Site icon Vistara News

Border Dispute | ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ನಾಟಕದ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು!

ಏಕನಾಥ ಶಿಂಧೆ

ಮುಂಬೈ: ಗಡಿ ಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರವು ದೌರ್ಜನ್ಯ ನಡೆಸುತ್ತಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿ ಪಕ್ಷಗಳು ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದವು. ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಎನ್‌ಸಿಪಿಯ ಶಾಸಕ ಜಯಂತ್ ಪಾಟೀಲ್ ಅವರು, ಮರಾಠಿಗರನ್ನು ಭೇಟಿಯಾಗಲು ಹೋದ ನನ್ನ ಸಹೋದ್ಯೋಗಿ ಶಾಸಕ ಹಸನ್ ಮುಶ್ರಿಫ್ ಮೇಲೆ ಲಾಠಿ ಬೀಸಲಾಗಿದೆ ಎಂದು ಆಪಾದಿಸಿದರು(Border Dispute).

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಶಾಸಕನ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಅವರು, ಗಡಿ ವಿವಾದವೂ ಪ್ರತಿಯೊಬ್ಬರಿಗೆ ಬಹಳ ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿದರು .

ಈ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು, ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದೆ. ಇದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಹೇಳಿದರು. ಇದೇ ವೇಳೆ, ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು, ಈಗಾಗಲೇ ಗಡಿ ವಿಷಯ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿ ವಿಷಯವನ್ನು ಸಮಾಪ್ತಿಗೊಳಿಸಿದರು.

ಇದನ್ನೂ ಓದಿ | Border Dispute | ಲೋಕಸಭೆಯಲ್ಲೂ ಗಡಿ ಬಿಕ್ಕಟ್ಟು ಸದ್ದು, ಕರ್ನಾಟಕದ ವಿರುದ್ಧ ಶಿವಸೇನೆ ಸಂಸದ ಇಲ್ಲಸಲ್ಲದ ದೂರು

Exit mobile version