Site icon Vistara News

ಕನ್ನಡದ ಸಂಗೀತಗಾರ್ತಿ ಡಾ.ಜ್ಯೋತ್ಸ್ನಾ ಶ್ರೀಕಾಂತ್‌ಗೆ ಬ್ರಿಟನ್‌ನ ಅತ್ಯುನ್ನತ ಪ್ರಶಸ್ತಿ

Britain MBE award for Dr Jyotsna Srikanth

ನವದೆಹಲಿ: ಕರ್ನಾಟಕದ (Karnataka) ಹೆಮ್ಮೆಯ ಮಹಿಳೆ, ಪ್ರಖ್ಯಾತ ವಯಲಿನ್ ವಾದಕರಾದ ಡಾ.ಜ್ಯೋತ್ಸ್ನಾ ಶ್ರೀಕಾಂತ್ (Dr Jyotsna Srikanth) ಅವರು ಬ್ರಿಟಿಷ್ ರಾಜಮನೆತನ (Britain Kingdom) ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ‘ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್’ (The Most Excellent Order – MBE) ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಬ್ರಿಟನ್‌ನ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ (HD Kumaraswamy) ಜೋತ್ಸ್ನಾ ಅವರನ್ನು ಅಭಿನಂದಿಸಿದ್ದಾರೆ.

ಬೆಂಗಳೂರಲ್ಲಿ ಹುಟ್ಟಿ ಬೆಳೆದ ಜೋತ್ಸ್ನಾ ಅವರು, ಬ್ರಿಟನ್‌ನ ಈ ಪ್ರಶಸ್ತಿಯನ್ನು ಸ್ವೀಕರಿಸಿರುವ ಮೊದಲ ಕರ್ನಾಟಿಕ್ ಸಂಗೀತಗಾರ್ತಿಯಾಗಿದ್ದಾರೆ. ಈ ಹಿಂದೆ ಎಂಬಿಇ ಪಡೆದ ಇತರ ಅಂತಾರಾಷ್ಟ್ರೀಯ ತಾರೆಗಳ ಪೈಕಿ ಅಡೆಲೆ, ಎಡ್ ಶೀರಾನ್ ಮತ್ತು ಮಾರ್ಕಸ್ ರಾಶ್‌ಫೋರ್ಡ್ ಪ್ರಮುಖರಾಗಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಜ್ಯೋತ್ಸನಾ, “ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಹೆಮ್ಮೆಯಾಗುತ್ತಿದೆ. ನನ್ನ ವೃತ್ತಿಜೀವನಕ್ಕೆ ಅಪಾರ ಬೆಂಬಲ ನೀಡಿದ ನನ್ನ ಗುರುಗಳು ಮತ್ತು ಕುಟುಂಬಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಲು ಶ್ರಮಿಸುತ್ತೇನೆ” ಎಂದು ಹೇಳಿದರು.

ಜ್ಯೋತ್ಸ್ನಾ ಅವರು ಬಹುಮುಖಿ ಸಂಗೀತಗಾರ್ತಿಯಾಗಿದ್ದಾರೆ. ದಕ್ಷಿಣ ಭಾರತದ ಕರ್ನಾಟಕದ ಪಿಟೀಲು ವಾದಕ ಮತ್ತು ಸಂಯೋಜಕಿಯಯಾಗಿರುವ ಅವರು ಅತಿ ಹೆಚ್ಚು ಬೇಡಿಕೆಯಲ್ಲಿದ್ದಾರೆ. ಅವರು ಪಾಶ್ಚಿಮಾತ್ಯ ಶಾಸ್ತ್ರೀಯ ವ್ಯವಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಪ್ರಪಂಚದಾದ್ಯಂತ ತಮ್ಮ ಸಂಗೀತ ಕಚೇರಿಗಳನ್ನು ನೀಡುತ್ತಿದ್ದಾರೆ. ಜ್ಯೋತ್ಸ್ನಾ ಅವರು 300 ಕ್ಕೂ ಹೆಚ್ಚು ದಕ್ಷಿಣ ಭಾರತದ ಚಲನಚಿತ್ರಗಳಿಗೆ ಪಿಟೀಲು ನುಡಿಸಿದ್ದಾರೆ. ಡಾ ಬಾಲಮುರಳೀಕೃಷ್ಣ ಅವರಂತಹ ಸಂಗೀತಗಾರರ ಜೊತೆಗೆ ಅವರು ಹಲವಾರು ಬಾರಿ ಸೋಲೋ, ಜುಗಲ್ಬಂಧಿ ಮತ್ತು ಜಾಝ್ ಫ್ಯೂಷನ್ ಸಂಗೀತ ಕಚೇರಿಗಳನ್ನು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಇಸ್ರೋ ವಿಜ್ಞಾನಿಗೆ ಫ್ರಾನ್ಸ್‌ನ ನಾಗರಿಕ ಪ್ರಶಸ್ತಿ ಪ್ರದಾನ! ಈ ಅವಾರ್ಡ್ ಆರಂಭಿಸಿದ್ದು ಯಾರು?

Exit mobile version