Site icon Vistara News

Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್‌ವೈ

BS Yediyurappa infront of KRS Dam

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ (Cauvery water dispute) ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು (Water to Tamil Nadu) ಬಿಟ್ಟರೆ, ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಂತೆಯೇ ಸರಿ ಎಂದು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (Former Chief Minister BS Yediyurappa) ಗುಡುಗಿದ್ದಾರೆ.

ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಮಂಗಳವಾರ (ಸೆ.26) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ತಮಿಳುನಾಡಿಗೆ ಅ.15ರ ತನಕ 3 ಸಾವಿರ ಕ್ಯೂಸೆಕ್‌ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಶಿಫಾರಸು ಮಾಡಿರುವ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ (Social Media X) ಪೋಸ್ಟ್‌ ಮಾಡಿರುವ ಬಿ.ಎಸ್.‌ ಯಡಿಯೂರಪ್ಪ, ಇದರ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಕಾವೇರಿ ನೀರಿನ ಕುರಿತಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬರದ ಮಧ್ಯೆ ತಮಿಳುನಾಡಿಗೆ ಈಗಾಗಲೇ ಹೆಚ್ಚಿನ ನೀರು ಬಿಟ್ಟು, ರಾಜ್ಯ ಸರ್ಕಾರ ನಾಡಿನ ಜನತೆಯ, ಅದರಲ್ಲೂ ವಿಶೇಷವಾಗಿ ರೈತರ ವಿಶ್ವಾಸ ಕಳೆದುಕೊಂಡಿದೆ ಎಂದು ಬಿ.ಎಸ್.‌ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಇದನ್ನೂ ಓದಿ: Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ‌ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್

ರಾಜ್ಯ ಸರ್ಕಾರ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು ಸರಿಯಲ್ಲ ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳುವ ಜತೆ ಜತೆಗೆ ಮಿಳುನಾಡಿಗೆ ಮತ್ತೆ ನೀರು ಬಿಟ್ಟರೆ, ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಂತೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇತ್ತ ರಾಜ್ಯ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು ಬಿಟ್ಟಿದೆ.

ಕೇಳಿದ್ದಕ್ಕಿಂತಲೂ ಹೆಚ್ಚು ನೀರು ಕೊಡುತ್ತಿದೆ ಕರ್ನಾಟಕ!

ರಾಜ್ಯದಲ್ಲಿ ತಮಿಳುನಾಡಿಗೆ ನೀರೇ ಬಿಡಬಾರದು ಎಂದು ಆಗ್ರಹಿಸಿ ಹೋರಾಟಗಳು (Cauvery Dispute) ನಡೆಯುತ್ತಿವೆ. ಮಂಗಳವಾರ ನಡೆದ ಬೆಂಗಳೂರು ಬಂದ್‌ (Bangalore Bandh) ಕೂಡಾ ಯಶಸ್ವಿಯಾಗಿದೆ. ಇದರ ನಡುವೆ, ಸೆಪ್ಟೆಂಬರ್‌ 29ರಂದು ಮತ್ತೊಂದು ಸುತ್ತಿನ ಕರ್ನಾಟಕ ಬಂದ್‌ (Sep 29 Karnataka Bandh) ನಡೆಯುತ್ತಿದೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದಂತೆ ಕರ್ನಾಟಕದಿಂದ ತಮಿಳುನಾಡಿಗೆ ಧಾರಾಳವಾಗಿ (Water flowing to Tamilandu) ನೀರು ಹರಿಯುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರಿಬ್ಬರೂ ನೀರಿಲ್ಲ, ನೀರಿಲ್ಲ ಎನ್ನುತ್ತಿದ್ದಾರೆ. ಎಲ್ಲಿಂದ ಬಿಡಲಿ ನೀರು ಎನ್ನುತ್ತಿದ್ದಾರೆ. ಆದರೆ, ಇದರ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ ಹೇಳಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ತಮಿಳುನಾಡಿಗೆ ಹರಿಯುತ್ತಿದೆ.

ನಿಜವೆಂದರೆ ಸುಪ್ರೀಂಕೋರ್ಟ್‌ ಅಂತಿಮವಾಗಿ ಹರಿಸಲು ಹೇಳಿದ್ದು ಪ್ರತಿ ದಿನ 5000 ಕ್ಯೂಸೆಕ್‌. ನೀರು ಆದರೆ, ಕರ್ನಾಟಕದಿಂದ ಈಗ ತಮಿಳುನಾಡಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ ಒಟ್ಟು 6300 ಕ್ಯೂಸೆಕ್!‌

ಕಪಿಲಾ ಮತ್ತು ಕಾವೇರಿ ನದಿಯಿಂದ ಸಾವಿರಾರು ಕ್ಯೂಸೆಕ್‌ ನೀರು ಬಿಡುಗಡೆ‌ ಮಾಡಲಾಗುತ್ತಿರುವುದು ಸರ್ಕಾರದ ಅಂಕಿ ಅಂಶಗಳಿಂದಲೇ ಬಯಲಾಗಿದೆ. ಅಂದರೆ ಎರಡು ಜಲಾಶಯಗಳಿಂದ ಒಟ್ಟು ತಮಿಳುನಾಡಿಗೆ 6300 ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಹೋಗುತ್ತಿದೆ.

ಕೆ‌ಆರ್‌ಎಸ್ ಅಣೆಕಟ್ಟೆಯಿಂದ ಪ್ರತಿದಿನ 3873 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಅದೇ ವೇಳೆ ಕಬಿನಿಯಿಂದ 2500 ಕ್ಯೂಸೆಕ್ ನೀರು ಹರಿಯುತ್ತಿದೆ. ಅಂದರೆ ಒಟ್ಟು 6300 ಕ್ಯೂಸೆಕ್‌ ನೀರು ಹರಿದಂತಾಗಿದೆ.

ಬಿಳಿಗೊಂಡ್ಲು ಜಲಾಶಯದ ಲೆಕ್ಕ

ಕಾವೇರಿ ಮತ್ತು ಕಬಿನಿ ಜಲಾಶಯದಿಂದ ಬಿಟ್ಟ ನೀರು ಎರಡೂ ಹೋಗಿ ಸೇರುವುದು ಬಿಳಿಗೊಂಡ್ಲು ಜಲಾಶಯಕ್ಕೆ. ಕಾವೇರಿ ನೀರು ನಿಯಂತ್ರಣ ಸಮಿತಿ ಬಿಳಿಗೊಂಡ್ಲು ಜಲಾಶಯಕ್ಕೆ ಎಷ್ಟು ನೀರು ಬಂದು ಸೇರಬೇಕು ಎನ್ನುವ ಲೆಕ್ಕಾಚಾರದಲ್ಲಿ ಆದೇಶವನ್ನು ನೀಡಿದೆ. ಹೀಗಾಗಿ ಈಗ ಬಿಡುಗಡೆ ಮಾಡುತ್ತಿರುವ ನೀರು ಆದೇಶಕ್ಕಿಂತಲೂ ಹೆಚ್ಚಾಗಿದೆ.

ರಾಜ್ಯ ಸರ್ಕಾರದ ಈ ಉದಾರತೆಯಿಂದಾಗಿ ರಾಜ್ಯದ ಜಲಾಶಯಗಳು ಬರಿದಾಗುತ್ತಿದೆ. ಕೆಆರ್‌.ಎಸ್‌ನಲ್ಲಿ ನೀರು ಕಡಿಮೆಯಾಗಿದೆ ಎಂದು ಗೊತ್ತಾಗದಂತೆ ಹಾರಂಗಿ ಜಲಾಶಯದಿಂದಲೂ ನೀರು ಹರಿಸುತ್ತಿದೆ.

ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯಗಳ ನೀರಿನ ಮಟ್ಟ ಮತ್ತು ಪ್ರಮಾಣ (ಮಂಗಳವಾರದ ಲೆಕ್ಕ)

ಕೆ.ಆರ್‌.ಎಸ್‌ ಅಣೆಕಟ್ಟು
ಗರಿಷ್ಠ ಸಾಮರ್ಥ್ಯ: 124.80 ಅಡಿ
ಇಂದಿನ ನೀರಿನ ಮಟ್ಟ: 96.80 ಅಡಿ
ಒಳಹರಿವು: 7134 ಕ್ಯೂಸೆಕ್
ಹೊರ ಹರಿವು: 6,201 ಕ್ಯೂಸೆಕ್.

ಇದನ್ನೂ ಓದಿ: Cauvery Dispute: CWRCಯಿಂದ ರಾಜ್ಯಕ್ಕೆ ಸ್ವಲ್ಪ ರಿಲೀಫ್‌; 5000ದಿಂದ 3000 ಕ್ಯೂಸೆಕ್‌ಗೆ ಇಳಿಸಿದ ಸಮಿತಿ

ಕಬಿನಿ ಅಣೆಕಟ್ಟು
ಗರಿಷ್ಠ ಸಾಮರ್ಥ್ಯ: 84 ಅಡಿ
ಇಂದಿನ ನೀರಿನ ಮಟ್ಟ: 73.82 ಅಡಿ
ಒಳಹರಿವು: 2,384 ಕ್ಯೂಸೆಕ್
ಹೊರಹರಿವು: 4,890.

Exit mobile version