Site icon Vistara News

Mercy Killing : ಮುಳ್ಳಾಯ್ತೇ ಪ್ರೇಮ ವಿವಾಹ; ದಯಾಮರಣಕ್ಕೆ ಅನುಮತಿ ಕೋರಿದ ಒಂದು ತಿಂಗಳ ಮಗುವಿನ ಬಾಣಂತಿ ತಾಯಿ

Mercy killing

ಚಾಮರಾಜನಗರ: ಆಕೆಯ ಕೈಯಲ್ಲಿ ಒಂದು ತಿಂಗಳ ಪುಟ್ಟ ಕಂದಮ್ಮ (One year old child) ಇದೆ. ಆದರೆ ಆಕೆ ಮಾತ್ರ ನನಗೆ ಸಾಯಲು ಅನುಮತಿ ಕೊಡಿ (Mercy killing) ಎಂದು ಕೇಳುತ್ತಿದ್ದಾಳೆ. ಕಾರಣ ಆಕೆ ತನ್ನ ಗಂಡನ ಮನೆಯವರಿಂದ ಎದುರಿಸುತ್ತಿರುವ ಕಿರುಕುಳ (Harrassment from husbands house). ಈ ಘಟನೆ ನಡೆಯುತ್ತಿರುವುದು ಚಾಮರಾಜನಗರ ಜಿಲ್ಲೆ (Chamarajanagar News) ಕೊಳ್ಳೇಗಾಲ ತಾಲೂಕಿನ ಜಕ್ಕಳ್ಳಿ ಎಂಬ ಗ್ರಾಮದಲ್ಲಿ. ಲ್ಯಾನ್ಸಿ ಲೀನಾ ಎಂಬವರೇ ದಯಾಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ (Mercy petition to District Commissioner) ಪತ್ರ ಬರೆದವರು. ಆಕೆಯ ಜತೆಗೆ ಆಕೆಯ ಗಂಡ ಅರುಳ್‌ ಸೆಲ್ವ ಕೂಡಾ ಸಾಯಲು ಮುಂದಾಗಿದ್ದಾರೆ.

ಯಾಕೆ ಈ ಸಾವಿನ ಬೇಡಿಕೆ?

ಲ್ಯಾನ್ಸಿ ಲೀನಾ ಮತ್ತು ಅರುಳ್‌ ಸೆಲ್ವ ಅವರು ಪರಸ್ಪರ ಪ್ರೀತಿಸಿ ಮದುವೆಯಾದವರು. ಇದೇ ಅವರ ಪಾಲಿಗೆ ಮುಳ್ಳಾಗಿದೆ. ನಾಲ್ಕು ವರ್ಷದ ಹಿಂದೆ ಮದುವೆಯಾದ ಅವರಿಗೆ ಈಗಾಗಲೇ ಮೂರು ವರ್ಷದ ಒಂದು ಮಗುವಿದೆ. ಈಗ ಒಂದು ತಿಂಗಳ ಒಂದು ಪುಟ್ಟ ಕಂದಮ್ಮ ಕೈಯಲ್ಲಿದೆ.

ಮನೆಯಲ್ಲಿ ಮಕ್ಕಳ ಜತೆ ದಂಪತಿ

ಲ್ಯಾನ್ಸಿ ಲೀನಾ ಮತ್ತು ಅರುಳ್‌ ಸೆಲ್ವ ಅವರು ತುಂಬ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. ನಾಲ್ಕು ಲಕ್ಷ ರೂ. ಸಾಲ ಮಾಡಿ ಒಂದು ಮನೆಯನ್ನು ಕೂಡಾ ಕಟ್ಟಿಕೊಂಡಿದ್ದಾರೆ. ಆದರೆ ಈಗ ಆ ಮನೆಯ ವಿಷಯದಲ್ಲಿ ಅತ್ತೆ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಲ್ಯಾನ್ಸೀ ಲೀನಾ ದಂಪತಿ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯಾದ ದಿನದಿಂದಲೇ ನಮಗೆ ಕಿರುಕುಳ ಆರಂಭವಾಗಿದೆ. ಅತ್ತೆ ಮೋಕ್ಷರಾಣಿ, ಅಜ್ಜಿ ರಾಣಿಕಮ್ಮ ಹಾಗೂ ಅಂತೋಣಿ ಸ್ವಾಮಿ ಎಂಬುವವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಾವು ಬಹಳ ಕಷ್ಟಪಟ್ಟು 4 ಲಕ್ಷ ರೂಪಾಯಿ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದು, ಅದನ್ನೂ ಬಿಟ್ಟುಕೊಡುವಂತೆ ಹಿಂಸೆ ನೀಡುತ್ತಿದ್ದಾರೆ.

ದಂಪತಿ ಮತ್ತು ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರ

ನಮಗೆ ಎದುರಾಗಿರುವ ಸಮಸ್ಯೆಯನ್ನು ಪೊಲೀಸರ ಮುಂದೆ ಹೇಳಿಕೊಂಡರೆ ಅವರು ಕೂಡಾ ನಮ್ಮ ವಿರುದ್ಧವೇ ನಿಂತಿದ್ದಾರೆ. ಕೊಳ್ಳೇಗಾಲ ಪೊಲೀಸರು ಕೂಡಾ ಸೆಪ್ಟೆಂಬರ್‌ 10ರ ಒಳಗೆ ಮನೆಗೆ ಖಾಲಿ ಮಾಡುವಂತೆ ಹೇಳಿದ್ದಾರೆ. ಹೀಗಾದರೆ ನಾವು ಹೋಗುವುದು ಎಲ್ಲಿಗೆ? ಬದುಕುವುದು ಹೇಗೆ ಎನ್ನುವುದು ದಂಪತಿ ಪ್ರಶ್ನೆ.

ನಾವು ಕಷ್ಟಪಟ್ಟು ಕಟ್ಟಿಕೊಂಡ ಬದುಕು ಇದು. ಈಗ ನಮ್ಮನ್ನು ಬೀದಿಪಾಲು ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗಾದರೆ ನಾವು ಮುಂದೆ ಬದುಕುವುದೇ ಕಷ್ಟವಾಗುತ್ತದೆ. ಹೀಗಾಗಿ ನಮಗೆ ಸಾಯಲಿಕ್ಕಾದರೂ ಅನುಮತಿ ಕೊಡಿ. ಇಬ್ಬರು ಮಕ್ಕಳು, ನಾವಿಬ್ಬರು ಗಂಡ -ಹೆಂಡತಿ ಸಾವಿಗೆ ಶರಣಾಗಿ ಬದುಕನ್ನು ಅಂತ್ಯಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ವಿವಾದಕ್ಕೆ ಸಿಲುಕಿರುವ ಮನೆ ಇದು

ದಯಾ ಮರಣಕ್ಕೆ ಅನುಮತಿ ನೀಡಬೇಕೆಂದು ಚಾಮರಾಜನಗರ ಡಿಸಿಗೆ ಪತ್ರ ಬರೆದಿರುವ ಬಾಣಂತಿ ಒಂದೋ ಬದುಕಲು ಬಿಡಿ ಇಲ್ಲವೇ ಸಾಯಲು ಬಿಡಿ ಎಂದಿದ್ದಾರೆ. ಚಾಮರಾಜನಗರ ಜಿಲ್ಲಾಧಿಕಾರಿಗಳು ಈಗ ಈ ದಂಪತಿಗೆ ಹೇಗೆ ನ್ಯಾಯ ಕೊಡಿಸುತ್ತಾರೆ ಎಂದು ಕಾದು ನೊಡಬೇಕು.

ಇದನ್ನೂ ಓದಿ: Tamil actress Sindhu: ದಯಾ ಮರಣ ನೀಡುವಂತೆ ಕೋರಿ, ಚಿಕಿತ್ಸೆಗೆ ಹಣವಿಲ್ಲದೇ ಪ್ರಾಣ ಬಿಟ್ಟ ನಟಿ

Exit mobile version