ಮಂಡ್ಯ: ಎತ್ತಿನಗಾಡಿ ಓಟದ ಸ್ಪರ್ಧೆಗೆ ವ್ಯಕ್ತಿಯೊಬ್ಬರು ಬಲಿಯಾಗಿ, ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಚಿಕ್ಕ ಮಂಡ್ಯದಲ್ಲಿ ಭಾನುವಾರ ನಡೆದಿದೆ. ಸ್ಪರ್ಧೆ ವೀಕ್ಷಿಸುತ್ತಿದ್ದಾಗ ಎತ್ತಿನ ಗಾಡಿ ಮೈಮೇಲೆ ಹರಿದಿದ್ದರಿಂದ (Bullock cart race) ದುರಂತ ಸಂಭವಿಸಿದೆ.
ಗ್ರಾಮದಲ್ಲಿ ಶ್ರೀ ಹಳ್ಳಿಕೇಶ್ವರ ಬೋರೇಶ್ವರ ಹಾಗೂ ರೈತಮಿತ್ರ ಬಳಗದಿಂದ ೮ನೇ ಅಂತಾರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಯೋಜಿಸಲಾಗಿತ್ತು. ಎರಡು ದಿನಗಳಿಂದ ನಡೆಯುತ್ತಿದ್ದ ಸ್ಪರ್ಧೆಗೆ ವಿವಿಧೆಡೆಯಿಂದ ಜನರು ಆಗಮಿಸಿದ್ದರು. ಭಾನುವಾರ ಸ್ಪರ್ಧೆ ವೀಕ್ಷಿಸುತ್ತಿದ್ದಾಗ ಎತ್ತಿನ ಗಾಡಿ ಮೈಮೇಲೆ ಹರಿದಿದ್ದರಿಂದ ಕೀಲಾರ ಗ್ರಾಮದ ನಾಗರಾಜು (42) ಎಂಬುವವರು ಮೃತಪಟ್ಟಿದ್ದು, ಹುಲಿವಾನ ಗ್ರಾಮದ ಬಾಲಕನೊಬ್ಬನಿಗೆ ಗಂಭೀರ ಗಾಯಗಳಾಗಿವೆ.
ಸ್ಪರ್ಧೆ ವೇಳೆ ವೀಕ್ಷಕರತ್ತ ಎತ್ತಿನಗಾಡಿ ನುಗ್ಗಿದಾಗ ಚಕ್ರಕ್ಕೆ ಸಿಲುಕಿ ನಾಗರಾಜು ಕೊನೆಯುಸಿರೆಳೆದಿದ್ದು, ಇದೇ ವೇಳೆ ಎತ್ತು ತುಳಿದಿದ್ದರಿಂದ ಬಾಲಕನಿಗೆ ಗಾಯಗಳಾಗಿವೆ. ಆತನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Road accident | ಚಲಿಸುತ್ತಿದ್ದ ಟಾಟಾ ಏಸ್ ವಾಹನದಿಂದ ಕೆಳಗೆ ಬಿದ್ದು ಸಾವು, ಕಾಡು ಸೊಪ್ಪು ತರುತ್ತಿದ್ದಾಗ ದುರಂತ