ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಹಾಗೂ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಜತೆಗಿನ ಅಶ್ಲೀಲ ವಿಡಿಯೊ ಪ್ರಕರಣ (Black Mail Case) ಸಂಬಂಧ ದೂರು, ಪ್ರತಿದೂರು ದಾಖಲಾಗಿತ್ತು. ಈಗ ನವ್ಯಶ್ರೀ ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ರಾಜಕುಮಾರ್ ಠಾಕಳೆ ನನ್ನ ಪತಿಯಾಗಿದ್ದು, ತನ್ನ ವಿರುದ್ಧ ಅತ್ಯಾಚಾರ ಬೆದರಿಕೆಯ ಸುಳ್ಳು ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ. ಅವರಿಂದಲೇ ನನಗೆ ಮೋಸವಾಗಿದೆ ಎಂದು ನವ್ಯಶ್ರೀ ಜುಲೈ 23ಕ್ಕೆ ಪ್ರತಿದೂರು ದಾಖಲಿಸಿದ್ದರು. ಈ ಹಿನ್ನೆಲೆ ಸೋಮಾವಾರ ಠಾಣೆಗೆ ಆಗಮಿಸಿ, ತಮ್ಮ ದೂರಿನ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿ ತನಿಖೆಗೆ ಸಹಕಾರವನ್ನು ನೀಡಿದ್ದಾರೆ.
ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಅವರನ್ನು ಸೋಮವಾರ ವಿಚಾರಣೆಗೆ ಒಳಪಡಿಸಲಾಯಿತು. ಜುಲೈ 18ರಂದು ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1860(U/s 384, 448, 504, 506, 34)ರಡಿ ಕೇಸ್ ದಾಖಲಾಗಿತ್ತು.
ಏನಿದು ಪ್ರಕರಣ?
ಇಲ್ಲಿನ ತೋಟಗಾರಿಕೆ ಇಲಾಖೆ ಅಧಿಕಾರಿ ಹಾಗೂ ಈ ಹಿಂದೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಆಪ್ತ ಸಹಾಯಕ ಆಗಿದ್ದ ರಾಜಕುಮಾರ್ ಟಾಕಳೆ ಜತೆಗಿರುವ ಅಶ್ಲೀಲ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಳಿಕ ಟಾಕಳೆ ಅವರು ಅತ್ಯಾಚಾರ ಬೆದರಿಕೆ ನೀಡುತ್ತಿರುವ ಆರೋಪದಡಿ (Black Mail Case) ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ | ಪರಸ್ಪರ ಒಪ್ಪಿಗೆಯಿಂದ ಜತೆಗಿದ್ದು ಕೊನೆಗೆ ಅತ್ಯಾಚಾರ ಆಯ್ತು ಅಂತ ಆರೋಪ ಮಾಡುವಂತಿಲ್ಲ ಎಂದ ಸುಪ್ರೀಂ
ಟಾಕಳೆ ದೂರಿನಲ್ಲಿ ಏನಿತ್ತು?
2020ರ ಡಿಸೆಂಬರ್‌ನಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುವಾಗ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿ ನವ್ಯಶ್ರೀ ಪರಿಚಯ ಮಾಡಿಕೊಂಡಿದ್ದಳು. ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್‌ಜಿಒ ನಡೆಸುತ್ತಿರುವುವುದಾಗಿ ಸಹ ಆಕೆ ಹೇಳಿಕೊಂಡಿದ್ದಳು. ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆಯಿಂದ ಇದ್ದಳು ಎಂದು ಟಾಕಳೆ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ | ಸುಳ್ಳು ಅತ್ಯಾಚಾರ ಕೇಸ್, ಬೆದರಿಕೆ ಆರೋಪ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ FIR