ಮೈಸೂರು: ಕೊಳವೆ ಬಾವಿಯ (Borewell Casing) ಕೇಸಿಂಗ್ ಪೈಪ್ ಬದಲಾಯಿಸುವ (Casing pipe change) ಕೆಲಸ ಮಾಡುತ್ತಿದ್ದ ವೇಳೆ ಮೇಲಿನಿಂದ ಮಣ್ಣು ಕುಸಿದು (Land slide) ಒಬ್ಬ ಯುವಕ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ತಿ.ನರಸೀಪುರ ತಾಲೂಕಿನ ಸುಜ್ಜಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹೇಶ್ (34) ಮಣ್ಣು ಕುಸಿದು ಸಾವನ್ನಪ್ಪಿದ ಯುವಕ. ಬಾವಿಯೊಳಗೆ ಕೆಲಸ ಮಾಡುತ್ತಿದ್ದ ನಿಂಗಪ್ಪ ಮತ್ತು ಮಧುಗೆ ಕೂಡಾ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿಂಗಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿ ಹಳೆಯ ಕೊಳವೆ ಬಾವಿಯೊಂದಿತ್ತು. ಅದರ ಕೇಸಿಂಗ್ ಪೈಪ್‌ಗಳು ಹಳತಾಗಿದ್ದವು. ಅವುಗಳನ್ನು ತೆಗೆದು ಹೊಸ ಪೈಪ್‌ಗಳನ್ನು ಹಾಕುವ ಕಾಮಗಾರಿಯಲ್ಲಿ ಅವರೆಲ್ಲ ತೊಡಗಿದ್ದರು. ಈ ಕಾಮಗಾಗಿಯ ವೇಳೆ ಒಮ್ಮಿಂದೊಮ್ಮೆಗೇ ಕೊಳವೆ ಬಾವಿ ಸುತ್ತಲಿನ ಕಣ್ಣು ಕುಸಿದು ಮೂವರೂ ಗುಂಡಿಗೆ ಬಿದ್ದಿದ್ದಾರೆ. ಅವರ ಮೇಲೆ ಕೂಡಾ ಮಣ್ಣು ಬಿದ್ದಿದ್ದು, ಮಹೇಶ್ ಮೃತಪಟ್ಟಿದ್ದಾರೆ. ಉಳಿದಿಬ್ಬರಿಗೆ ಕೂಡಾ ಗಾಯ ಮತ್ತು ಉಸಿರುಗಟ್ಟುವಿಕೆ ಸಮಸ್ಯೆ ಉಂಟಾಗಿದೆ. ಆದರೆ, ಅವರನ್ನು ರಕ್ಷಿಸಲಾಗಿದೆ.
ತಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೇಸಿಂಗ್ ಪೈಪ್‌ಗಳನ್ನು ಬದಲಾಯಿಸುವ ಸಂದರ್ಭದಲ್ಲಿ ಹಲವು ಎಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ. ಪೈಪ್‌ನ್ನು ತೆಗೆಯುವಾಗ ಸುತ್ತಲಿನ ಮಣ್ಣು ತುಂಬ ಸಡಿಲವಾಗುತ್ತದೆ. ಅದರಲ್ಲೂ ಈಗ ಸ್ವಲ್ಪ ಮಳೆಯೂ ಬಂದಿರುವುದರಿಂದ ಮಣ್ಣು ಸಡಿಲವಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಪೈಪ್ ತೆಗೆದ ಕೂಡಲೇ ಒಮ್ಮೆಗೇ ಎಲ್ಲ ಕಡೆಯಿಂದ ಮಣ್ಣು ಕುಸಿದು ದುರಂತ ಸಂಭವಿಸಿದೆ.
34 ವರ್ಷದ, ಮನೆಗೆ ಆಧಾರವಾಗಿದ್ದ ಯುವಕನನ್ನು ಕಳೆದುಕೊಂಡವರ ನೋವಿನ ಆಕ್ರಂದನ ಅಲ್ಲಿ ಮುಗಿಲುಮುಟ್ಟಿತ್ತು.
ಧಾರಾಕಾರ ಮಳೆ: ದೂದ್ ಸಾಗರ್ ಬಳಿ ಕುಸಿದ ಗುಡ್ಡಗಳು
ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅನಾಹುತ ಸಂಭವಿದೆ. ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್ ಸಾಗರ ಬಳಿ ಗುಡ್ಡ ಕುಸಿತ ಉಂಟಾಗಿದೆ.
ಭಾನುವಾರ ಸಂಜೆ 6 ಗಂಟೆಗೆ ಗುಡ್ಡ ಕುಸಿದು ರೈಲ್ವೆ ಟ್ರ್ಯಾಕ್ ಮೇಲೆ ಮಣ್ಣು- ಬಂಡೆಗಳು ಬಿದ್ದಿವೆ. ಇದರಿಂದಾಗಿ ನಾಲ್ಕು ಗಂಟೆಗಳ ಕಾಲ ಬೆಳಗಾವಿ- ಗೋವಾ ಮಧ್ಯೆ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರೈಲು ಬರುವುದಕ್ಕೆ ಮುನ್ನವೇ ಗುಡ್ಡ ಕುಸಿತ ಸಂಭವಿಸಿದ್ದರಿಂದ ಅದೃಷ್ಟವಶಾತ್ ದುರಂತ ತಪ್ಪಿದೆ. ರಾತ್ರಿ 10 ಗಂಟೆಗಳ ಬಳಿಕ ರೈಲುಗಳ ಕಾರ್ಯಾಚರಣೆ ಪುನರಾರಂಭ ಆಗಿದೆ.
ಮಣ್ಣು-ಬಂಡೆಗಳ ತೆರವಿಗೆ ಗೋವಾ ಅಗ್ನಿಶಾಮಕ ಠಾಣೆ ಸಿಬ್ಬಂದಿ, ರೈಲ್ವೆ ಪೊಲೀಸರ ಹರಸಾಹಸ ನಡೆಸಿದರು.
ದೂದ್ ಸಾಗರ ಜಲಪಾತ ವೀಕ್ಷಣೆಗೆ ಭಾನುವಾರ ಅಪಾರ ಪ್ರಮಾಣದಲ್ಲಿ ತೆರಳಿದ್ದ ಪ್ರವಾಸಿಗರ ದಂಡು ಹರಿದುಬರುತ್ತಿದ್ದು, ಇವರನ್ನು ತಡೆಯುವುದೇ ಕಷ್ಟವಾಗುತ್ತಿದೆ. ಭಾನುವಾರ ಇಲ್ಲಿ ಸಾಕಷ್ಟು ಮಂದಿ ಪ್ರವಾಸಿಗರು ಬಂದು ಕಿರಿಕಿರಿ ಮಾಡಿದ್ದರಿಂದ ಅವರನ್ನು ತಡೆದು ಬಸ್ಕಿ ಹೊಡೆಸಲಾಗಿದೆ.
ಇದನ್ನೂ ಓದಿ: Rain News : ಭಾರಿ ಮಳೆಗೆ ಸೋರುತಿಹುದು ಸುರಂಗ ಮಾಳಿಗೆ; ಗುಡ್ಡದ ಮಣ್ಣು ಕುಸಿತ