Site icon Vistara News

Bengaluru Bandh: ಬಂದ್‌ ವೇಳೆ ಕ್ಯಾಬ್‌, ಬೈಕ್‌ ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆ; ಒಟ್ಟು 13 ಕೇಸ್‌ ದಾಖಲು, 12 ಮಂದಿ ಬಂಧನ

Attack on car

ಬೆಂಗಳೂರು: ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಬೆಂಗಳೂರು ಬಂದ್‌ ಅನ್ನು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ವಾಪಸ್‌ ಪಡೆಯಿತು. ಆದರೆ, ಬಂದ್‌ (Bengaluru Bandh) ವೇಳೆ ಸೇವೆ ಸಲ್ಲಿಸುತ್ತಿದ್ದ ಕ್ಯಾಬ್‌, ಆಟೋ ಹಾಗೂ ಬೈಕ್‌ ಟ್ಯಾಕ್ಸಿ ಚಾಲಕರ ಮೇಲೆ ಕೆಲವೆಡೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದರು. ಈ ಸಂಬಂಧ ನಗರದ ವಿವಿಧೆಡೆ ಒಟ್ಟು 13 ಪ್ರಕರಣ ದಾಖಲಾಗಿದ್ದು, 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ವಿಭಾಗದಲ್ಲಿ 1 ಕೇಸ್, ಆಗ್ನೇಯ ವಿಭಾಗದಲ್ಲಿ 1, ಉತ್ತರ ವಿಭಾಗದಲ್ಲಿ 2 , ಈಶಾನ್ಯ ವಿಭಾಗದಲ್ಲಿ 2 , ಪಶ್ಚಿಮ ವಿಭಾಗದಲ್ಲಿ 7 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಪಟ್ಟಂತೆ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ರ‍್ಯಾಪಿಡೋ ಬೈಕ್‌ ಚಾಲಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬೈಕ್ ಚಾಲಕ ವಿಜಯ್ ಕುಮಾರ್‌ ಮುಖಕ್ಕೆ ಮೊಟ್ಟೆ ಹೊಡೆದು ಹಲ್ಲೆ ನಡೆಸಿದ್ದ ಪುನೀತ್, ಮಣಿ, ಶರಣ್ ಎಂಬುವವರನ್ನು ಅರೆಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ | Bengaluru Bandh : ಅರ್ಧ ದಿನಕ್ಕೇ ಬೆಂಗಳೂರು ಬಂದ್‌ ವಾಪಸ್‌; ಆ ಒಂದು ಬೇಡಿಕೆ ಬಿಟ್ಟು 16ಕ್ಕೆ ಸಚಿವರ ಒಪ್ಪಿಗೆ

ಎಲ್ಲೆಲ್ಲಿ ಅಹಿತಕರ ಘಟನೆ ನಡೆದಿವೆ?

ಮೊಟ್ಟೆ ಒಡೆದು ದೌರ್ಜನ್ಯ

ರ‍್ಯಾಪಿಡೋ ಬೈಕ್ ಕರೆಸಿಕೊಂಡು ಹಲ್ಲೆ

ಸಂಚಾರ ದಟ್ಟಣೆ

ಪ್ರತಿಭಟನೆ ಹಿನ್ನೆೆಲೆಯಲ್ಲಿ ನಗರದಲ್ಲಿ ಕೆಲವೆಡೆ ಸಂಚಾರ ದಟ್ಟಣೆ

ಮೆಜೆಸ್ಟಿಕ್, ಮೇಖ್ರಿ ವೃತ್ತ, ಹೆಬ್ಬಾಳ, ಇಂದಿರಾನಗರ, ಸಂಗೋಳ್ಳಿ ರಾಯಣ್ಣ ಮೇಲು ಸೇತುವೆ ಸೇರಿ ಕೆಲ ಪ್ರಮುಖ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ರಸ್ತೆಗಳಿದು ಹೋರಾಟ ನಡೆಸಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು.

12 ಮಂದಿ ಬಂಧನ

ಬಂದ್‌ ಹೆಸರಲ್ಲಿ ಗೂಂಡಾಗಿರಿ ಮಾಡಿದವರಿಗೆ ಕಾದಿದೆ ಪೊಲೀಸ್‌ ಟ್ರೀಟ್ಮೆಂಟ್‌; ದೂರು ಕೊಡಿ ಎಂದ ಇಲಾಖೆ

Attack on rapido riders

ಬೆಂಗಳೂರು: ಸೋಮವಾರ ಬೆಳಗ್ಗೆ ಆರಂಭಗೊಂಡು ಮಧ್ಯಾಹ್ನ ಅಂತ್ಯಗೊಂಡ ಖಾಸಗಿ ವಾಹನಗಳ ಬೆಂಗಳೂರು ಬಂದ್‌ (Bengaluru bandh) ವೇಳೆ ಗೂಂಡಾಗಿರಿ (Act of Goondaism) ನಡೆಸಿದವರಿಗೆ ಕಾದಿದೆ ಪೊಲೀಸ್‌ ಟ್ರೀಟ್‌ಮೆಂಟ್‌. ವಾಹನಗಳನ್ನು ಅಡ್ಡಗಟ್ಟಿ ಹಲ್ಲೆ ಮಾಡಿದವರು, ಅವಾಚ್ಯವಾಗಿ ನಿಂದಿಸಿದವರು, ಕಲ್ಲು ತೂರಾಟ ನಡೆಸಿದವರು, ಬೈಕ್‌ ರ‍್ಯಾಪಿಡೋ ಸವಾರರ ಮೇಲೆ (Attack on Rapido riders) ದರ್ಪ ತೋರಿದವವರೆಲ್ಲರಿಗೂ ಸಂಕಷ್ಟ ಕಾದಿದೆ. ಯಾಕೆಂದರೆ, ಯಾರೆಲ್ಲ ಗೂಂಡಾ ವರ್ತನೆಯಿಂದ ತೊಂದರೆಗೆ ಒಳಗಾಗಿದ್ದಾರೋ ಅವರೆಲ್ಲರೂ ದೂರು ನೀಡಬಹುದು ಎಂದು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಸರ್ಕಾರದ ಶಕ್ತಿ ಯೋಜನೆಯಿಂದ ತಮಗೆ ತೊಂದರೆಯಾಗಿದೆ, ಹೀಗಾಗಿ ತಮಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಸುಮಾರು 32 ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಮುಂಜಾನೆಯಿಂದಲೇ ಬಂದ್‌ ಆರಂಭಗೊಂಡಿತ್ತು. ಈ ವೇಳೆ ಕೆಲವು ಚಾಲಕರು ತುರ್ತು ಕಾರಣಗಳಿಗಾಗಿ ಹೊರಗೆ ಬಂದಿದ್ದರು. ಕೆಲವರು ತಾವು ಬಂದ್‌ ಬೆಂಬಲಿಸದೆ ಕೆಲಸ ಮಾಡಿದ್ದರು. ಈ ನಡುವೆ, ಬಂದ್‌ ಪರವಾದ ಕೆಲವರು ಗೂಂಡಾ ವರ್ತನೆ ತೋರಿದ್ದರು. ಹಲ್ಲೆ, ದಾಂಧಲೆ, ಅಪಮಾನ ಸೇರಿದಂತೆ 10ಕ್ಕೂ ಹೆಚ್ಚು ಘಟನೆಗಳು ದಾಖಲಾಗಿದ್ದವು. ಕೆಲವು ಕಡೆ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ದಾಂಧಲೆ ನಡೆಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಗೂಂಡಾಯಿಸಂ ಪ್ರವೃತ್ತಿಯನ್ನು ಬೆಳೆಯಲು ಬಿಡಬೇಡಿ ಎಂದು ಹೊರವರ್ತುಲ ರಸ್ತೆಯ ಸಾಫ್ಟ್‌ವೇರ್‌ ಕಂಪನಿಗಳ ಒಕ್ಕೂಟ ಸರ್ಕಾರಕ್ಕೆ ವಿನಂತಿ ಮಾಡಿತ್ತು.

ಇದನ್ನೂ ಓದಿ | Bengaluru Bandh : ಬೆಂಗಳೂರು ಬಂದ್‌ ವಾಪಸ್‌; ಖಾಸಗಿ ಸಾರಿಗೆ ಒಕ್ಕೂಟ ಘೋಷಣೆ, ಫಲಿಸಿದ ರಾಮಲಿಂಗಾ ರೆಡ್ಡಿ ಸಂಧಾನ

ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಬಂದ್‌ ವೇಳೆ ಗೂಂಡಾಯಿಸಂ ತೋರಿದವರ ಮೇಲೆ ಕೇಸ್‌ ಹಾಕುವಂತೆ ಸೂಚಿಸಿದೆ. ಇದರ ಪ್ರಕಾರ ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Bengaluru Bandh : ಫೀಲ್ಡಿಗಿಳಿದ ರ‍್ಯಾಪಿಡೋ ಚಾಲಕರು; ಪ್ರತಿಭಟನಾಕಾರರಿಂದ ಹೊಡಿಬಡಿ

ತನ್ನ ಕಾರಿಗೆ ತಾನೇ ಮೊಟ್ಟೆ ಹೊಡೆದುಕೊಂಡ!

ಈ ನಡುವೆ ಕೆಲವು ವಾಹನ ಚಾಲಕರು ಕಂಪನಿಯವರು ಬರಲು ಹೇಳಿದ್ದರಿಂದ ತಪ್ಪಿಸಿಕೊಳ್ಳಲು ತಮ್ಮ ಕಾರಿಗೆ ತಾವೇ ಮೊಟ್ಟೆ ಹೊಡೆದುಕೊಂಡು, ಕಲ್ಲು ಹೊಡೆದುಕೊಂಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ದಕ್ಷಿಣ ವಿಭಾಗದ ಕುಮಾರಸ್ವಾಮಿ ಲೇಔಟ್ ನಲ್ಲಿ ಸುರೇಶ್‌ ಎಂಬ ಕ್ಯಾಬ್‌ ಚಾಲಕ ತನ್ನ ಇನೋವಾ ಕಾರಿಗೆ ತಾನೇ ಮೊಟ್ಟೆ ಹೊಡೆದಂತೆ ಡ್ರಾಮಾ ಮಾಡಿದ್ದ. ಕೆಲಸ ಮಾಡ್ತಿದ್ದ ಕಂಪನಿಯವರು ಕ್ಯಾಬ್ ಕಳಿಸಲು ಹೇಳಿದ್ದರು. ಆದರೆ, ಗೆಳೆಯರು ಬಂದ್‌ಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು. ಆಗ ಸುರೇಶ್‌ ತನ್ನ ಕಾರಿಗೆ ಯಾರೋ ಮೊಟ್ಟೆ ಹೊಡೆದಂತೆ ನಾಟಕ ಮಾಡಿದ್ದ. ಈಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

Exit mobile version