Site icon Vistara News

Bus Accident | ಪಲ್ಟಿ ಹೊಡೆದ ಮಿನಿ ಬಸ್‌; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

bus accident

ಬೆಳಗಾವಿ: ಗೋಕಾಕ ತಾಲೂಕಿನ ಕೊಳವಿ ಬಳಿ ಮಿನಿ ಬಸ್‌ವೊಂದು ಪಲ್ಟಿ (Bus Accident) ಹೊಡೆದಿದ್ದು, ಅದರಲ್ಲಿದ್ದ 15 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್‌ ಪಲ್ಟಿ ಹೊಡೆದಾಕ್ಷಣ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಬಳಿಕ ಕಿಟಕಿ ಒಡೆದು ಹೊರ ಬಂದಿದ್ದು, ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದಾರೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಗೊಂಡವರನ್ನು ಗೋಕಾಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾಲದಿನ್ನಿಯಿಂದ ಗೋಕಾಕ ತಾಲೂಕಿನ ಖನಗಾಂವಿ ಕಡೆಗೆ ಬರುತ್ತಿದ್ದ ಹಳದಿ ಬಣ್ಣದ ಬಸ್ ಪಲ್ಟಿಯಾಗಿದ್ದು, ಗೋಕಾಕ ಗ್ರಾಮೀಣ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Car Accident | ಅಭಿನವ ಕಾಡಸಿದ್ದೇಶ್ವರ ಮರಡಿಮಠದ ಸ್ವಾಮೀಜಿ ಕಾರು ನಜ್ಜುಗುಜ್ಜು

Exit mobile version