ಕರ್ನಾಟಕ
Fire Incident: ಮೈಸೂರು ರಸ್ತೆಯಲ್ಲಿ ಅಗ್ನಿ ಅವಘಡ; 3 ಮನೆ, 2 ಗೋಡೌನ್, ಬೈಕ್‌ಗಳು ಬೆಂಕಿಗಾಹುತಿ
Fire Incident: ಮೊದಲಿಗೆ ಡೆಕೋರೆಶನ್ ವಸ್ತುಗಳ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಮೂರು ಮನೆ, ಒಂದು ಅಂಗಡಿ, ಎರಡು ಗೋಡೌನ್‌ಗಳಿಗೆ ಬೆಂಕಿ ವ್ಯಾಪಿಸಿದ್ದು, ಈ ವೇಳೆ ಎರಡು ಬೈಕ್‌ಗಳೂ ಸುಟ್ಟು ಕರಕಲಾಗಿವೆ.
ಬೆಂಗಳೂರು: ಡೆಕೊರೇಶನ್ ವಸ್ತುಗಳ ಗೋಡೌನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು 3 ಮನೆ, 1 ಅಂಗಡಿ, 2 ಗೋಡೌನ್ ಅಗ್ನಿಗಾಹುತಿಯಾಗಿ, 2 ಬೈಕ್‌ಗಳು ಸುಟ್ಟುಕರಕಲಾದ ಘಟನೆ (Fire Incident) ಮೈಸೂರು ರಸ್ತೆಯ ವಿನಾಯಕ ಚಿತ್ರ ಮಂದಿರದ ಬಳಿ ನಡೆದಿದೆ.
ಬೆಂಕಿ ಅವಘಡದಲ್ಲಿ ಭಾಗ್ಯಮ್ಮ ಎಂಬುವವರ ಮನೆಯಲ್ಲಿ ನಗದು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ಯುಗಳು ಸುಟ್ಟು ಕರಕಲಾಗಿವೆ. ಮತ್ತೊಂದು ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಕಾರಣ ಹಸಿಬುಲ್ಲಾ ಎಂಬುವವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೆಕೋರೆಶನ್ ವಸ್ತುಗಳ ಗೋಡೌನ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನಂತರ ಪಕ್ಕದ ಮೂರು ಮನೆ, ಅಂಗಡಿ, ಎರಡು ಗೋಡೌನ್‌ಗಳಿಗೆ ಬೆಂಕಿ ವ್ಯಾಪಿಸಿದ್ದು, ಎರಡು ಬೈಕ್‌ಗಳು ಕೂಡ ಹೊತ್ತಿ ಉರಿದಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಗೋಡೌನ್ ಪಕ್ಕದಲ್ಲಿ ನೂರಾರು ಮನೆಗಳು ಇದ್ದು, ಕೊಂಚ ಯಾಮಾರಿದದ್ದರೂ ದೊಡ್ಡ ಅನಾಹುತವೇ ನಡೆದು ಹೊಗುತ್ತಿತ್ತು.
ಇದನ್ನೂ ಓದಿ | Murder Case : ತವರು ಮನೆ ಸೇರಿದ್ದ ಹೆಂಡ್ತಿಗೆ ಗುಂಡು ಹೊಡೆದು ಕೊಂದಿದ್ದ ಪಾಪಿ ಆತ್ಮಹತ್ಯೆಗೆ ಶರಣು!
ಸ್ಥಳಕ್ಕೆ ಅಗ್ನಿ ಶಾಮಕದಳ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಶೇ.80 ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ವಿದ್ಯುತ್ ಆಘಾತಕ್ಕೆ ಬಾಲಕ ಬಲಿ, ಟಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದು ಯುವಕ ದುರ್ಮರಣ
ತುಮಕೂರು/ಮಂಡ್ಯ: ಎರಡು ಅವಘಡಗಳು (Double tragedy) ಒಬ್ಬ ಬಾಲಕ ಮತ್ತು ಇನ್ನೊಬ್ಬ ಚಿಗುರು ಮೀಸೆಯ ಯುವಕನನ್ನು ಬಲಿ (Boy and young man died in accident) ಪಡೆದಿದೆ. ತುಮಕೂರು (Tumkur News) ಮತ್ತು ಮಂಡ್ಯದಲ್ಲಿ (Mandya News) ನಡೆದ ಘಟನೆಯಲ್ಲಿ 10 ವರ್ಷದ ಬಾಲಕ ಮತ್ತು 19 ವರ್ಷದ ಯುವಕ ಮೃತಪಟ್ಟಿದ್ದಾರೆ.
ಕುಣಿಗಲ್‌ನಲ್ಲಿ ವಿದ್ಯುತ್ ಪ್ರವಹಿಸಿ ಬಾಲಕ ಸಾವು
ತುಮಕೂರು: ತುಮಕೂರು ಜಿಲ್ಲೆ, ಕುಣಿಗಲ್ ಪಟ್ಟಣದಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಮೆಟ್ಟಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಋತ್ವಿಕ್ ಎಂಬ ಹತ್ತು ವರ್ಷದ ಬಾಲಕನೇ ಮೃತಪಟ್ಟವನು. ಮನೆ ಸಮೀಪ ನಿವೇಶನ ಒಂದರಲ್ಲಿ ಆಟ ಆಡುತ್ತಿದ್ದ ಋತ್ವಿಕ್ಈ ವೇಳೆ ಸಮೀಪದಲ್ಲಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿದ್ದ. ಆಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ಹರಿಯುವ ತಂತಿಗಳನ್ನು ಮಕ್ಕಳು ಆಡುವ ಜಾಗದಲ್ಲಿ ಬಿಟ್ಟಿದ್ದೇ ದುರಂತಕ್ಕೆ ಕಾರಣವಾಗಿದೆ. ಹತ್ತು ವರ್ಷದ ಬಾಲಕನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಮಂಡ್ಯ ಬಳಿ ಟಿಲ್ಲರ್ ಗೆ ಕಾರು ಡಿಕ್ಕಿ ಯುವಕ ಸಾವು
ಮಂಡ್ಯ: ನಗರದ ಮಂಡ್ಯ ಹೊರ ವಲಯದ ಚಿಕ್ಕ ಮಂಡ್ಯ ಬಳಿಯ ಸರ್ವಿಸ್ ರಸ್ತೆಯಲ್ಲಿ ಘಟನೆ ಟಿಲ್ಲರ್‌ಗೆ ಕಾರು ಬಡಿದು ಒಬ್ಬ ಯುವಕ ಮೃತಪಟ್ಟಿದ್ದಾನೆ. ಚಿಕ್ಕಮಂಡ್ಯದ ಸುದರ್ಶನ್ (19)ಮೃತ ಯುವಕ.
ಸುದರ್ಶನ್ ಬೆಳಗ್ಗೆ ಬೇಗನೆ ಹೊಲಕ್ಕೆ ಹೋಗಿ ಭತ್ತದ ನಾಟಿ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆ ದುರ್ಘಟನೆ ನಡೆದಿದೆ.
ಇದನ್ನೂ ಓದಿ: Murder Case : ಮನೆಯಲ್ಲಿರಲ್ಲ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿ, ಅತ್ತೆಯನ್ನೇ ಹೊಡೆದು ಕೊಂದ ಧೂರ್ತ
ಟಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಮ್ಮೆಗೇ ಜರ್ಕ್ ಹಾಕಿದಂತಾಗಿ ಯುವಕನ ಎದೆಗೆ ಹ್ಯಾಂಡಲ್ ಚುಚ್ಚಿದ ಪರಿಣಾಮ ಸ್ಥಳದಲ್ಲೇ ಸಾವು ಸಂಭವಿಸಿದೆ. ಡಿಕ್ಕಿ ಹೊಡೆದ ಬಳಿಕ ಕಾರು ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಉಡುಪಿ
Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್
Chaitra Kundapura : ವಂಚಕಿ ಚೈತ್ರಾ ಜತೆ ಕುಂದಾಪುರದ ಹೆಸರು ಬಳಸಬಾರದು ಎಂಬ ಅರ್ಜಿದಾರರ ದಾವೆಗೆ ಕೋರ್ಟ್ ತಾತ್ಕಾಲಿಕವಾಗಿ ಓಕೆ ಎಂದಿದೆ. ಮುಂದಿನ ವಿಚಾರಣೆಯ ಬಳಿಕ ಇದಕ್ಕೆ ಸ್ಪಷ್ಟತೆ ಸಿಗಲಿದೆ.
ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ ಮಾಡಿರುವ ಕುಂದಾಪುರ ಮೂಲದ ಫೈರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ (Chaitra Kundapura) ಹೆಸರು ಈಗ ಎಲ್ಲೆಡೆ ಫೇಮಸ್. ಆದರೆ, ಈಕೆಯ ಹೆಸರನ್ನು ಪದೇಪದೆ ವಂಚನೆಯ ಹೆಸರಲ್ಲಿ ಬಳಸುತ್ತಿರುವುದು ಕುಂದಾಪುರ (Kundapura Name of a town) ಎಂಬ ಊರಿಗೆ ಅಪಮಾನ ಮಾಡಿದಂತಾಗುತ್ತಿದೆ. ಹೀಗಾಗಿ ಆಕೆಯ ಹೆಸರಿನ ಜತೆಗಿರುವ ʻಕುಂದಾಪುರʼ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಎಂದು ಕುಂದಾಪುರದ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೊಕ್ಕಿದ್ದರು. ಈ ಕೋರ್ಟ್ ಈ ಬೇಡಿಕೆಗೆ ತಾತ್ಕಾಲಿಕ ಅಸ್ತು (Court restricts media from using Kundapuara name with Chaitra) ಎಂದಿದೆ.
ವಂಚನೆ ಪ್ರಕರಣವಾಗಿರುವುದರಿಂದ, ಬಿಜೆಪಿ ಟಿಕೆಟ್ ವಂಚನೆಯಾಗಿರುವುದರಿಂದ, ಪ್ರಧಾನ ಆರೋಪಿ ಸಾಕಷ್ಟು ಜನಪ್ರಿಯಳಾಗಿರುವುದರಿಂದ ಆಕೆಯ ಹೆಸರು ಮತ್ತು ಸುದ್ದಿ ಗಮನ ಸೆಳೆದಿತ್ತು. ಹೀಗಾಗಿ ಆಕೆಯೊಂದಿಗೆ ಆಕೆಯ ಊರಿನ ಹೆಸರೂ ಜತೆಯಾಗಿ ಬರುತ್ತಿತ್ತು. ಇದು ಸಹಜವಾಗಿ ಅಲ್ಲಿನ ಜನರಿಗೆ ಬೇಸರ ಉಂಟು ಮಾಡಿದೆ.
ಇದನ್ನು ಗಮನಿಸಿದ ಕುಂದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಕೆಯ ಹೆಸರಿನ ಜತೆ ಕುಂದಾಪುರದ ಹೆಸರು ತಳುಕು ಹಾಕುವುದು ಬೇಡ ಎಂದು ಕೋರಿದ್ದರು.
ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್ ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್ ಶೆಟ್ಟಿ ದಾವೆ ಹೂಡಿದವರು. ನಾನು ಕುಂದಾಪುರ ಮೂಲದವನಾಗಿದ್ದು, ಹೋಟೆಲ್ ನಡೆಸುತ್ತಿದ್ದೇನೆ. ಹೋಟೆಲ್ ಗೆ ಬರುವ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ಅವರು ದಾವೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. 10 ಮತ್ತು 11ನೇ ಶತಮಾನದಲ್ಲಿ ಅಲುಪು ರಾಜವಂಶಸ್ಥರಾದ ಕುಂದವರ್ಮ ಅವರು ಕುಂದಾಪುರದಲ್ಲಿ ಆಳ್ವಿಕೆ ನಡೆಸಿದ್ದು. ಐತಿಹಾಸಿಕ ಕುಂದೇಶ್ವರ ದೇವಸ್ಥಾನ ಸಹ ನಿರ್ಮಿಸಿದ್ದಾರೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಂತರ ಪೋರ್ಚಗೀಸರು, ಜರ್ಮನ್ನರು, ಟಿಪ್ಪುಸುಲ್ತಾನ್, ಬ್ರಿಟಿಷರು ಕುಂದಾಪುರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅನೇಕ ಐತಿಹಾಸಿಕ ದೇವಸ್ಥಾಗಳಿಂದ ಕುಂದಾಪುರ ಖ್ಯಾತಿ ಪಡೆದಿದೆ ಎಂದು ದಾವೆಯಲ್ಲಿ ವಿವರಿಸಲಾಗಿತ್ತು.
ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿತ್ತು.
ಇದನ್ನೂ ಓದಿ: Chaitra Kundapura : ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ
ಹೀಗಾಗಿ ಮಾಧ್ಯಮಗಳು ಆಕೆಯ ವಿಚಾರ ಬಂದಾಗ ಕುಂದಾಪುರ ಎಂಬ ಹೆಸರನ್ನು ಉಲ್ಲೇಖಿಸದಂತೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದರು. ಜತೆಗೆ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ಕೂಡಾ ಕೇಳಿದ್ದರು.
ಇದೀಗ ಕೋರ್ಟ್ ಅವರ ದಾವೆಯನ್ನು ಸ್ವೀಕರಿಸಿದ್ದು ಮುಂದಿನ ವಿಚಾರಣೆಯ ವರೆಗೆ ಮಾಧ್ಯಮಗಳು ಆಕೆಯ ಹೆಸರಿನ ಜತೆಗೆ ಕುಂದಾಪುರ ಎಂಬ ಹೆಸರನ್ನು ಬಳಸದಂತೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ವಿಚಾರಣೆಯವರೆಗೆ ಈ ನಿರ್ಬಂಧವನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ
HD Kumaraswamy : ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ ನೀಡಿದ 3 ಸಲಹೆಗಳು
HD Kumaraswamy: ಮಂಡ್ಯದ ಕೆಆರ್‌ಎಸ್ ಅಣೆಕಟ್ಟಿಗೆ ಹೋಗಿ ನೀರಿನ ಪರಿಸ್ಥಿತಿ ಅವಲೋಕನ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಮೂರು ಸಲಹೆ ಕೊಟ್ಟಿದ್ದಾರೆ.
ಮೈಸೂರು: ಬಿಜೆಪಿ ನಾಯಕರ ಜತೆ ಮೈತ್ರಿ ಮಾತುಕತೆಗಾಗಿ (BJP-JDS Alliance) ದಿಲ್ಲಿಗೆ ತೆರಳಿದ್ದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ(HD Kumaraswamy) ಅವರು ಅಲ್ಲಿಂದ ಮರಳುತ್ತಲೇ ಕಾವೇರಿ ಹೋರಾಟದ ಕಣಕ್ಕೆ (Cauvery dispute) ಧುಮುಕಿದ್ದಾರೆ. ಶನಿವಾರ ದಿಲ್ಲಿಯಿಂದ ಬಂದವರೇ ನೇರವಾಗಿ ಮಂಡ್ಯದ ಕೆಆರ್‌ಎಸ್ ಅಣೆಕಟ್ಟೆಗೆ (KRS Dam) ಭೇಟಿ ನೀಡಿ ಅಲ್ಲಿನ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಮಂಡ್ಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ (Protest at Mandya) ಪಾಲ್ಗೊಂಡರು.
ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಮೂರು ಸಲಹೆ
ಕೆಆರ್‌ಎಸ್ ಅಣೆಕಟ್ಟೆಗೆ ಭೇಟಿ ನೀಡಿದ ಅವರು ಅಲ್ಲಿನ ಪರಿಸ್ಥಿತಿಯನ್ನು ಕಂಡು ಈ ಪರಿಸ್ಥಿತಿಯಲ್ಲಿ ನೀರು ಬಿಡುವುದು ಸಾಧ್ಯವೇ ಎಂದು ಕೇಳಿದರು. ಕೆಆರ್‌ಎಸ್ ಅಣೆಕಟ್ಟೆಗೆ ಭೇಟಿ ನೀಡಿದ ಜೆಡಿಎಸ್ ನಿಯೋಗದಲ್ಲಿ ಕುಮಾರಸ್ವಾಮಿ ಅವರ ಜತೆ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಿ.ಸಿ.ತಮ್ಮಣ್ಣ ಸೇರಿದಂತೆ ಪ್ರಮುಖರು ಇದ್ದರು.
ಅಣೆಕಟ್ಟೆ ಅವಲೋಕನ ಮಾಡಿದ ಬಳಿಕ ಮಾತನಾಡಿದ ಅವರು ಮೂರು ಸಲಹೆಗಳನ್ನು ನೀಡಿದರು.
- ಪಾಲಿಸಲಾಗದ ಆದೇಶ ಪಾಲಿಸದೇ ಇದ್ದರೆ ನ್ಯಾಯಾಂಗ ನಿಂಧನೆ ಆಗಲ್ಲ. ಈ ಸಂಬಂಧ 2016ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ಇದರ ಆಧಾರದ ಮೇಲೆ ನೀರು ನಿಲ್ಲಿಸಿ ಸುಪ್ರೀಂಕೋರ್ಟ್‌ನಲ್ಲಿ ಚಾಲೆಂಜ್ ಮಾಡಿ.
- ಮೂವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಾಜ್ಯದಲ್ಲಿ ಇದ್ದಾರೆ. 6 ನ್ಯಾಯಾಲಯಗಳು, ಅಕ್ವೋಕೇಟ್ ಜನರಲ್ ಆಗಿದ್ದವರು ಇದ್ದಾರೆ. ಅವರ ಸಭೆ ಮಾಡಿ ಕಾನೂನು ಹೋರಾಟಕ್ಕೆ ಸಲಹೆ ಪಡೆಯಿರಿ.
- ಸಂಕಷ್ಟ ಸೂತ್ರ ರಚಿಸಲು ಇದು ಸಕಾಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮಾರ್ಗಸೂಚಿ ಸಿದ್ಧಪಡಿಸಿ.
ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸರಕಾರಕ್ಕೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಸಮರ್ಥರವಾಗಿ ಬಳಸಿಕೊಳ್ಳಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು.
ಪ್ರಾಧಿಕಾರಕ್ಕೆ ಮಾಹಿತಿ ನೀಡುವಲ್ಲಿ ಸರ್ಕಾರ ವಿಫಲ ಎಂದ ಎಚ್‌ಡಿಕೆ
ಮಂಡ್ಯದಲ್ಲಿ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಬಂದ್ ಮತ್ತು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು, ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಮುಂದೆ ಸೂಕ್ತ ಮಾಹಿತಿ ಕೊಡವಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ʻʻಸರ್ಕಾರ ಆರಂಭಿಕ ದಿನಗಳಲ್ಲಿ ವಿಷಯ ಪ್ರಸ್ತಾಪಿಸುವಾಗ ಲಘುವಾಗಿ ತೆಗೆದುಕೊಂಡಿದ್ದಾರೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ಮನವರಿಕೆ ಮಾಡಿಕೊಡುವುದರಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಸಮಸ್ಯೆ ಉದ್ಭವವಾಗಿದೆ ಎಂದರು.
ನಾನು, ಬಸವರಾಜ ಬೊಮ್ಮಾಯಿಯವರು ನೀರು ಬಿಡಬೇಡಿ ಎಂದು ಹೇಳಿದೆವು. ಆದರೂ ಕಾನೂನು ತಜ್ಞರ ಮಾತು ಕೇಳಿ ನೀರು ಬಿಟ್ಟಿದ್ದಾರೆ. ಈಗ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ: Cauvery Protest: ಬೆಂಗಳೂರು ಬಂದ್ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ
ʻʻಬಂಗಾರಪ್ಪನವರು ಚಿಟಿಕೆ ಹೊಡೆದಂಗೆ ಸಮಸ್ಯೆ ಬಗೆಹರಿಸಿದ್ರು ಅಂತ ಮಧು ಬಂಗಾರಪ್ಪ ಹೇಳಿದ್ದಾರೆ. ಯಾವ ಸಮಸ್ಯೆ ಪರಿಹರಿಸಿದ್ರು? ಬೆಂಗಳೂರಿನಲ್ಲಿ ಬಂದ್ ಹೆಸರಲ್ಲಿ ಲೂಟಿ ಮಾಡಿಸಿದರು. ಬಂದ್ ಹೆಸರಲ್ಲಿ ಏನೇನಾಯ್ತು ಅಂತ ನಾವು ನೋಡಿದ್ದೇವೆ. ಮುಗ್ಧ ಜನರ ವಿಷಯದಲ್ಲಿ ನಾವು ಆಟ ಆಡಬಾರದು. ಇದರಲ್ಲಿ ತಾಂತ್ರಿಕ ವಿಷಯಗಳಿವೆʼʼ ಎಂದರು.
ಕರ್ನಾಟಕ
Women’s Reservation Bill: ಮೋದಿಯವರ ಮಹಿಳಾ ಮೀಸಲಾತಿ 2024, 2029, 2034ರಲ್ಲೂ ಜಾರಿಯಾಗಲ್ಲ: ಸಿದ್ದರಾಮಯ್ಯ
Women’s Reservation Bill: ಮೋದಿ ಸರ್ಕಾರದಕ್ಕೆ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಇಲ್ಲ. ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಮಸೂದೆಗೆ 15 ವರ್ಷ ಆಯಸ್ಸು ಫಿಕ್ಸ್ ಮಾಡಿದ್ದು ಯಾಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು: ಮಹಿಳಾ ಮೀಸಲಾತಿಗೆ ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ. ಈಗ ಮೋದಿಯವರು ಜಾರಿ ಮಾಡಿದ್ದೇನೆ ಎನ್ನುತ್ತಿರುವ ಈ ಮಹಿಳಾ ಮೀಸಲಾತಿ 2024, 2029 ಅಥವಾ 2034ರಲ್ಲೂ ಜಾರಿ ಆಗುವುದಿಲ್ಲ. ಅಷ್ಟೊತ್ತಿಗೆ ಕಾಯ್ದೆಯ (Women’s Reservation Bill) ಆಯಸ್ಸೇ ಮುಗಿದಿರುತ್ತದೆ. ಆದ್ದರಿಂದ ಮಹಿಳಾ ಮೀಸಲಾತಿ ಜಾರಿ ಆಗುವುದೇ ಡೌಟು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಮಹಿಳಾ ಮೀಸಲಾತಿ” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೆ ಇಷ್ಟೊಂದು ಅಡೆತಡೆಗಳನ್ನು ಹಾಕುತ್ತಿರಲಿಲ್ಲ. ನರೇಂದ್ರ ಮೋದಿಯವರು ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ಆಯಸ್ಸು ಫಿಕ್ಸ್ ಮಾಡಿದೆ. ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ಇದೆ. ಅಂದರೆ ಈಗ ಕಾಯ್ದೆ ಜಾರಿ ಆಗಿದೆ. ಇದಕ್ಕೆ ಇನ್ನು 15 ವರ್ಷ ಮಾತ್ರ ಆಯಸ್ಸು. ಆದರೆ, ಜಾತಿ ಜನಗಣತಿ ಮತ್ತು ಡೀಲಿಮಿಟೇಷನ್ ಎನ್ನುವ ಎರಡು ಕೊಕ್ಕೆ ಹಾಕಿಟ್ಟಿದ್ದಾರೆ. ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರುತ್ತೆ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆಗೆ ಜಾರಿ ಆಗುವ ಮೊದಲೇ ಅದರ ಆಯಸ್ಸೇ ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ ಎಂದು ಟೀಕಿಸಿದರು.
ಇದನ್ನೂ ಓದಿ | Congress Politics : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧಿಕೃತ ಎಂಟ್ರಿ; ಎಲ್ಲಾ 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ
ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ದೇವರೇ ನನ್ನನ್ನು ಕಳುಹಿಸಿದ್ದು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಮೊನ್ನೆ ಹೇಳಿದರು. ಈಗ ನೋಡಿದರೆ ಈ ರೀತಿ ವಂಚನೆ ಮಹಿಳೆಯರಿಗೆ ಆಗಿದೆ. ಮಹಿಳೆಯರಿಗೆ ವಂಚನೆ ಮಾಡಿ ಅಂತನಾ ದೇವರು ನಿಮ್ಮನ್ನು ಕಳುಹಿಸಿದ್ದು ಎಂದು ವ್ಯಂಗ್ಯವಾಡಿದರು.
ಶೇ.50 ಮಹಿಳಾ ಮೀಸಲಾತಿಗೂ ನನ್ನ ಬೆಂಬಲ ಇದೆ
ಮಹಿಳಾ ಮೀಸಲಾತಿ ಬಿಲ್ ಸಿದ್ದಪಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ ಶೇ 33 ಮಾತ್ರವಲ್ಲ, ಶೇ 50 ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ಮಹಿಳೆಯರೂ ಶೂದ್ರರ ರೀತಿ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು. ಮಹಿಳೆಯರ ಹೋರಾಟ ಮತ್ತು ಸಂವಿಧಾನದ ಕಾರಣಕ್ಕೆ ಶಿಕ್ಷಣದಲ್ಲಿ ಅವಕಾಶ ದೊರೆಯಿತು. ಅವಕಾಶ ಸಿಕ್ಕಾಗ ಪುರುಷರಿಗಿಂತ ಶಿಕ್ಷಣದಲ್ಲಿ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಸುಳ್ಳು ಚಪ್ಪಾಳೆ ಹೊಡಿಯಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರಿಸಬೇಕು ಎಂದರು.
ಇದನ್ನೂ ಓದಿ | Cauvery Protest: ಬೆಂಗಳೂರು ಬಂದ್ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ
ಶಿಕ್ಷಣ ತಜ್ಞ, ರಾಜಕೀಯ ವಿಶ್ಲೇಷಕರಾದ ಪ್ರೊ.ಮುಜಫರ್ ಅಸಾದಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ವಿಷಯ ಮಂಡಿಸಿದರು. ಶಾಸಕಿ ನಯನ ಮೋಟಮ್ಮ, ನ್ಯಾಯವಾದಿ ಅಶ್ವಿನಿ ಓಬಳೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ನಾಯಕರಾದ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ನ್ಯಾಯವಾದಿ ಎನ್.ಅನಂತ ನಾಯಕ್, ಬಿ.ಟಿ.ಲಲಿತಾ ನಾಯಕ್ ಮತ್ತು ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕರ್ನಾಟಕ
Cauvery Protest: ಬೆಂಗಳೂರು ಬಂದ್ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ
Cauvery protest: ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ (Cauvery protest) ರಾಜ್ಯ ಸರ್ಕಾರದ ವಿರುದ್ಧ ನಡೆದ ಮಂಡ್ಯ ಬಂದ್ (Mandya bandh), ಸೆ. 26ಕ್ಕೆ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore Bandh) ಸಂಬಂಧಿಸಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಣ್ಣಗಿನ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಪ್ರತಿಭಟನೆ ಬಂದ್ ಮೂಲಕ ಬೆಂಗಳೂರಿನ ಗೌರವಕ್ಕೆ ಮಸಿ ಬಳಿಯಬೇಡಿ, ಬಂದ್ ಬೇಡ ಎಂದು ಹೇಳಿದರೆ ಸಿದ್ದರಾಮಯ್ಯ ಅವರಂತೂ ಪ್ರತಿಭಟನೆಯ ಹಕ್ಕು ಎಲ್ಲರಿಗೂ ಇದೆ, ಅದನ್ನು ನಾವು ತಡೆಯುವುದಿಲ್ಲ ಎಂದಿದ್ದಾರೆ.
ರಾಜ್ಯದ ಹಿತ ಕಾಪಾಡಲು ನಾವೇ ಇದ್ದೇವೆ, ಬಂದ್ ಯಾಕೆ?
ʻʻಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಅವರವರ ಹೋರಾಟ ಅವರು ಮಾಡ್ತಾರೆ. ಆದರೆ, ಈ ಹೋರಾಟ ಯಾಕಾಗಿ, ಯಾರ ವಿರುದ್ಧ? ಸರ್ಕಾರವೇ ರೈತರ ಪರವಾಗಿ ನಿಂತಿದೆ. ನಾವೇ ಹೋರಾಡುತ್ತಿದ್ದೇವೆʼʼ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ʻʻಬೆಂಗಳೂರು ಬಂದ್ ಮಾಡೋದು ಬೇಡ. ಯಾವ ಲಾಭಕ್ಕಾಗಿ ಬಂದ್ ಮಾಡ್ತಾರೆ? ಸರ್ಕಾರವೇ ಹೋರಾಟಕ್ಕೆ ನಿಂತಿದೆ. ಬಂದ್ ಮಾಡೋದ್ರಿಂದ ಯಾವುದೇ ಅನುಕೂಲ ಇಲ್ಲ. ಬೆಂಗಳೂರು ಮರ್ಯಾದೆಯನ್ನ ಹಾಳುಗೆಡವಬೇಡಿ. ಬೆಂಗಳೂರಿನ ಮರ್ಯಾದೆ ಹಾಳು ಮಾಡಿದರೆ ನೀವೇ ಹೃದಯಕ್ಕೆ ಚುಚ್ಚಿಕೊಂಡ ಹಾಗೆ. ಬೆಂಗಳೂರಿನಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯದ ಜನ ವಾಸವಾಗಿದ್ದಾರೆʼʼ ಎಂದು ಹೇಳಿದರು.
ಕಾವೇರಿ ಕುರಿತು ಪ್ರತಿಪಕ್ಷಗಳು ರಾಜಕಾರಣ ನಡೆಸುತ್ತಿವೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, ʻʻಒಳಗಡೆ ಬಂದಾಗ ರಾಜ್ಯದ ಹಿತ, ಹೊರಗಡೆ ಹೋದಾಗ ರಾಜಕಾರಣ ನಡೆಯುತ್ತದೆ. ಹೊಸ ಹುರುಪು ಪ್ರತಿಭಟನೆ ಮಾಡ್ತಾ ಇದ್ದಾರೆ ಮಾಡಲಿʼʼ ಎಂದು ಎಚ್.ಡಿ ಕುಮಾರಸ್ವಾಮಿ ಅವರ ಹೆಸರು ಹೇಳದೆಯೇ ಹೇಳಿದರು.
ʻʻನೀರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅಂಕಿ ಅಂಶ ಹೇಳಿದರೆ ರಾಜ್ಯದ ಹಿತಕ್ಕೆ ಧಕ್ಕೆ ಆಗುತ್ತದೆ. ದೇವೇಗೌಡರು ಹಿರಿಯ ಮುಖಂಡರು. ಅವರು ಹಿಂದೆ ಕೊಟ್ಟ ಒಂದು ಇಂಟರ್ ವ್ಯೂ ತೆಗೆದು ನೋಡಲಿ ಗೊತ್ತಾಗುತ್ತದೆʼʼ ಎಂದು ಹೇಳಿದ ಶಿವಕುಮಾರ್, ʻʻಕುಮಾರಸ್ವಾಮಿ ಅವರೇನೋ ಮಾತಾಡಿದ್ದಾರೆ ಅಮಿತ್ ಷಾ ಜೊತೆ ಅಂದ್ರಲ್ವಾ? ಸೂಕ್ಷ್ಮ ವಾಗಿ ಮಾತಾಡಿದ್ದೇವೆ ಅಂತ ಹೇಳಿದ್ದಾರಲ್ವಾ? ಅದೇನೇನು ನುಡಿಮುತ್ತು ಆಡಿದಾರೆ ಏನು ಅಂತ ಹೇಳಲಿ. ನಾವು ಮೂರ್ಖರೇʼʼ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಲಿ ಅಂತ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಟಿ ರವಿಯವರಿಗೆ ಸದ್ಯಕ್ಕೆ ಎಲ್ಲೂ ಜಾಗವಿಲ್ಲ ಹಾಗಾಗಿ ಮಂಡ್ಯಕ್ಕೆ ಹೋಗಿದ್ದಾರೆ ಎಂದು ಹೇಳಿದರು. ದೇವೇಗೌಡರೇ ಪ್ರಧಾನಿ ಮಧ್ಯಪ್ರವೇಶ ಮಾಡಲಿ ಎಂದು ಹೇಳಿದ್ದಾರೆ ಎಂದು ನೆನಪಿಸಿದರು.
ಇದನ್ನೂ ಓದಿ: Cauvery protest : ಸೆ. 26ರ ಬೆಂಗಳೂರು ಬಂದ್‌ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್‌ಗೂ ಪ್ಲ್ಯಾನಿಂಗ್
ಚಳುವಳಿಯನ್ನು ನಿಲ್ಲಿಸುವುದಿಲ್ಲ ಎಂದ ಸಿದ್ದರಾಮಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯತ್ತಿರುವುದನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಚಳುವಳಿ ಮಾಡಲು ಅವಕಾಶ ಇದೆ. ನಾವು ಅದನ್ನ ನಿಲ್ಲಿಸುವುದಿಲ್ಲ ಎಂದರು. ಮಂಗಳವಾರ ಬೆಂಗಳೂರು ಬಂದ್ ಬಗ್ಗೆ ಸಿಎಂ ಈ ಪ್ರತಿಕ್ರಿಯೆ ನೀಡಿದರು.
ಉಚ್ಚ ನ್ಯಾಯಾಲಯದ ಆದೇಶ ಬರುವ ಮುನ್ನವೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಪಕ್ಷ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನ್ಯಾಯಾಲಯದಲ್ಲಿ ಸುಳ್ಳು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
-
ಕರ್ನಾಟಕ24 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ವೈರಲ್ ನ್ಯೂಸ್4 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ದೇಶ14 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ17 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
South Cinema6 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!