ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರದಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಶ್ರೀನಿವಾಸ ಸಾಗರದ ಮಂಭಾಗದ ಹೊಂಡದಲ್ಲಿ ಈಜಲು ಹೋಗಿದ್ದಾಗ ವೈದ್ಯಕೀಯ ವಿದ್ಯಾರ್ಥಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಯುವಕ ಕೂಡ ನೀರುಪಾಲಾಗಿದ್ದಾನೆ.
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಚ್ಚಿದಾನಂದ ಬಾಬು(19), ಗೌರಿಬಿದನೂರು ತಾಲೂಕು ರಾಮಚಂದ್ರಪುರ ಗ್ರಾಮದ ನರೇಶ್ ಬಾಬು ಮೃತರು. ಹೊಂಡದಲ್ಲಿ ಈಜಲು ಹೋಗಿದ್ದಾಗ ಸಚ್ಚಿದಾನಂದ ಬಾಬು ಮುಳುಗಿದ್ದಾನೆ. ಆತನನ್ನು ರಕ್ಷಸಲು ಹೋದ ನರೇಶ್ ಬಾಬು ಕೂಡ ಮುಳುಗಿ ಇಬ್ಬರೂ ನೀರು ಪಾಲಾಗಿದ್ದಾರೆ.
ನೀರಿನಲ್ಲಿ ಮೃತದೇಹಗಳಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Rain News | ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಇಬ್ಬರು ಸಾವು