Site icon Vistara News

Electric shock: ಬಂಗಾರಪೇಟೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬಾಲಕ ಸಾವು

Elderly woman dies of electrocution in Kaggundi village

ಕೋಲಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆಯ ಬೆಂಗನೂರು ಗ್ರಾಮದ ಬಳಿ ನಡೆದಿದೆ. ಮೂತ್ರ ವಿಸರ್ಜನೆಗೆ ಹೋದಾಗ ಬಾಲಕನಿಗೆ ವಿದ್ಯುತ್‌ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ತಮ್ಮೇನಹಳ್ಳಿ ಗ್ರಾಮದ ನಿವಾಸಿ ಪ್ರಜ್ವಲ್ (16) ವಿದ್ಯುತ್ ಮೃತ ಬಾಲಕ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Hassan News: ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಹಠಾತ್ ಸಾವು; ವೈದ್ಯರ ವಿರುದ್ಧ ಆಕ್ರೋಶ

ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು

ಶಿವಮೊಗ್ಗ: ಮೀನು ಹಿಡಿಯಲೆಂದು ತುಂಗಾ ನದಿಗೆ (Tunga river) ಇಳಿದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ (Two Youngsters drowned). ಕಾಲೇಜು ವಿದ್ಯಾರ್ಥಿಗಳಾಗಿರುವ (College Students) ಮೊಯಿನ್‌ ಖಾನ್‌ ಮತ್ತು ಅಂಜುಂ ಖಾನ್‌ ನೀರಿನಲ್ಲಿ ಕಣ್ಮರೆಯಾದವರು. ಇಬ್ಬರೂ 18 ವರ್ಷದವರು.

ಶಿವಮೊಗ್ಗದ ಶಿವಮೊಗ್ಗದ ಕುರುಬರ ಪಾಳ್ಯದಲ್ಲಿ ದುರ್ಘಟನೆ ನಡೆದಿದೆ. ಸವಾಯಿಪಾಳ್ಯದ ಮೊಯಿನ್ ಖಾನ್(18), ಇಲ್ಯಾಸ್ ನಗರದ ಅಂಜುಂ ಖಾನ್(18) ಇಬ್ಬರೂ ಬೇರೆ ಕೆಲವು ಸ್ನೇಹಿತರ ಜತೆ ಮೀನು ಹಿಡಿಯಲೆಂದು (Youths went for fishing) ನದಿ ತೀರಕ್ಕೆ ಬಂದಿದ್ದರು. ಅಲ್ಲಿ ನೀರಿಗಿಳಿದು ಮೀನು ಹಿಡಿಯುತ್ತಾ ಸುಳಿಗೆ ಸಿಲುಕಿಕೊಂಡಿದ್ದಾರೆ. ಹಾಗೆ ನೀರಿನಲ್ಲಿ ಮುಳುಗಿದ ಅವರು ಮೇಲೆ ಬಂದಿಲ್ಲ.

ಬಿಸಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಮೊಯಿನ್ ಖಾನ್ ಶವ ಪತ್ತೆಯಾಗಿದ್ದರೆ, ಬಿಎ ಮೊದಲ ವರ್ಷದ ವಿದ್ಯಾರ್ಥಿ ಅಂಜುಂಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ | Fire Incident: ಮೈಸೂರು ರಸ್ತೆಯಲ್ಲಿ ಅಗ್ನಿ ಅವಘಡ; 3 ಮನೆ, 2 ಗೋಡೌನ್‌, ಬೈಕ್‌ಗಳು ಬೆಂಕಿಗಾಹುತಿ

ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಇವರು ಮೀನು ಹಿಡಿಯಲು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಉತ್ಸಾಹದಲ್ಲಿ ಅವರಿಗೆ ಸಾವು ಕಣ್ಣೆದುರು ಬಂದು ನಿಂತಿದ್ದು ಗೊತ್ತಾಗಲಿಲ್ಲ. ಅವರ ಮನೆಯವರು ಕುಟುಂಬಿಕರು ನದಿ ತೀರಕ್ಕೆ ಬಂದಿದ್ದು ಕುಟುಂಬದವರ ಕಣ್ಣೀರು ಹರಿಯುತ್ತಲೇ ಇದೆ. ವಯಸ್ಸಿಗೆ ಬಂದ ಮಕ್ಕಳು ಈ ರೀತಿಯಾಗಿ ಪ್ರಾಣ ಕಳೆದುಕೊಳ್ಳುವ ನೋವಿನ ಬಗ್ಗೆ ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Exit mobile version