ಚಿಕ್ಕಮಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (BJP ticket fraud) ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ (Chaitra Kundapura) ಮತ್ತು ತಂಡದವರು ಐದು ಕೋಟಿ ರೂ. ವಂಚಿಸಿದ ಪ್ರಕರಣ (Fraud case) ಸಂಬಂಧ ಈಗ ಮತ್ತೊಂದು ಆಡಿಯೊ (Audio Reveal) ಬಹಿರಂಗಗೊಂಡಿದೆ.
ಗೋವಿಂದ ಪೂಜಾರಿ ಆಪ್ತ, ಪ್ರಕರಣದ ಮತ್ತೊಬ್ಬ ಆರೋಪಿ ಪ್ರಸಾದ್ ನಡುವಿನ ಸಂಭಾಷಣೆಯ ಆಡಿಯೊ ಹೊರಬಿದ್ದಿದೆ. ಇಲ್ಲಿ ಚೈತ್ರಾ ಮಾತನಾಡುವಾಗ ಟಿಕೆಟ್ ನೀಡುವ ಸಂಬಂಧ ಸರ್ವೇ ಮಾಡುವ ಬಗ್ಗೆ ಸುಳ್ಳು ಹೇಳಿರುವುದು ಗೊತ್ತಾಗಿದೆ. ಬಿಜೆಪಿ ಟಿಕೆಟ್ ವಿಚಾರದ ಬಗ್ಗೆ ಫೇಕ್ ಸರ್ವೆ (Fake survey) ಕಥೆಯನ್ನು ಕಟ್ಟಲಾಗಿರುವುದು ಈಗ ಗೊತ್ತಾಗಿದೆ.
ಇದನ್ನೂ ಓದಿ: Chaitra Kundapura : ಚೈತ್ರಾ ಡೀಲ್ಗೆ ಹಣ ಕೊಟ್ಟಿದ್ದ ಗೋವಿಂದ ಪೂಜಾರಿಗೂ ಸಂಕಷ್ಟ; ಏನು ಈ ಹಣದ ಮೂಲ!
ಏನಿದು ಸಂಭಾಷಣೆ?
ಚೈತ್ರಾ: ಹರೀ ಓಂ
ಪ್ರಸಾದ್: ನಮಸ್ತೆ ಅಕ್ಕಾ…
ಚೈತ್ರಾ: ಹಾ…ಪ್ರಸಾದ್
ಪ್ರಸಾದ್: ಮತ್ತೆ ಎಂತ ಫೋನ್ ಏನಾದರೂ ಇತ್ತಾ?
ಚೈತ್ರಾ: ಇಲ್ಲ… ನಿನ್ನೆ ಅಣ್ಣಾ ಫೋನ್ ಮಾಡಿದ್ರು, ಗಗನ್ ಹತ್ರ ಸ್ವಾಮೀಜಿ ಅಂತ ಹೇಳಿದ್ರಂತೆ, ಎಲ್ಲಿಗೆ ಏನೇನಾಗಿದೆ ಅಂತ ವಿಚಾರಿಸಿ, ಸಾಧ್ಯವಾದ್ರೆ ಫಾಲೋ ಅಪ್ ಮಾಡ್ತೀನಿ ಅಂತ. ಅಣ್ಣಯ್ಯನ ಹತ್ರ ಗಗನ್ ಮಾತನಾಡಿದ್ದಾರಂತೆ, ಅಷ್ಟೆ… ಮತ್ತೇನಿಲ್ಲ. ಸ್ವಾಮೀಜಿಗೆ ಫೋನ್ ಮಾಡಿದ್ದೆ ಅವರು ಸಿಗಲಿಲ್ಲ, ಯಾರೋ ಬಂದಿದ್ದಾರೆ, ಸಂಜೆ ಫೋನ್ ಮಾಡ್ತೀನಿ ಅಂದ್ರು, ಮತ್ತೆ ಸಿಗಲಿಲ್ಲ, ಗಗನ್ ಹೇಳ್ದ ನಂಗೆ, ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ದೆಹಲಿಯಿಂದ ಕಾಲ್ ಬಂದಿದೆ ಅವರಿಗೆ. ಕನ್ಫರ್ಮೇಶನ್ ಆಗ್ತಿರೋ ಕಾರಣಕ್ಕೆ ಬರೋ ಕಾಲ್ ಅದು. ಅದಕ್ಕೆ ಫೋನ್ ಪಿಕ್ ಮಾಡಲು ಹೇಳಿದ್ದೆ. ಅಂತ ಹೇಳ್ದ.
ಪ್ರಸಾದ್: ಮೇಲೆ ಅವರು ಹೇಳಿದ ಕೆಲಸ ಮಾಡಿ ಇಟ್ಟಿದ್ದಾರೆ.
ಚೈತ್ರಾ: ಮೇಲಿನದ್ದು ಏನೂ ತಲೆಬಿಸಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಅವನು ಹೇಳಿದ. ಇಲ್ಲಿನ ಸರ್ವೆ ಸ್ಟೇಟಸ್ ನೋಡಿಕೊಂಡರೆ ಸಾಕು ಎಂದು ಹೇಳಿದ. ಈ ಮೂವ್ ಮೆಂಟ್ ತನಕ ಬಂದಿದೆ ಎಂದು ಮತ್ತೆ ಅವನು ಹೇಳಿದ. ಮೇಲಿನವರು ನೆಕ್ ಮೂವ್ಮೆಂಟ್ ವರೆಗೂ ಯಾವುದನ್ನೂ ಪೆಂಡಿಂಗ್ ಇಟ್ಟುಕೊಳ್ಳಲ್ಲ, ಮಿನಿಮಮ್ ಒಂದು ಮಂಥ್ ಮುಂಚೆಯೇ ಎಲ್ಲ ಸೆಟ್ ಆಗಿರುತ್ತೆ. ಅಲ್ಲಿನ ಡಿಸ್ಕಶನ್ ತರ ಎಲ್ಲವೂ ಸೆಟ್ ಆಗಿರುತ್ತದೆ. ಇಲ್ಲಿಯವರದ್ದು ಮಾತ್ರ ಲಾಸ್ಟ್ ಮೂವ್ಮೆಂಟ್ ವರೆಗೂ ಪೆಂಡಿಂಗ್ ಇರುತ್ತದೆ ಅಂತ ಅವರು ಹೇಳಿದ್ದರು.
ಪ್ರಸಾದ್ : ನೀವು ಬಂದ್ರಾ?
ಚೈತ್ರಾ: ಹೌದು ಮಾರಾಯಾ…. ಬಂದೆ… ಇವತ್ತು ಸ್ವಲ್ಪ ಕೆಲಸ ಇತ್ತು… ಅಕ್ಕನ ಮನೆಗೆ ಹೊರಟೆ… ಆರಾಮಲ್ವಾ… ಏನಾದ್ರು ಇದ್ದರೆ ಫೋನ್ ಮಾಡು, ನಾನು ಮಾಡ್ತೀನಿ… ಸ್ವಾಮೀಜಿಗೆ ಸಂಜೆ ಮತ್ತೆ ಫೋನ್ ಮಾಡುತ್ತೇನೆ.
ಪ್ರಸಾದ್ : ಹೆಚ್ಚಂದ್ರೆ ಒಂದು ವಾರ ಅಲ್ವಾ?
ಚೈತ್ರಾ : ಒಂದು ವಾರ ಅನ್ಸತ್ತೆ ಅಷ್ಟೆ. ಯಾವುದಕ್ಕೂ ದೇವರ ಬಳಿ ಪ್ರಾರ್ಥನೆ ಮಾಡುತ್ತಿರು… ನಿನ್ನೆ ಅಣ್ಣನು ಹೇಳಿದ್ರಂತೆ ಗಗನ್ ಹತ್ರ… ನನಗೂ ಹೇಳಿದ್ರು… ಎಲ್ಲ ಮಾಡಿದ್ದೀನಿ…ಉಳಿದದ್ದು ದೇವರಿಗೆ ಬಿಟ್ಟದ್ದು… ತಲೆಕೆಡಿಸಿಕೊಳ್ಳಲ್ಲ…
ಪ್ರಸಾದ್ : ತಲೆಕೆಡಿಸಿಕೊಳ್ಳಲೇಬೇಕಲ್ವಾ
ಚೈತ್ರಾ : ಹೌದು…. ನಮಗೆಲ್ಲಾ ಇದಲ್ವಾ ಮಾರಾಯಾ ಈಗ.
ಪ್ರಸಾದ್ : ನನ್ನಂತೂ…
ಚೈತ್ರಾ: ಹೌದು ಮಾರಾಯ…ನಾವೆಲ್ಲಾ ಸುಮಾರು ಟಾರ್ಗೆಟ್ ಆಗಿತ್ತು… ಮೊನ್ನೆ ಕಾರ್ಯಕ್ರಮದ ನಂತರ.
ಪ್ರಸಾದ್: ಅತ್ತ ಕಾಂಗ್ರೆಸ್ ವಿರೋಧ, ಇವ್ರು ವಿರೋಧ, ಬಿಜೆಪಿ ವಿರೋಧ, ಪೊಲೀಸ್ ವಿರೋಧ, ಸಂಘಟನೆಯೂ ವಿರೋಧ.
ಚೈತ್ರಾ : ಬೇಡ ಪ್ರಸಾದ್… ದೇವರು ಒಳ್ಳೆದು ಮಾಡ್ತಾನೆ… ಸರಿ… ಓಕೆ….
ಇದನ್ನೂ ಓದಿ: Chaitra Kundapura : 10 ರೂಪಾಯಿ ಹರಿದ ನೋಟೇ ಕೋಡ್ವರ್ಡ್! ಚೈತ್ರಾಗೆ ತಲುಪಿದ್ದು ಎಷ್ಟು ಕೋಟಿ?
ಈ ರೀತಿಯಾಗಿ ಪ್ರಸಾದ್ ಹಾಗೂ ಚೈತ್ರಾ ನಡುವೆ ಸಂಭಾಷಣೆ ನಡೆದಿದೆ. ವಿಧಾನಸಭೆ ಟಿಕೆಟ್ಗಾಗಿ ಸರ್ವೆ ನಡೆಯುತ್ತಿದ್ದು, ಅದರ ಆಗುಹೋಗುಗಳನ್ನು ಇಲ್ಲಿ ನೋಡಿಕೊಳ್ಳಬೇಕು ಎಂದು ಚೈತ್ರಾ ಹೇಳಿರುವುದು ಆಡಿಯೊದಲ್ಲಿ ಗೊತ್ತಾಗುತ್ತದೆ.