ಜತೆ ಅಸಭ್ಯವಾದ ಚಿತ್ರಗಳು ವೈರಲ್ ಆದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ಮಿಸ್ ಆಗಿದೆ. ಇಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ಸಿಕ್ಕಿದೆ. ಇತ್ತ ಉಡುಪಿಯಲ್ಲಿ ರಘುಪತಿ ಭಟ್ ಮತ್ತು ಕಾಪುವಿನಲ್ಲಿ ಲಾಲಾಜಿ ಮೆಂಡನ್ ಅವರಿಗೆ ಟಿಕೆಟ್ ಸಿಕ್ಕಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರಗಳು
ಇಲ್ಲಿನ ಬಹುತೇಕ ಎಲ್ಲ ಕ್ಷೇತ್ರಗಳ ಟಿಕೆಟ್ ಘೋಷಿಸಲಾಗಿದೆ.
ಬೆಳ್ತಂಗಡಿ: ಹರೀಶ್ ಪೂಂಜಾ
ಮೂಡುಬಿದಿರೆ– ಉಮಾನಾಥ್ ಕೋಟ್ಯಾನ್
ಮಂಗಳೂರು ಉತ್ತರ– ಭರತ್ ಶೆಟ್ಟಿ
ಮಂಗಳೂರು ದಕ್ಷಿಣ: ವೇದವ್ಯಾಸ ಕಾಮತ್
ಮಂಗಳೂರು: ಸತೀಶ್ ಕುಂಪಲ
ಬಂಟ್ವಾಳ: ರಾಜೇಶ್ ನಾಯಕ್
ಪುತ್ತೂರು: ಆಶಾ ತಿಮ್ಮಪ್ಪ ಗೌಡ (ಸಂಜೀವ ಮಠಂದೂರು ಬದಲು)
ಸುಳ್ಯ: ಭಾಗೀರಥಿ ಮುರುಳ್ಯ
(ಆಶಾ ತಿಮ್ಮಪ್ಪ ಗೌಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದರೆ ಭಾಗೀರಥಿ ಮುರುಳ್ಯ ಅವರು ಮಾಜಿ ಜಿಪಂ ಸದಸ್ಯ)
ಉಡುಪಿಯಲ್ಲಿ ಒಂದು ಸೀಟು ಬಾಕಿ
ಉಡುಪಿ: ಯಶಪಾಲ್ ಸುವರ್ಣ (ರಘುಪತಿ ಭಟ್ ಬದಲಿಗೆ)
ಕಾಪು: ಗುರ್ಮೆ ಸುರೇಶ್ ಶೆಟ್ಟಿ (ಲಾಲಾಜಿ ಮೆಂಡನ್ ಬದಲು)
ಕಾರ್ಕಳ: ವಿ. ಸುನಿಲ್ ಕುಮಾರ್
ಕುಂದಾಪುರ: ಕಿರಣ್ ಕೊಡ್ಗಿ (ಹಾಲಾಡಿ ಶ್ರೀನಿವಾಸ ಶೆಟ್ಟಿ ಬದಲು)
ಉಡುಪಿ ಜಿಲ್ಲೆಯಲ್ಲಿ ಬೈಂದೂರು ಕ್ಷೇತ್ರದ ಟಿಕೆಟ್ ಬಾಕಿ ಇದೆ. ಇಲ್ಲಿ ಸುಕುಮಾರ್ ಶೆಟ್ಟರಿಗೆ ಸ್ವಯಂ ನಿವೃತ್ತಿ ಘೋಷಿಸಲು ಸೂಚಿಸಲಾಗಿದೆ ಎಂಬ ಸುದ್ದಿ ಹರಡಿತ್ತು.
ಇದನ್ನೂ ಓದಿ : Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ