ಚಿಕ್ಕಬಳ್ಳಾಪುರ: ಆತ ತನ್ನ ಪಾಡಿಗೆ ತಾನು ಮೊಬೈಲ್‌ನಲ್ಲಿ ಮಾತಾಡಿಕೊಂಡು ರಸ್ತೆ ಪಕ್ಕದಲ್ಲಿ ನಿಂತಿದ್ದ. ಕ್ಷಣಾರ್ಧದಲ್ಲಿ ಅತಿ ವೇಗದಿಂದ ಬಂದು ಎರಗಿದ ಕಾರು ಆತನ ಪ್ರಾಣವನ್ನೇ ತೆಗೆದಿದೆ.
ಚಿಕ್ಕಬಳ್ಳಾಪುರದ ಜಿಲ್ಲಾಢಳಿತ ಭವನದ ಆಸುಪಾಸಿನಲ್ಲಿರುವ ಪಟ್ರೇನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 234ರ ಬಳಿ ಈ ಘಟನೆ ನಡೆದಿದೆ. ಇಲ್ಲಿನ ರಾಮೂಸ್ ಫರ್ನಿಚರ್ ನಲ್ಲಿ ಕೆಲಸ ಮಾಡ್ತಿದ್ದ ಸುರೇಶ ಎಂಬ ಯುವಕನೇ ಮೃತ ವ್ಯಕ್ತಿ.
ಸುರೇಶ್ ಕೆಲಸದ ನಿಮಿತ್ತ ಪಟ್ರೇನಹಳ್ಳಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಕಛೇರಿಯಿಂದ ಕಾಲ್ ಬಂದಿತ್ತು. ಆಗ ರಸ್ತೆಯ ಪಕ್ಕದಲ್ಲಿ ನಿಂತು ತನ್ನ ಪಾಡಿಗೆ ತಾನು ಮೊಬೈಲ್ ನಲ್ಲಿ ಮಾತಾಡುತ್ತಿದ್ದ.
ಆಗ ಚಿಕ್ಕಬಳ್ಳಾಪುರ ಕಡೆಯಿಂದ ಓವರ್ ಸ್ಪೀಡ್‌ನಲ್ಲಿ ಬಂದ ಕಾರು ಸುರೇಶನಿಗೆ ಡಿಕ್ಕಿ ಹೊಡೆದ ಪರಿಣಾಮ ಸುರೇಶ್ ಸ್ಥಳದಲ್ಲೇ ದಾರಣ ಸಾವನ್ನಪ್ಪಿದ್ದಾರೆ. ಕಾರಿನ ರಭಸ ಎಷ್ಟಿತ್ತೆಂದರೆ ನರ್ಸರಿ ಪಕ್ಕದಲ್ಲಿ ಇದ್ದ ಮರಕ್ಕೆ ಡಿಕ್ಕಿ ಹೊಡೆದ ಕಾರಣದಿಂದ ಅದು ಮುರಿದು ಬಿದ್ದಿದೆ.
ಚಾಲಕ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಬ್ಬ ಯುವತಿ ಸೇರಿದಂತೆ ಮೂರು ಜನ ಪ್ರಯಾಣಿಸುತಿದ್ದು ಒಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದನ್ ಎಂಬವನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Accident | ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ: ಕಾರು, ಬೈಕ್, ಎರಡು ಬಸ್ ಜಖಂ, 15 ಮಂದಿಗೆ ಗಾಯ