ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ ನಡೆದಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದ ಬಳಿ ಅಪಘಾತ ನಡೆದಿದೆ. ಬೆಂಗಳೂರು ಕಡೆಗೆ ಹೋಗುತ್ತಿದ್ದ ವೆರ್ನಾ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ, ಮೈಸೂರು ಕಡೆಗೆ ಹೋಗುತ್ತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ | Udupi Murder: ಗಗನಸಖಿ ಅಯ್ನಾಜ್ ಕುಟುಂಬದ ಸಾಮೂಹಿಕ ಹತ್ಯೆಯ ನೈಜ ಕಾರಣ ಬಯಲು; ಇದು Chargesheet
ಛೇ.. 2 ವರ್ಷದ ಮಗಳನ್ನು ನೇಣಿಗೆ ಹಾಕಿ ತಾನೂ ಕೊರಳೊಡ್ಡಿದ ತಾಯಿ!
ಕಲಬುರಗಿ: ಬದುಕಿನ ಬವಣೆಗಳು ಏನಿರುತ್ತವೋ? ಸಹಿಸಲಾಗದ ಸಂಕಷ್ಟಗಳು ಹೇಗಿರುತ್ತವೋ? ಜೀವನವೇ ಬೇಡ ಎನ್ನುವಷ್ಟು ಜಿಗುಪ್ಸೆ ಮೂಡಿಸುವ ಭಯಾನಕ ಘಟನೆಗಳು ಹಲವರ ಬಾಳಿನಲ್ಲಿ ನಡೆಯುತ್ತಲೇ ಇರುತ್ತದೆ. ಅಂಥ ಹೊತ್ತಿನಲ್ಲೇ ಇಂಥ ಘಟನೆಗಳು (Self Harming) ನಡೆಯುವುದು. ಹೌದು, ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗಳನ್ನು ಕೊಂದು ತಾನೂ ಸಾವಿಗೆ ಶರಣಾಗಿದ್ದಾಳೆ (Woman ends life with Child). ಕಲಬುರಗಿ ಜಿಲ್ಲೆಯ (Kalaburagi news) ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಈ ಕರುಳು ಹಿಂಡುವ ಘಟನೆ ನಡೆದಿದೆ.
ತಾಯಿಯೊಬ್ಬಳು ತನ್ನ ಎರಡು ವರ್ಚದ ಪುಟ್ಟ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಶಿವಲೀಲಾ ಆನಂದ(24) ಎಂಬಾಕೆಯೇ ತನ್ನ ಪುಟ್ಟ ಮಗಳು, ಎರಡು ವರ್ಷದ ವರ್ಷಿತಾಳನ್ನು ಕೊಂದು ತಾನೂ ಜೀವನ ಮುಗಿಸಿಕೊಂಡವಳು.
ಮೊದಲು ಎರಡು ವರ್ಷದ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ ತಾಯಿ ಶಿವಲೀಲಾ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕೆ ಸಾವಿಗೆ ಶರಣಾಗಿದ್ದಾಳೆ.
ಇದನ್ನೂ ಓದಿ : Self Harming : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು 1 ವರ್ಷದ ಪುಟ್ಟ ಮಗುವಿನ ತಾಯಿ ಆತ್ಮಹತ್ಯೆ
ಗಂಡ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು ಶಿವಲೀಲಾ ಮಗುವನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಡ ಆನಂದ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.