ಚಿಕ್ಕಬಳ್ಳಾಪುರ: ಪತಿಯ ಸಾವಿನಿಂದ ನೊಂದ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ವಿಷ ಸೇವನೆ ಮಾಡಿ ಆತ್ಮಹತ್ಯಗೆ ಯತ್ನಿಸಿದ್ದಾರೆ. ತಾಯಿ ಹಾಗೂ ಒಂದು ಮಗು ಬದುಕುಳಿದಿದ್ದು, ಇನ್ನೊಂದು ಮಗು ಮೃತಪಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಆಂಜನೇಯಸ್ವಾಮಿ ದೇವಸ್ಥಾನದ ನದಿಗಡ್ಡೆ ಬಳಿ ಘಟನೆ ನಡೆದಿದೆ. ಗಾಯತ್ರಿ ಎಂಬ ಮಹಿಳೆ ಹೀಗೆ ಆತ್ಮಹತ್ಯೆಗೆ ಯತ್ನಿಸಿದವರು. ಅವರ ಪತಿ ನಾಗೇಶ್ ಇದೇ ತಿಂಗಳಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಇದರಿಂದ ನೊಂದಿದ್ದ ಗಾಯತ್ರಿ, ಇಬ್ಬರು ಮಕ್ಕಳಿಗೆ ವಿಷ ತಿನ್ನಿಸಿ ತಾನೂ ಸೇವಿಸಿದ್ದಾರೆ.
ವಿಷಸೇವನೆಯಿಂದ ಎರಡು ವರ್ಷದ ಮಗ ಗಗನ್ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ತಾಯಿಗಾಯತ್ರಿ ಹಾಗೂ ಮಗಳು ಲಹರಿಯನ್ನು ವಾಣಿವಿಲಾಸ್ ಆಸ್ಪತ್ರೆಗೆಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗುವಿಗೆ ವಿಷ ಉಣಿಸಿದ ತಾಯಿ ಮೇಲೆ ಕೊಲೆ ಆರೋಪ ದಾಖಲಾಗಿದೆ. ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಮೆ ಹಣ ದುರ್ಬಳಕೆ, ಗ್ರಾಮಾಧಿಕಾರಿಗಳ ಸಸ್ಪೆಂಡ್
ಚಿತ್ರದುರ್ಗ: ಬೆಳೆ ವಿಮೆ ಹಣ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಗ್ರಾಮ ಆಡಳಿತಾಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಚಿತ್ರದುರ್ಗ ಡಿಸಿ ದಿವ್ಯಪ್ರಭು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮುಮ್ತಾಜ್ ಉನ್ನೀಸಾ & ಸಿರಾಜ್ ಉಲ್ ಹುಸೇಲ್ ಇಬ್ಬರು ಅಮಾನತುಗೊಂಡವರು. ಬೆಳೆ ಪರಿಹಾರ ಹಣ ದುರ್ಬಳಕೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಚಿತ್ರದುರ್ಗ AC & ತಹಶಿಲ್ದಾರ್ ವರದಿ ನೀಡಿದ್ದರು.
ಇದೇ ಪ್ರಕರಣದಲ್ಲಿ ಚಳ್ಳಕೆರೆಯ ಹಿಂದಿನ ತಹಶಿಲ್ದಾರ್ ಎನ್.ರಘುಮೂರ್ತಿ, ಕಂಪ್ಯೂಟರ್ ಆಪರೇಟರ್ ಸೇರಿ 6 ಮಂದಿ ವಿರುದ್ದ FIR ದಾಖಲಿಸಲಾಗಿದೆ. 20 ಲಕ್ಷದ 49 ಸಾವಿರ ಹಣ ದುರ್ಬಳಕೆ ಮಾಡಿರುವ ಆರೋಪವಿದ್ದು, ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Rain News: ಚಿತ್ತಾಪುರದಲ್ಲಿ ಸಿಡಿಲು ಬಡಿದು ಯುವಕ ಸಾವು, 6 ಮಂದಿಗೆ ಗಂಭೀರ ಗಾಯ