ಚಿಕ್ಕಬಳ್ಳಾಪುರ: ಜಮೀನು ವಿವಾದ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ (Land Dispute) ನಡೆದಿದೆ. ಎರಡು ಗುಂಪುಗಳು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಿಮರದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಗಲಾಟೆಯಲ್ಲಿ ಅಂಗವಿಕಲ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗ್ರಾಮದ ಕೆಂಪರಾಜು ಎಂಬಾತ ಶಕುಂತಲಮ್ಮ, ನಾರಾಯಣಪ್ಪ ಎಂಬುವವರ ಮೇಲೆ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿದ್ದಾರೆ. ಗ್ರಾಮದ ಸರ್ವೇ ನಂ 87/p3 ಪೈಕಿ ಎರಡು ಎಕರೆ ಜಮೀನಿಗಾಗಿ ಗಲಾಟೆ ನಡೆದಿದೆ.
ಶಕುಂತಲಮ್ಮ ಹಾಗೂ ನಾರಾಯಣಪ್ಪ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಡೆದಾಟ ಬಡಿದಾಟದ ವಿಡಿಯೊವನ್ನು ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: Inspector Abscond: ಕಳ್ಳರಿಂದ ಸೀಜ್ ಮಾಡಿದ ₹72 ಲಕ್ಷ ಗುಳುಂ ಮಾಡಿ ಇನ್‌ಸ್ಪೆಕ್ಟರ್ ನಾಪತ್ತೆ!
ಕೆಎಸ್‌ಆರ್‌ಟಿಸಿ ಚಾಲಕರನ್ನೇ ಗುಜರಿ ಎಂದರಾ ಡಿಪೋ ಮ್ಯಾನೇಜರ್?
ಮಡಿಕೇರಿ ಡಿಪೋ ಮ್ಯಾನೇಜರ್‌ದು ಎನ್ನಲಾದ ಆಡಿಯೊವೊಂದು ವೈರಲ್ ಆಗಿದೆ. ಕೆಎಸ್‌ಆರ್‌ಟಿಸಿ ಚಾಲಕರನ್ನೇ ಗುಜರಿ ಎಂದಿರುವ ಆಡಿಯೊವೊಂದು ವೈರಲ್ ಆಗಿದೆ. ಕೊಡಗಿನ ಗ್ರಾಮೀಣ ಭಾಗಕ್ಕೆ ತೆರಳಿದ್ದ ಬಸ್‌ವೊಂದು ಮಾರ್ಗ ಮಧ್ಯೆ ದುರಸ್ತಿ ಆಗಿತ್ತು.
ಮುಂದೆ ಚಲಿಸದೇ ರಸ್ತೆಯಲ್ಲೇ ನಿಂತಿದ್ದ ಬಸ್‌ನಿಂದ ಪ್ರಯಾಣಿಕರು ಹೈರಾಣಾಗಿದ್ದರು. ಈ ವೇಳೆ ಡಿಪೋ ಮ್ಯಾನೇಜರ್‌ಗೆ ಕರೆ ಮಾಡಿದ ಪ್ರಯಾಣಿಕರು, ಗ್ರಾಮೀಣ ರಸ್ತೆಗೆ ಗುಜರಿ ಬಸ್ ಕಳಿಸಿದೀರಾ ಎಂದು ಆಕ್ರೋಶ ಹೊರಹಾಕಿದ್ದರು. ಈ ವೇಳೆ ಡಿಪೋ ಮ್ಯಾನೇಜರ್, ಬಸ್ ಅಲ್ಲ ಗುಜರಿ, ಚಾಲಕನೇ ಗುಜರಿ ಎಂದಿದ್ದಾರೆ. ಡಿಪೋ ಮ್ಯಾನೇಜರ್‌ನ ಉಡಾಫೆ ಉತ್ತರಕ್ಕೆ ಪ್ರಯಾಣಿಕರು ಕಿಡಿಕಾರಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ಆಡಿಯೋ ವೈರಲ್ ಆಗಿದ್ದು, ಚಾಲಕರನ್ನು ಕೀಳಾಗಿ ಜರಿದ ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶಗಳು ಕೇಳಿ ಬಂದಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ