Physical Abuse: ಪಾರ್ಟಿ ಮುಗಿಸಿ ಲಿಫ್ಟ್‌ ಕೇಳಿದ ಯುವತಿಯ ಮೇಲೆರಗಿದ ಕಾಮುಕನ ಬಂಧನ; ಸಂತ್ರಸ್ತೆಯ ಜೀವ ಉಳಿಸಿದ SOS ಬಟನ್! - Vistara News

ಕ್ರೈಂ

Physical Abuse: ಪಾರ್ಟಿ ಮುಗಿಸಿ ಲಿಫ್ಟ್‌ ಕೇಳಿದ ಯುವತಿಯ ಮೇಲೆರಗಿದ ಕಾಮುಕನ ಬಂಧನ; ಸಂತ್ರಸ್ತೆಯ ಜೀವ ಉಳಿಸಿದ SOS ಬಟನ್!

Physical Abuse: ಅನ್ಯರಾಜ್ಯದ ಯುವತಿ ಬೆಂಗಳೂರಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದು ಗೆಟ್‌ ಟುಗೆದರ್‌ ಪಾರ್ಟಿಗಾಗಿ ಸ್ನೇಹಿತರ ಜೊತೆ ಹೋಗಿದ್ದಳು. ವಾಪಸ್ ಆಗುತ್ತಿದ್ದ ಯುವತಿಯನ್ನು ಈ ಯುವಕ ಬೈಕ್‌ನಲ್ಲಿ ಡ್ರಾಪ್‌ ನೆಪದಲ್ಲಿ ಕರೆದೊಯ್ದಿದ್ದಾನೆ.

VISTARANEWS.COM


on

physical abuse hsr layout
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪಾರ್ಟಿ ಮುಗಿಸಿದ ಬಳಿಕ ಮನೆಗೆ ಹೋಗಲು ಅಪರಿಚಿತನ ಬಳಿ ಲಿಫ್ಟ್‌ ಕೇಳಿದ ಯುವತಿಯನ್ನು ಎಚ್‌ಎಸ್‌ಆರ್‌ ಲೇಔಟ್‌ನ (HSR Layout) ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ (Physical Abuse) ಎಸಗಿದ ಪಾತಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಫೂಟೇಜ್‌ (CCTV footage) ಆಧರಿಸಿ ಕಾಮುಕನನ್ನು (Culprit) ಪತ್ತೆಹಚ್ಚಲಾಗಿದೆ.

ಅನ್ಯರಾಜ್ಯದ ಯುವತಿ ಬೆಂಗಳೂರಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದು ಗೆಟ್‌ ಟುಗೆದರ್‌ ಪಾರ್ಟಿಗಾಗಿ ಸ್ನೇಹಿತರ ಜೊತೆ ಹೋಗಿದ್ದಳು. ವಾಪಸ್ ಆಗುತ್ತಿದ್ದ ಯುವತಿಯನ್ನು ಈ ಯುವಕ ಬೈಕ್‌ನಲ್ಲಿ ಡ್ರಾಪ್‌ ನೆಪದಲ್ಲಿ ಕರೆದೊಯ್ದಿದ್ದಾನೆ. ಬೊಮ್ಮನಹಳ್ಳಿ ಸಮೀಪದ ಶೆಡ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಪ್ರಕರಣದ ಸ್ಥಳದ ಸಿಸಿಟಿವಿ ಫೂಟೇಜ್‌ ಆಧರಿಸಿ ಆರೋಪಿಯನ್ನು ಹೆಚ್​ಎಸ್​ಆರ್​ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್​ 17ರ ರಾತ್ರಿ 1 ಗಂಟೆ ಸುಮಾರಿಗೆ ಕೋರಮಂಗಲದಲ್ಲಿ ಪಾರ್ಟಿ ಮುಗಿಸಿಕೊಂಡು ವಾಪಸ್‌ ಬರುವಾಗ ಸ್ನೇಹಿತರಿಂದ ಬೇರ್ಪಟ್ಟಿದ್ದಾಳೆ. ಹೆಬ್ಬಗೋಡಿಯಲ್ಲಿರೋ ಮನೆ ಸೇರಬೇಕಿದ್ದ ಯುವತಿ, ಅಪರಿಚಿತನ ಬೈಕ್‌ ಹತ್ತಿದ್ದಾಳೆ. ಆ ಬೈಕ್‌ನಲ್ಲಿ ಡ್ರಾಪ್‌ ಪಡೆದವಳು ಮಾರ್ಗಮಧ್ಯೆ ಕೆಳಗಿಳಿದ್ದಾಳೆ. ಸ್ವಲ್ಪದೂರ ನಡೆದುಕೊಂಡು ಹೋದವಳು, ಮತ್ತೊಂದು ಬೈಕ್‌ ಹತ್ತಿದ್ದಾಳೆ. ಯುವತಿ ಮದ್ಯದ ನಶೆಯಲ್ಲಿರುವುದನ್ನು ಬಂಡವಾಳ ಮಾಡಿಕೊಂಡ ಈತ, ಬೊಮ್ಮನಹಳ್ಳಿ ಸಮೀಪದ ನಿರ್ಜನವಾದ ಲಾರಿ ನಿಲ್ಲಿಸುವ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಆರೋಪಿಯ ಆಡುಗೋಡಿಯ ನಿವಾಸದಿಂದ ಆತನನ್ನು ಬಂಧಿಸಲಾಗಿದೆ. ಸದ್ಯ ತನಿಖೆ ಮುಂದುವರೆದಿದ್ದು ಆರೋಪಿಯ ಹೆಚ್ಚಿನ ವಿವರ ಗೊತ್ತಾಗಬೇಕಿದೆ. ಕೊರಿಯೋಗ್ರಾಫರ್ ಆಗಿರುವ ಅತ್ಯಾಚಾರ ಆರೋಪಿ ಇದೇ ಸಮಯದಲ್ಲಿ ಕೋರಮಂಗಲ ಪಬ್​ಗೆ ಪಾರ್ಟಿಗೆ ಬಂದಿದ್ದ. ಮನೆಗೆ ತೆರಳುವಾಗ ಯುವತಿ‌ ಡ್ರಾಪ್ ಕೇಳಿದ್ದಾಳೆ. ಯುವತಿ ಕೂಡ ಕೋರಮಂಗಲದ ಪಬ್​ನಲ್ಲಿ ಪಾರ್ಟಿ ಮುಗಿಸಿ ಹೊರಟಿದ್ದಳು.

ಆರೋಪಿ ಅತ್ಯಾಚಾರದ ವೇಳೆ ಯುವತಿಯ ಬಟ್ಟೆ ಹರಿದು ಕ್ರೌರ್ಯ ಮೆರೆದಿದ್ದಾನೆ. ಈ ವೇಳೆ ಯುವತಿ ಕೂಡ ಈತನ ಕೃತ್ಯಕ್ಕೆ ಪ್ರತಿರೋಧ ಒಡ್ಡಿದ್ದು ಆತನ ಬಟ್ಟೆ ಹರಿದು, ಮುಖಕ್ಕೆ ಪರಚಿದ್ದಾಳೆ. ಇದೇ ವೇಳೆಗೆ ಯುವತಿಯ ಸ್ನೇಹಿತರು ಕೂಡ ಸ್ಥಳಕ್ಕೆ ಬಂದಿದ್ದು ಇದರಿಂದ ಹೆದರಿ ಆರೋಪಿ ಪರಾರಿಯಾಗಿದ್ದ. BNS ಕಾಯ್ದೆ 64 ಅಡಿಯಲ್ಲಿ HSR ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಕಾಮುಕ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಂತೆ ಯುವತಿ ಮೊಬೈಲ್​ನಲ್ಲಿ ಎಮರ್ಜೆನ್ಸಿ SOS ಬಟನ್ ಒತ್ತಿದ್ದಾಳೆ. ತಕ್ಷಣ ಮಾಹಿತಿ ಸ್ನೇಹಿತರಿಗೆ ಹೋಗಿದೆ. ಸ್ಥಳಕ್ಕೆ ದೌಡಾಯಿಸಿದ ಸ್ನೇಹಿತರು ಯುವತಿಯ ಜೀವ ಉಳಿಸಿದ್ದಾರೆ. ಸ್ಥಳದಲ್ಲೆ ಅರೆ ನಗ್ನ ಸ್ಥಿತಿಯಲ್ಲಿದ್ದ ಅಪರಿಚಿತ ಓಡಿ ಹೋಗಿದ್ದಾನೆ. ಆತನ ಮುಖದ ಮೇಲೆ ಪರಚಿದ ಗಾಯಗಳಾಗಿವೆ ಎಂದು ಸ್ನೇಹಿತರು ಮಾಹಿತಿ ಕೊಟ್ಟು ದೂರು ದಾಖಲಿಸಿದ್ದರು. ಅಸ್ವಸ್ಥಗೊಂಡಿದ್ದ ಯುವತಿ ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕೋಲ್ಕತಾದಲ್ಲಿ ನಡೆದ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಭೀಕರ ಕೊಲೆಯ ಬಳಿಕ, ಇಂಥ ಪ್ರಕರಣಗಳ ಬಗ್ಗೆ ಕಳವಳ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸದ್ದು ಮಾಡಿತ್ತು.

ಇದನ್ನೂ ಓದಿ: Physical Abuse: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್ಎಸ್ಆರ್ ಲೇಔಟ್‌ ಠಾಣೆಯಲ್ಲಿ ಎಫ್ಐಆರ್ ದಾಖಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉಡುಪಿ

Assault Case : ಕುಂದಾಪುರದಲ್ಲಿ ಗಾಂಜಾ ನಶೆಯಲ್ಲಿ ಝಳಪಿಸಿದ ತಲ್ವಾರ್‌; ಇಬ್ಬರು ಗಂಭೀರ

Assault Case : ಕುಂದಾಪುರದಲ್ಲಿ ಗಾಂಜಾ ನಶೆಯಲ್ಲಿ ಯುವಕರ ಗ್ಯಾಂಗ್‌ವೊಂದು ಕೈಯಲ್ಲಿ ತಲ್ವಾರ್‌ ಹಿಡಿದು ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದಾರೆ. ಅನಿರೀಕ್ಷಿತ ದಾಳಿಯಿಂದಾಗಿ ನಾಲ್ಕೈದು ಮಂದಿ ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

assault case
ಗಾಂಜಾ ನಶೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಯುವಕರ ತಂಡ.. ಆಸ್ಪತ್ರೆಗೆ ದಾಖಲಾದ ಯುವಕ
Koo

ಉಡುಪಿ: ಉಡುಪಿಯ ಕುಂದಾಪುರ ಸಮೀಪದ ವಕ್ವಾಡಿಯಲ್ಲಿ ಗಾಂಜಾ ನಶೆಯಲ್ಲಿ ಬಂದ ಹತ್ತಾರು ಯುವಕರ ಗ್ಯಾಂಗ್‌ವೊಂದು ತಲ್ವಾರ್‌ (Assault Case) ಝಳಪಿಸಿದೆ. ನಿನ್ನೆ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ನಾಲ್ಕೈದು ಜನರಿಗೆ ಗಂಭೀರವಾಗಿ ಗಾಯವಾಗಿದೆ.

ವಕ್ವಾಡಿಯಲ್ಲಿ ಗಾಂಜಾ ನಶೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ದಾಂಧಲೆ ಮಾಡಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಆಟೋ, ಬೈಕ್ ಮೇಲು ತಲ್ವಾರ್‌ ಬೀಸಿ ಹಾನಿ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಪಕ್ಕದಲ್ಲಿ ನಿಂತಿದ್ದ ಅಶೋಕ್ ಮತ್ತು ಚಂದ್ರಶೇಖರ್ ಎಂಬುವವರ ಮೇಲೆ ದಾಳಿ ಮಾಡಿದ್ದಾರೆ.

ಇದರಿಂದಾಗಿ ವಕ್ವಾಡಿಯ ಚಂದ್ರಶೇಖರ್ (27) ಮತ್ತು ಅಶೋಕ್ ದೇವಾಡಿಗ (45) ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಕ್ವಾಡಿಯ ಆದರ್ಶ(33), ಎಡ್ವರ್ಡ್(35), ಗಣೇಶ್ ಕುಂಭಾಶಿ(28), ಗೋವರ್ಧನ್(32)ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳು ಪರಾರಿ ಆಗಿದ್ದು, ಪೊಲೀಸ್‌ರು ಹುಡುಕಾಟ ನಡೆಸಿದ್ದಾರೆ.

ವಕ್ವಾಡಿ, ಗೋಪಾಡಿ ಭಾಗದಲ್ಲಿ ಗಾಂಜಾ, ಡ್ರಗ್ ನಶೆ ವಿಪರೀತವಾಗಿದ್ದು, ಅಪರಾಧ ಚಟುವಟಿಕೆ ಹೆಚ್ಚಾಗಿದೆ. ಹಲವಾರು ವರ್ಷಗಳಿಂದ ದಂಧೆ ಜತೆಗೆ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಸಾಕಷ್ಟು ಭಾರಿ ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರು ಇದುವರೆಗೂ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಜನರು ಕಿಡಿಕಾರಿದ್ದಾರೆ.

ಇದನ್ನೂ ಓದಿ: CM Siddaramaiah: ಇಂದು ಕಟಕಟೆ ಏರಲಿದೆ ಮುಡಾ ಪ್ರಕರಣ; 20 ಅಂಶಗಳೊಂದಿಗೆ ಸಿದ್ದರಾಮಯ್ಯ ಹೈಕೋರ್ಟ್‌ಗೆ; ಇಂದು ಏನೇನಾಗಲಿದೆ?

ಚಿಕ್ಕಬಳ್ಳಾಪುರದಲ್ಲಿ ರೋಡ್‌ ರೋಮಿಯೊಗಳ ವ್ಹೀಲಿಂಗ್‌

ಚಿಕ್ಕಬಳ್ಳಾಪುರದಲ್ಲಿ ರೋಡ್‌ ರೋಮಿಯೊಗಳ ವ್ಹೀಲಿಂಗ್‌ ಹುಚ್ಚಾಟ ಹೆಚ್ಚಾಗಿದೆ. ಹುಡುಗಿಯರಿಗೆ ಗಾಳ ಹಾಕಲು ಬಸ್ ಹಿಂದೆ ವ್ಹೀಲಿಂಗ್‌ ಮಾಡಿ ಫೋಸ್‌ ಕೊಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 44 ಸೇರಿದಂತೆ ಹಲವು ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿಗೆ ಇತರ ಸವಾರರು ಆತಂಕಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿಕ್ಕಬಳ್ಳಾಪುರ

Land Dispute : ಜಮೀನು ವಿವಾದಕ್ಕೆ ದೊಣ್ಣೆಗಳಿಂದ ಬಡಿದಾಡಿಕೊಂಡ ಗುಂಪುಗಳು

Land Dispute : ಚಿಕ್ಕಬಳ್ಳಾಪುರದಲ್ಲಿ ಜಮೀನು ವಿವಾದ ಹಿನ್ನೆಲೆ ಎರಡು ಗುಂಪುಗಳು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಕೊಡಗಿನಲ್ಲಿ ಡಿಪೋ ಮ್ಯಾನೇಜರ್‌ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

By

Land Dispute
Koo

ಚಿಕ್ಕಬಳ್ಳಾಪುರ: ಜಮೀನು ವಿವಾದ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ (Land Dispute) ನಡೆದಿದೆ. ಎರಡು ಗುಂಪುಗಳು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಿಮರದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗಲಾಟೆಯಲ್ಲಿ ಅಂಗವಿಕಲ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗ್ರಾಮದ ಕೆಂಪರಾಜು ಎಂಬಾತ ಶಕುಂತಲಮ್ಮ, ನಾರಾಯಣಪ್ಪ ಎಂಬುವವರ ಮೇಲೆ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿದ್ದಾರೆ. ಗ್ರಾಮದ ಸರ್ವೇ ನಂ 87/p3 ಪೈಕಿ ಎರಡು ಎಕರೆ ಜಮೀನಿಗಾಗಿ ಗಲಾಟೆ ನಡೆದಿದೆ.

ಶಕುಂತಲಮ್ಮ ಹಾಗೂ ನಾರಾಯಣಪ್ಪ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಡೆದಾಟ ಬಡಿದಾಟದ ವಿಡಿಯೊವನ್ನು ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: Inspector Abscond: ಕಳ್ಳರಿಂದ ಸೀಜ್‌ ಮಾಡಿದ ₹72 ಲಕ್ಷ ಗುಳುಂ ಮಾಡಿ ಇನ್‌ಸ್ಪೆಕ್ಟರ್‌ ನಾಪತ್ತೆ!

ಕೆಎಸ್‌ಆರ್‌ಟಿಸಿ ಚಾಲಕರನ್ನೇ ಗುಜರಿ ಎಂದರಾ ಡಿಪೋ ಮ್ಯಾನೇಜರ್?

ಮಡಿಕೇರಿ ಡಿಪೋ ಮ್ಯಾನೇಜರ್‌ದು ಎನ್ನಲಾದ ಆಡಿಯೊವೊಂದು ವೈರಲ್‌ ಆಗಿದೆ. ಕೆಎಸ್‌ಆರ್‌ಟಿಸಿ ಚಾಲಕರನ್ನೇ ಗುಜರಿ ಎಂದಿರುವ ಆಡಿಯೊವೊಂದು ವೈರಲ್‌ ಆಗಿದೆ. ಕೊಡಗಿನ ಗ್ರಾಮೀಣ ಭಾಗಕ್ಕೆ ತೆರಳಿದ್ದ ಬಸ್‌ವೊಂದು ಮಾರ್ಗ ಮಧ್ಯೆ ದುರಸ್ತಿ‌ ಆಗಿತ್ತು.

ಮುಂದೆ ಚಲಿಸದೇ ರಸ್ತೆಯಲ್ಲೇ ನಿಂತಿದ್ದ ಬಸ್‌ನಿಂದ ಪ್ರಯಾಣಿಕರು ಹೈರಾಣಾಗಿದ್ದರು. ಈ ವೇಳೆ ಡಿಪೋ ಮ್ಯಾನೇಜರ್‌ಗೆ ಕರೆ ಮಾಡಿದ ಪ್ರಯಾಣಿಕರು, ಗ್ರಾಮೀಣ ರಸ್ತೆಗೆ ಗುಜರಿ ಬಸ್ ಕಳಿಸಿದೀರಾ ಎಂದು ಆಕ್ರೋಶ ಹೊರಹಾಕಿದ್ದರು. ಈ ವೇಳೆ ಡಿಪೋ ಮ್ಯಾನೇಜರ್‌, ಬಸ್ ಅಲ್ಲ ಗುಜರಿ, ಚಾಲಕನೇ ಗುಜರಿ ಎಂದಿದ್ದಾರೆ. ಡಿಪೋ ಮ್ಯಾನೇಜರ್‌ನ ಉಡಾಫೆ ಉತ್ತರಕ್ಕೆ ಪ್ರಯಾಣಿಕರು ಕಿಡಿಕಾರಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತ ಆಡಿಯೋ ವೈರಲ್‌ ಆಗಿದ್ದು, ಚಾಲಕರನ್ನು ಕೀಳಾಗಿ ಜರಿದ ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶಗಳು ಕೇಳಿ ಬಂದಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Inspector Abscond: ಕಳ್ಳರಿಂದ ಸೀಜ್‌ ಮಾಡಿದ ₹72 ಲಕ್ಷ ಗುಳುಂ ಮಾಡಿ ಇನ್‌ಸ್ಪೆಕ್ಟರ್‌ ನಾಪತ್ತೆ!

Inspector Abscond: ಕರ್ತವ್ಯದ ವೇಳೆ ಕಳ್ಳತನ ಪ್ರಕರಣವೊಂದರಲ್ಲಿ ಶಂಕರ್ ನಾಯ್ಕ್ ₹72 ಲಕ್ಷ ಜಪ್ತಿ ಮಾಡಿದ್ದರು. ಈ ಹಣವನ್ನು ಸರ್ಕಾರದ ಖಜಾನೆ ಅಥವಾ ಠಾಣೆಯ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಸಿಕೊಂಡ ಆರೋಪವಿದೆ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ಹಾಗೂ ಮಧ್ಯವರ್ತಿ ಲೋಕನಾಥ್ ವಿರುದ್ಧ ಕೇಸ್ ದಾಖಲಾಗಿತ್ತು.

VISTARANEWS.COM


on

police inspector abscond
Koo

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ (Theft Case) ಮುಟ್ಟುಗೋಲು (Seize) ಹಾಕಿಕೊಂಡಿದ್ದ ಹಣವನ್ನು ದುರ್ಬಳಕೆ (misuse) ಮಾಡಿದ ಆರೋಪ ಹೊತ್ತಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಪತ್ತೆ (Police inspector abscond) ಯಾಗಿದ್ದು, ಸಿಸಿಬಿ ಪೊಲೀಸರಿಂದ (CCB police) ಶೋಧ ನಡೆಯುತ್ತಿದೆ. ಬಿಡದಿ ಠಾಣೆಯಿಂದ ಪರಾರಿಯಾಗಿರುವ ಇನ್‌ಸ್ಪೆಕ್ಟರ್‌ ಶಂಕರ್ ನಾಯ್ಕ್ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದು, ಹತ್ತು ದಿನಗಳಿಂದ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಕರ್ತವ್ಯದ ವೇಳೆ ಕಳ್ಳತನ ಪ್ರಕರಣವೊಂದರಲ್ಲಿ ಶಂಕರ್ ನಾಯ್ಕ್ ₹72 ಲಕ್ಷ ಜಪ್ತಿ ಮಾಡಿದ್ದರು. ಈ ಹಣವನ್ನು ಸರ್ಕಾರದ ಖಜಾನೆ ಅಥವಾ ಠಾಣೆಯ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಸಿಕೊಂಡ ಆರೋಪವಿದೆ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ಹಾಗೂ ಮಧ್ಯವರ್ತಿ ಲೋಕನಾಥ್ ವಿರುದ್ಧ ಕೇಸ್ ದಾಖಲಾಗಿತ್ತು. ಎಸಿಪಿ ಭರತ್ ರೆಡ್ಡಿ ದೂರು ಆಧರಿಸಿ FIR ದಾಖಲಾಗಿತ್ತು.

2023ರ ನವೆಂಬರ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಕಮಿಷನರ್ ಸಿಸಿಬಿಗೆ ವಹಿಸಿಸಲಾಗಿತ್ತು. ಪ್ರಕರಣ ರದ್ದು ಕೋರಿ ಶಂಕರ್‌ ನಾಯ್ಕ್‌ ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆ ನೀಡಿತ್ತು. ಆದರೆ ತಡೆಯಾಜ್ಞೆ ತೆರವುಗೊಳಿಸುವಂತೆ ಸಿಸಿಬಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯನ್ನು ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ತಡೆಯಾಜ್ಞೆ ತೆರವುಗೊಳಿಸುತ್ತಿದ್ದಂತೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ನಾಪತ್ತೆಯಾಗಿದ್ದಾರೆ.

ಶಿಕ್ಷಕಿಯ ಹತ್ಯೆ ಮಾಡಿ ತಿರುಪತಿಯಲ್ಲಿ ತಲೆಮರೆಸಿಕೊಂಡವರ ಸೆರೆ

ಕೋಲಾರ: ಮನೆಗೆ ನುಗ್ಗಿ ಶಿಕ್ಷಕಿಯ ಕೊಲೆ (Teacher Murder Case) ಮಾಡಿದ ಪ್ರಕರಣದಲ್ಲಿ ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದ ಆರು ಮಂದಿಯನ್ನು ಕೋಲಾರ ಪೊಲೀಸರು (Kolar news) ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಸುಂಕ ಲೇಔಟ್ ಬಡಾವಣೆಯಲ್ಲಿ ಕೊಲೆ ಪ್ರಕರಣ ನಡೆದಿತ್ತು. ಆಗಸ್ಟ್ 14ರ ಸಂಜೆ ದಿವ್ಯಶ್ರೀ (43) ಎಂಬ ಶಿಕ್ಷಕಿಯನ್ನು ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದ ಆರೋಪಿಗಳು ಆಂಧ್ರಪ್ರದೇಶದ ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳನ್ನು ಭುವನ್‌ ಪತ್ರಹಳ್ಳಿ, ರಂಜಿತ್‌ ಮುಳಬಾಗಿಲು, ಶಹೀದ್‌ ನಂಗಲಿ, ರಾಹುಲ್‌ ಮಲ್ಲೇಕುಪ್ಪ, ಭರತ್‌ ಗುಮ್ಮಕಲ್‌, ಯಶ್ವಂತ್‌ ಮಲ್ಲೇಕುಪ್ಪ ಎಂದು ಗುರುತಿಸಲಾಗಿದೆ.

ದಿವ್ಯಶ್ರೀ ಅವರ ಗಂಡನ ಫೈನಾನ್ಸ್‌ ವ್ಯವಹಾರಕ್ಕೆ ಸಂಬಂಧಿಸಿ ಚಿಂತಾಮಣಿಯಲ್ಲಿರುವ ಜಮೀನಿನ ವ್ಯಾಜ್ಯದ ವಿಚಾರದಲ್ಲಿ ಕೊಲೆ ನಡೆದಿದೆ. ಕೊಲೆಗಾಗಿ ಸುಪಾರಿ ನೀಡಿದ ಆರೋಪಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳಲ್ಲಿ ಅಪ್ರಾಪ್ತ ವಯಸ್ಕರೂ ಇದ್ದು, ಮಾದಕ ದ್ರವ್ಯವ ವ್ಯಸನಿಗಳಾದ ಇವರು ಚಿಲ್ಲರೆ ಕಾಸಿಗಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಮುಳಬಾಗಿಲು ಪೊಲೀಸರಿಂದ ವಿಚಾರಣೆ ಮುಂದುವರಿದಿದೆ.

ಪ್ರಕರಣದ ವಿವರ

ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದು, ಇವರ ಪತಿ ಪದ್ಮನಾಭ ಶೆಟ್ಟಿ ಅಗರಬತ್ತಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ಇವರ ಮತ್ತೊಬ್ಬ ಮಗ ಪ್ರೇಮ್‌ ವಿದ್ಯಾಭ್ಯಾಸದ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಪತಿ ಹೊರಗೆ ಹೋಗಿದ್ದು, ಮನೆಯಲ್ಲಿ ದಿವ್ಯಶ್ರೀ ಹಾಗೂ ಪುತ್ರಿ ನಿಶಾ ಮಾತ್ರ ಇದ್ದಾಗ ಪಾತಕ ನಡೆದಿದೆ.

ನಿಶಾ ನಿನ್ನೆ ಸಂಜೆ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಓದುತ್ತಿದ್ದಳು. ನೆಲ ಮಾಳಿಗೆಯಲ್ಲಿ ದಿವ್ಯಶ್ರೀ ಅವರು ರಾತ್ರಿ 7.30ರ ಸುಮಾರಿನಲ್ಲಿ ಟಿವಿ ವೀಕ್ಷಿಸುತ್ತ ಕುಳಿತಿದ್ದರು. ಆ ವೇಳೆ ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಚಾಕುವಿನಿಂದ ದಿವ್ಯಶ್ರೀ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮನೆಯೊಳಗೆ ಏನೋ ಗಲಾಟೆಯಾಗುತ್ತಿದೆ ಎಂದು ನಿಶಾ ಕೆಳಗೆ ಇಳಿದು ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಇದ್ದದ್ದು ಕಂಡು ಚೀರಾಡಿದ್ದಾರೆ. ನೆರೆಹೊರೆಯವರು ಏನಾಯಿತೆಂದು ಇವರ ಮನೆಗೆ ಬಂದು ನೋಡಿ ತಕ್ಷಣ ರಕ್ತದ ಮಡುವಿನಲ್ಲಿ ಬಿದಿದ್ದ ದಿವ್ಯಶ್ರೀ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜನಭರಿತ ಈ ಬಡಾವಣೆಯಲ್ಲಿ ಶಿಕ್ಷಕಿಯ ಕೊಲೆ ನಡೆದಿರುವುದು ಕಂಡು ಆತಂಕಗೊಂಡ ಸುತ್ತಮುತ್ತಲ ನಿವಾಸಿಗಳು ಭಯಭೀತರಾಗಿದ್ದಾರೆ.

ಇದನ್ನೂ ಓದಿ: Food Poison: ಊಟ ಮಾಡುವಾಗ ಇಲಿ ವಿಷ ಸಿಂಪಡಣೆ, ವಿದ್ಯಾರ್ಥಿಗಳು ಅಸ್ವಸ್ಥ

Continue Reading

ವೈರಲ್ ನ್ಯೂಸ್

Viral Video: ದೇವಸ್ಥಾನದಿಂದ ಬರ್ತಿದ್ದ ಪುರೋಹಿತರ ಮೇಲೆ ಚಾಕು, ದೊಣ್ಣೆಯಿಂದ ಡೆಡ್ಲಿ ಅಟ್ಯಾಕ್‌! ವಿಡಿಯೋ ಇದೆ

Viral Video: ಆ.17ರಂದು ಈ ಭೀಕರ ಘಟನೆ ನಡೆದಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಅರ್ಚಕರು ದೇವಸ್ಥಾನದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ಚಾಕುವಿನಿಂದ ಇರಿದಿದೆ. ಗುಂಪು ಗುಂಪುಗಳಾಗಿ ಪುರೋಹಿತರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿದ್ದ ಒಬ್ಬ ಪುರೋಹಿತ ರಸ್ತೆಯಲ್ಲಿ ಬಿದ್ದ ಸ್ಕೂಟರ್‌ನ ಹತ್ತಿರ ನಿಂತಿರುವುದು ಕಂಡುಬಂದರೆ, ಮತ್ತೊಬ್ಬ ಬಿಳಿಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹಲ್ಲೆ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಮುಂಬೈ: ದೇವಸ್ಥಾನದಿಂದ ಪೂಜೆ ಮುಗಿಸಿ ಹಿಂದಿರುಗುತ್ತಿದ್ದ ಹಿಂದೂ ಪುರೋಹಿತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ(Priests attacked) ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿನ ಲಾಲ್ಜಿಪಾಡಾದ ಕಾಂದಿವಲಿಯಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಜನನಿಬಿಡ ರಸ್ತೆಯಲ್ಲಿ ಚಾಕು ಮತ್ತು ಕೋಲುಗಳಿಂದ ಶಸ್ತ್ರಸಜ್ಜಿತವಾದ ಗುಂಪೊಂದು ಇಬ್ಬರು ಹಿಂದೂ ಪುರೋಹಿತರ ಮೇಲೆ ಹಲ್ಲೆ ನಡೆಸಿದೆ. ಈ ಆಘಾತಕಾರಿ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಆ.17ರಂದು ಈ ಭೀಕರ ಘಟನೆ ನಡೆದಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಅರ್ಚಕರು ದೇವಸ್ಥಾನದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ಚಾಕುವಿನಿಂದ ಇರಿದಿದೆ. ಗುಂಪು ಗುಂಪುಗಳಾಗಿ ಪುರೋಹಿತರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿದ್ದ ಒಬ್ಬ ಪುರೋಹಿತ ರಸ್ತೆಯಲ್ಲಿ ಬಿದ್ದ ಸ್ಕೂಟರ್‌ನ ಹತ್ತಿರ ನಿಂತಿರುವುದು ಕಂಡುಬಂದರೆ, ಮತ್ತೊಬ್ಬ ಬಿಳಿಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹಲ್ಲೆ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಒಬ್ಬ ವ್ಯಕ್ತಿಯು ಚಾಕುವನ್ನು ಹಿಡಿದಿರುವುದು ಕಂಡುಬರುತ್ತದೆ, ಇತರರು ತಮ್ಮ ಕೈಯಲ್ಲಿ ಕೋಲುಗಳನ್ನು ಹಿಡಿದಿರುವುದು ಕಂಡುಬರುತ್ತದೆ. ಆದರೆ, ದಾಳಿಯ ಹಿಂದಿನ ಕಾರಣ ತಿಳಿದುಬಂದಿಲ್ಲ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ದಾಳಿಯಲ್ಲಿ ಕನಿಷ್ಠ 5 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಅರ್ಚಕರ ಮೇಲಿನ ಅಮಾನುಷ ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ(Uttar Pradesh)ದ ಲಕ್ನೋದಲ್ಲಿ ಸಾಧುಗಳಂತೆ ನಟಿಸಿ ಜನರ ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ದೋಚುತ್ತಿದ್ದ ನಾಲ್ವರು ಯುವಕರನ್ನು ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ್ದಾರೆ. ನಾಲ್ವರನ್ನು ದೈಹಿಕವಾಗಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದ್ದು, ಈ ಘಟನೆಯ ವಿಡಿಯೋದಲ್ಲಿ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಸಾಧುಗಳ ವೇಷ ಧರಿಸಿದ ಪುರುಷರು ಮಹುರಕಲಾ ಗ್ರಾಮದ ಅಂಗಡಿಯೊಂದಕ್ಕೆ ಭೇಟಿ ನೀಡಿದಾಗ ಗಲಾಟೆ ಶುರುವಾಗಿತ್ತು. ಅಂಗಡಿಯವನಿಗೆ ತಿಲಕವನ್ನು ಹಚ್ಚಿ, ಪ್ರಸಾದವನ್ನು ಕೊಡುವ ಮೊದಲು 1,100 ರೂಪಾಯಿಗಳನ್ನು ಕೊಡುವಂತೆ ಮನವೊಲಿಸಿದರು. ಒಮ್ಮೆ ಅಂಗಡಿಯವನು ಪ್ರಜ್ಞಾಹೀನನಾಗಿ ಬಿದ್ದಾಗ, ಖದೀಮರು ಪರಾರಿಯಾಗುವ ಮೊದಲು ಅಂಗಡಿಯಲ್ಲಿದ್ದ ಮೂರು ಗೋಣಿ ಸಾಸಿವೆ ಮತ್ತು ಹಣವನ್ನು ಕದ್ದೊಯ್ದಿದ್ದರು.

ಇದನ್ನೂ ಓದಿ: Mistaken Identity | ಕಳ್ಳರೆಂದು ಭಾವಿಸಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಹೊಸಮನಿ ಹಟ್ಟಿ ಗ್ರಾಮಸ್ಥರು

Continue Reading
Advertisement
Duniya Vijay 20 crore collection till today
ಸ್ಯಾಂಡಲ್ ವುಡ್9 mins ago

Duniya Vijay: 20 ಕೋಟಿ ರೂ. ಕಲೆಕ್ಷನ್‌ ಮಾಡಿ ʻಭೀಮʼ ದಾಖಲೆ ? ಇಲ್ಲಿಯವರೆಗಿನ ಕಲೆಕ್ಷನ್‌ ಎಷ್ಟು?

assault case
ಉಡುಪಿ10 mins ago

Assault Case : ಕುಂದಾಪುರದಲ್ಲಿ ಗಾಂಜಾ ನಶೆಯಲ್ಲಿ ಝಳಪಿಸಿದ ತಲ್ವಾರ್‌; ಇಬ್ಬರು ಗಂಭೀರ

cm siddaramaiah high court
ಪ್ರಮುಖ ಸುದ್ದಿ22 mins ago

CM Siddaramaiah: ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿದ ಸಿಎಂ, ಇಂದು ಮಧ್ಯಾಹ್ನ ವಿಚಾರಣೆ

bharat bandh
ದೇಶ22 mins ago

Bharat Bandh: ಆ.21ರಂದು ಭಾರತ ಬಂದ್‌; ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಡಿಟೇಲ್ಸ್‌

Ganesh Duniya Vijay bheema and krishnam pranaya sakhi films witnesses good response
ಸ್ಯಾಂಡಲ್ ವುಡ್49 mins ago

Ganesh-Duniya Vijay: ತಮಿಳುನಾಡಿನಲ್ಲಿ ‘ಭೀಮ’, ‘ಕೃಷ್ಣಂ ಪ್ರಣಯಸಖಿ’ ಹೌಸ್‌ಫುಲ್!

Land Dispute
ಚಿಕ್ಕಬಳ್ಳಾಪುರ51 mins ago

Land Dispute : ಜಮೀನು ವಿವಾದಕ್ಕೆ ದೊಣ್ಣೆಗಳಿಂದ ಬಡಿದಾಡಿಕೊಂಡ ಗುಂಪುಗಳು

police inspector abscond
ಕ್ರೈಂ1 hour ago

Inspector Abscond: ಕಳ್ಳರಿಂದ ಸೀಜ್‌ ಮಾಡಿದ ₹72 ಲಕ್ಷ ಗುಳುಂ ಮಾಡಿ ಇನ್‌ಸ್ಪೆಕ್ಟರ್‌ ನಾಪತ್ತೆ!

Stree 2 Box Office Day 4 Rajkummar Rao Shraddha Starrer Creates History
ಬಾಲಿವುಡ್2 hours ago

Stree 2 Box Office Day 4: 200 ಕೋಟಿ ರೂ. ಕಲೆಕ್ಷನ್‌ ಮಾಡಿ ಗೆದ್ದು ಬೀಗಿದ ‘ಸ್ತ್ರೀ 2’; ನಾಲ್ಕು ದಿನದಲ್ಲಿ ದಾಖಲೆ ಗಳಿಕೆ!

Modi Government
ದೇಶ2 hours ago

Modi Government: ಮೋದಿ ಸರ್ಕಾರ ಉರುಳಿಸೋಕೆ ಅಮೆರಿಕದ CIA ಕುತಂತ್ರ; ಬಾಪಿಸ್ಟ್‌ ಚರ್ಚ್‌, ಚಂದ್ರಬಾಬು ನಾಯ್ಡುವೇ ದಾಳ

physical abuse hsr layout
ಕ್ರೈಂ2 hours ago

Physical Abuse: ಪಾರ್ಟಿ ಮುಗಿಸಿ ಲಿಫ್ಟ್‌ ಕೇಳಿದ ಯುವತಿಯ ಮೇಲೆರಗಿದ ಕಾಮುಕನ ಬಂಧನ; ಸಂತ್ರಸ್ತೆಯ ಜೀವ ಉಳಿಸಿದ SOS ಬಟನ್!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌