Site icon Vistara News

Road accident | ಚಾಲಕನ‌‌ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್: 30 ಪ್ರಯಾಣಿಕರಿಗೆ ಗಾಯ

Mandya bus accident

ಮಂಡ್ಯ: ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್‌ ಒಂದು ಚಾಲಕನ‌‌ ನಿಯಂತ್ರಣ ತಪ್ಪಿ ಗದ್ದೆಗೆ (Road accident) ಉರುಳಿದೆ. ಬಸ್ಸಿನಲ್ಲಿ ಸುಮಾರು ೩೦ ಮಂದಿ ಪ್ರಯಾಣಿಕರಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೆಎ 09 ಎಫ್ 5282 ಸಂಖ್ಯೆಯ ಬಸ್‌ ಕೆ.ಆರ್‌. ಪೇಟೆಯಿಂದ ಮೈಸೂರಿಗೆ ಹೋಗುವ ಮಾರ್ಗ ಮಧ್ಯೆ ನಡೆದ ಅಪಘಾತ ನಡೆದಿದೆ. ಒಮ್ಮಿಂದೊಮ್ಮೆಗೇ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ನೇರವಾಗಿ ಗದ್ದೆಗೆ ಇಳಿದು ಪಲ್ಟಿಯಾಗಿದೆ. ಗಾಯಾಳುಗಳನ್ನು ಕೂಡಲೇ ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ | Fire Accident | ಚಲಿಸುತ್ತಿದ್ದ ಬಸ್‌ನಲ್ಲಿ ಆಕಸ್ಮಿಕ ಬೆಂಕಿ; ಸಮಯಪ್ರಜ್ಞೆ ಮೆರೆದ ಚಾಲಕ

Exit mobile version