Site icon Vistara News

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Lovers Fighting

ಚಿಕ್ಕಬಳ್ಳಾಪುರ: ಪ್ರಿಯಕರನೊಬ್ಬ ಪ್ರೀತಿಸುವ ನಾಟಕವಾಡಿ ಏಳು ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟಿರುವ (Lovers Fighting) ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದಿದೆ. ನಡುರಸ್ತೆಯಲ್ಲೇ ಪ್ರೇಮಿಗಳು ರಂಪಾಟ ನಡೆಸಿದ್ದು, ಬಳಿಕ ಪರಿಸ್ಥಿತಿ ಹೊಡೆದಾಟ ಬಡೆದಾಟಕ್ಕೂ (Cheating Case) ಹೋಗಿದೆ. ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರ ಗ್ರಾಮದ ನಿವಾಸಿಗಳಾದ ಸೂರ್ಯಪ್ರಕಾಶ್‌, ಗಗನ ಎಂಬುವವರ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಸೂರ್ಯಪ್ರಕಾಶ ಹಾಗೂ ಗಗನ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಗಗನ ಯಾವಾಗ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಳೋ ಆಗ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಸೂರ್ಯಪ್ರಕಾಶ್ ಮದುವೆಯನ್ನು ನಿರಾಕರಿಸಿದಾಗ ಆತನ ವಿರುದ್ಧ ಗಗನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರು ದಾಖಲಾಗುತ್ತಿದ್ದಂತೆ ಸೂರ್ಯ ಪ್ರಕಾಶ್‌ ಪೋಷಕರು ಮದುವೆ ಮಾಡಿಸುವುದಾಗಿ ನಂಬಿಸಿ ಬೇಲ್ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಬೇಲ್ ಪಡೆದ ಬಳಿಕ ಪ್ರಿಯಕರನ ಪೋಷಕರು ಉಲ್ಟಾ ಹೊಡೆದಿದ್ದರು. ಇದರಿಂದ ರೋಸಿ ಹೋದ ಗಗನ ಮದುವೆಯಾಗುವಂತೆ ಸೂರ್ಯನನ್ನು ನಡುಬೀದಿಯಲ್ಲಿ ನಿಲ್ಲಿಸಿದ್ದಳು. ಪ್ರೇಮಿಗಳ ನಡುವಿನ ಮಾತಿನ ಚಕಮಕಿ ಹಾಗೂ ಪರಸ್ಪರ ಹೊಡೆದಾಟ ಬಡೆದಾಟವನ್ನು ಸ್ಥಳೀಯರು ವಿಡಿಯೊ ಮಾಡಿಕೊಂಡಿದ್ದರು.

ಠಾಣೆ ಮೆಟ್ಟಿಲೇರಿದ್ದ ಯುವತಿ

ಪ್ರೀತಿ ಹೆಸರಲ್ಲಿ ತನ್ನನ್ನು ಗರ್ಭಿಣಿ (Pregnant) ಮಾಡಿ ವಂಚಿಸಿ (Fraud Case) ಪ್ರಿಯಕರ ಪರಾರಿಯಾಗಿದ್ದಾನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗಗನ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ಆಕೆ ಗರ್ಭಿಣಿ ಆಗಿದ್ದು, ಪ್ರಿಯಕರನನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಕಾಲೇಜಿನಲ್ಲಿ ಓದುವಾಗಲೇ ಈ ಜೋಡಿ ಪರಸ್ಪರ ಪ್ರೀತಿಸಿದ್ದರು. ತನ್ನನ್ನು ವಿವಾಹ ಆಗುವುದಾಗಿ ನಂಬಿಸಿ ತನ್ನನ್ನು ಬಳಸಿಕೊಂಡಿದ್ದು, ಇದೀಗ ತಾನು ಗರ್ಭಿಣಿಯಾಗಿದ್ದೇನೆ. ಆತನನ್ನು ಹುಡುಕಿಕೊಡಿ ಎಂದು ಗಗನ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಳು. ಆದರೆ ಹೀಗೆ ಪೊಲೀಸರಿಗೆ ಲಾಕ್‌ ಆಗಿದ್ದ ಸೂರ್ಯ ಮದುವೆ ಆಗುವುದಾಗಿ ಹೇಳಿ ಮತ್ತೆ ಕೈಕೊಟ್ಟಿದ್ದಾನೆ.

ಇದನ್ನೂ ಓದಿ: Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಧಾರವಾಡದಲ್ಲಿ ತಂದೆಯನ್ನು ಹುಡುಕಿಕೊಡುವಂತೆ ಮಗನ ಅಳಲು

ತಂದೆಯನ್ನು ಹುಡುಕಿಕೊಡುವಂತೆ ಮಗನೊಬ್ಬ ಎಸ್‌ಪಿ ಕಚೇರಿಗೆ ಆಗಮಿಸಿದ್ದಾನೆ. ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮದ ದ್ಯಾಮಪ್ಪ ಹಡಪದ ಕಳೆದ ಮೇ 19ರಂದು ಏಕಾಏಕಿ ಕಾಣೆಯಾಗಿದ್ದರಿ. ಕಳೆದ 50 ದಿನಗಳಿಂದ ತಂದೆ ಕಾಣುತ್ತಿಲ್ಲ ಎಂದು ಮಗ ಪ್ರವೀಣ್‌ ಅಳಲು ತೊಡಿಕೊಂಡಿದ್ದಾರೆ. ಧಾರವಾಡ ಎಸ್‌ಪಿ ಕಚೇರಿಗೆ ಆಗಮಿಸಿ ತಂದೆಯನ್ನು ಹುಡುಕಿಕೊಡುವಂತೆ ಪ್ರವೀಣ್ ಮನವಿ ಮಾಡಿದ್ದಾರೆ. ನಮ್ಮ ತಂದೆಗೆ ಏನಾಗಿದೆ ಅಂತಲೇ ಗೊತ್ತಿಲ್ಲ, ಅವರನ್ನ ಹುಡುಕಿಕೊಡಿ ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version