Site icon Vistara News

Border Dispute : ಒಂದು ದಿನದ ವಿಚಾರಣೆಗೆ ₹60 ಲಕ್ಷ !: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಲಕ್ಷ ಲಕ್ಷ ಹಣ ವೆಚ್ಚ

border-dispute-advocates profession charges

ಬೆಂಗಳೂರು: ಮಹಾಜನ್‌ ವರದಿ ಸೇರಿ ಎಲ್ಲ ಕಾನೂನಾತ್ಮಕ ರೀತಿಯಿಂದಲೂ ಕರ್ನಾಟಕದ ಪರವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ರಾಜಕೀಯ ಕಾರಣಕ್ಕೆ ಸೃಷ್ಟಿಸಿರುವ ಗಡಿ ವಿವಾದ ವಿಚಾರಣೆಗೆ ಕರ್ನಾಟಕದ ಬೊಕ್ಕಸದ ಹಣ ನೀರಿನಂತೆ ಹರಿಯುತ್ತಿದೆ.

ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಪರ ವಾದಿಸಲು ರಚಿಸಲಾಗಿರುವ ಹಿರಿಯ ವಕೀಲ ಮುಕುಲ್‌ ರೋಹಟಗಿ ನೇತೃತ್ವದ ವಕೀಲರ ತಂಡಕ್ಕೆ, ಒಂದು ದಿನ ವಿಚಾಣೆಗೆ ಹಾಜರಾಗಲು ಸುಮಾರು 60 ಲಕ್ಷ ರೂ. (59.90 ಲಕ್ಷ ರೂ.) ಪಾವತಿ ಮಾಡಬೇಕಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶಿಸಿದೆ.

ಬೆಳಗಾವಿ ಸೇರಿ ಅನೇಕ ಭಾಗಗಳು ಕರ್ನಾಟಕಕ್ಕೆ ಸೇರಿದ್ದೆಂದು ನಿರ್ವಿವಾದವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ಹಾಗೂ ಅಲ್ಲಿನ ರಾಜಕೀಯ ಪಕ್ಷಗಳು ಆಗಾಗ್ಗೆ ಕಾಲುಕೆರೆದು ಜಗಳ ಮಾಡುತ್ತಲೇ ಇರುತ್ತವೆ. ಎಂಇಎಸ್‌ನಂತಹ ರಾಜಕೀಯ ಪಕ್ಷಗಳು ಬೆಳಗಾವಿಯಲ್ಲಿ ವಿಭಜನಕಾರಿ ರಾಜಕಾರಣ ಮಾಡುತ್ತ ಜನರ ಮನಸ್ಸನ್ನು ಕೆಡಿಸುತ್ತಲೇ ಇರುತ್ತವೆ. ಇದರ ನಡುವೆ ಇತ್ತೀಚೆಗೆ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರವೂ ಗಡಿ ವಿವಾದವನ್ನು ಕೆದಕಿತ್ತುದೆ. ಕರ್ನಾಟಕದ ಅನೇಕ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಡೆಸುತ್ತಿದೆ. ಇದಕ್ಕೆ ಹಿರಿಯ ವಕೀಲರ ತಂಡವನ್ನು ಕರ್ನಾಟಕ ಸರ್ಕಾರಚಿಸಿದೆ.

ಇದನ್ನೂ ಓದಿ | Border dispute : ಹುತಾತ್ಮ ದಿನ ಆಚರಿಸಿದ MES; ಮಾನೆಗೆ ನಿರ್ಬಂಧ ವಿಧಿಸಿದ ಜಿಲ್ಲಾಧಿಕಾರಿ ಕ್ರಮಕ್ಕೆ ಪ್ರಶಂಸೆ

ವಕೀಲರ ತಂಡದ ಮುಖ್ಯಸ್ಥರಾಗಿ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರನ್ನು ನೇಮಿಸಲಾಗಿದೆ. ರೋಹಟಗಿ ಅವರು ಈ ಪ್ರಕರಣದ ಸಂಬಂಧ ಒಂದು ದಿನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು 22 ಲಕ್ಷ ರೂ. ಪಾವತಿಸಲಾಗುತ್ತದೆ. ಅದೇ ರೀತಿ ಕಾನ್ಫರೆನ್ಸ್‌ಗಳು ಸೇರಿ ವಿಚಾರಣೆ ಸಿದ್ಧತೆಗೆ ದಿನಕ್ಕೆ 5.5 ಲಕ್ಷ ರೂ. ಪಾವರಿಸಲಾಗುತ್ತದೆ. ಒಟ್ಟಾರೆಯಾಗಿ 27.55 ಲಕ್ಷ ರೂ. ಕರ್ನಾಟಕ ಸರ್ಕಾರ ನೀಡುತ್ತದೆ.

ಅದೇ ರೀತಿ ತಂಡದ ಮತ್ತೊಬ್ಬ ಸದಸ್ಯರಾದ ಶ್ಯಾಮ್‌ ದಿವಾನ್‌ ಅವರಿಗೆ ದಿನಕ್ಕೆ ಒಟ್ಟು ೬.೨೫ ಲಕ್ಷ ರೂ., ಉದಯ ಹೊಳ್ಳ ಅವರಿಗೆ 5.75 ಲಕ್ಷ ರೂ., ಮಾರುತಿ ಬಿ. ಝಿರಲಿ ಅವರಿಗೆ ಒಟ್ಟು 2.10 ಲಕ್ಷ ರೂ., ವಿ.ಎನ್‌. ರಘುಪತಿ ಅವರಿಗೆ 80 ಸಾವಿರ ರೂ. ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Exit mobile version